ದುಬಾೖಗೆ ಕಲಿಯಲು ತೆರಳಿದ್ದ ಉಡುಪಿ ವಿದ್ಯಾರ್ಥಿ ಸಾವು
Team Udayavani, Dec 6, 2022, 7:05 AM IST
ಉಡುಪಿ: ಪದವಿ ಶಿಕ್ಷಣ ಕಲಿಯಲೆಂದು ದುಬಾೖಗೆ ತೆರಳಿದ್ದ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ವಿದ್ಯಾರ್ಥಿಯೋರ್ವ ಅನಾರೋಗ ಕ್ಕೀಡಾಗಿ ಡಿ. 5ರಂದು ಮೃತಪಟ್ಟಿದ್ದಾರೆ.
ಕಾಪು ತಾಲೂಕಿನ ಅಹ್ಮದ್ ಬಿಲಾಲ್ ಕಾಪು (20) ಮೃತರು. ಉಡುಪಿಯಲ್ಲಿ ದ್ವಿತೀಯ ಪಿಯುಸಿ ಮುಗಿಸಿ ದುಬಾೖಗೆ ತೆರಳಿದ್ದ ಬಿಲಾಲ್ , ಪದವಿ ಶಿಕ್ಷಣವನ್ನು ಗಳಿಸುವ ಉದ್ದೇಶದಿಂದ ತೆರಳಿದ್ದರು. ಆದರೆ ಆ ಬಳಿಕ ಜ್ವರಕ್ಕೆ ತುತ್ತಾಗಿದ್ದರು.
ನ್ಯುಮೋನಿಯಾ ಕೂಡ ಕಾಡಿದ್ದರಿಂದ ಚಿಕಿತ್ಸೆಗಾಗಿ ಶಾರ್ಜಾ ದಲ್ಲಿರುವ ಕುವೈಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 20 ದಿನಗಳಿಂದ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಡಿ. 5ರಂದು ನಿಧನರಾದರು ಎಂದು ತಿಳಿದುಬಂದಿದೆ.
ಬಿಲಾಲ್ ತಂದೆ 35 ವರ್ಷಗಳಿಂದ ದುಬಾೖಯಲ್ಲಿ ಅನಿವಾಸಿ ಭಾರತೀಯ ನಾಗಿ ದುಡಿಯುತ್ತಿದ್ದ ಹಿನ್ನೆಲೆಯಲ್ಲಿ, ಪದವಿ ಶಿಕ್ಷಣ ಕಲಿಯಲು ಬಿಲಾಲ್ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ದುಬಾೖಗೆ ತೆರಳಿದ್ದರು. ಕೆಲವು ದಿನಗಳ ಹಿಂದೆ ದಿಢೀರ್‌ಅನಾರೋಗ್ಯಕ್ಕೀಡಾಗಿ ನಿಧನರಾದರು.
ಮೃತದೇಹದ ಅಂತ್ಯ ಸಂಸ್ಕಾರವು ದುಬಾೖಯ ಅಲ್ಕೂಝ್ ಮಸೀದಿಯಲ್ಲಿ ಸೋಮವಾರ ರಾತ್ರಿ ನಡೆಯಿತು.
ದುಬಾೖಗೆ ತೆರಳಿದ ಕುಟುಂಬ
ಸದ್ಯ ಬಿಲಾಲ್ ಕುಟುಂಬ ದುಬಾೖನಲ್ಲಿದೆ ಎಂದು ಬಿಲಾಲ್ ಸಂಬಂಧಿ ಆಸಿಫ್ ಉಚ್ಚಿಲ ಮಾಹಿತಿ ನೀಡಿದ್ದಾರೆ.
ತಂದೆ ಅಬ್ದುಸ್ಸಲಾಂ ಸೂರಿಂಜೆ, ತಾಯಿ ಝೀನತ್ ಗುರುಪುರ ಸೇರಿದಂತೆ ಇಬ್ಬರು ಸಹೋದರಿಯರು, ಒಬ್ಬ ಸಹೋದರನನ್ನು ಅವರು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ಸಕಲೇಶಪುರ: ಅಟ್ಟಾಡಿಸಿಕೊಂಡು ಬಂದ ಕಾಡಾನೆಗಳು; ಕೂದಲೆಳೆ ಅಂತರದಲ್ಲಿ ಇಟಿಎಫ್ ಸಿಬಂದಿ ಪಾರು
ಸಾಮಾಜಿಕ ಉದ್ಯಮಕ್ಕೆ ಹುಬ್ಬಳ್ಳಿ ಮಾಡೆಲ್; ದೇಶಪಾಂಡೆ ಫೌಂಡೇಶನ್ ಅಭಿವೃದ್ಧಿ ಸಂವಾದ’ ಸಮಾವೇಶ
ಆರೋಗ್ಯವೇ ಭಾಗ್ಯ…ರುಚಿಕರವಾದ ವೆಜ್ ಗೋಲ್ಡ್ ಕಾಯಿನ್ ರೆಸಿಪಿ
ಆಪ್ ಕೌನ್ಸಿಲರ್ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ ಎಂದ ಕೇಜ್ರಿವಾಲ್
ಅಜ್ಮೀರ್ ದರ್ಗಾ: ಗಂಗಾವತಿ ಕಾಂಗ್ರೆಸ್ ಮುಖಂಡರಿಂದ ಹೂ-ಚಾದರ್ ಸಲ್ಲಿಕೆ