ಉದ್ಯಾವರ: ಅಗ್ನಿ ಆಕಸ್ಮಿಕ

Team Udayavani, May 15, 2019, 6:10 AM IST

ಕಟಪಾಡಿ: ಉದ್ಯಾವರ ಪಿತ್ರೋಡಿಯ ಗೋವಿಂದರಗುಡ್ಡೆ ಎಂಬಲ್ಲಿನ ಗದ್ದೆಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಆಕಸ್ಮಿಕ ಅಗ್ನಿ ಅನಾಹುತ ಸಂಭವಿಸಿದ್ದು, ಉಡುಪಿ ಜಿಲ್ಲಾ ಅಗ್ನಿಶಾಮಕ ದಳವು ಸ್ಥಳಕ್ಕಾಗಮಿಸಿ ತಡರಾತ್ರಿ ಆಗಮಿಸಿ ಬೆಂಕಿಯನ್ನು ತಹಬಂದಿಗೆ ತಂದಿದ್ದು, ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ಹತೋಟಿಗೆ ತಂದಿದ್ದಾರೆ.

ಸೋಮವಾರ ರಾತ್ರಿಯಾ ಗುತ್ತಿದ್ದಂತೆಯೇ ಈ ಭಾಗ ದಲ್ಲಿ ಸಣ್ಣ ಪ್ರಮಾಣದಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಸ್ಥಳೀಯರು ಅಗ್ನಿಶಾಮಕ ಕಚೇರಿಗೆ ಫೋನಾಯಿಸಿದಾಗ ನೀರು ತುಂಬಲು ವಾಹನ ತೆರಳಿದ್ದು, ಮತ್ತೂಂದು ವಾಹನವು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಆಗಮನದ ನಿಮಿತ್ತ ಕರ್ತವ್ಯಕ್ಕೆ ತೆರಳಿದೆ ಎಂಬಿತ್ಯಾದಿ ಸಬೂಬು ಹೇಳಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದು, ಅಗ್ನಿಶಾಮಕ ದಳ ಬಹಳಷ್ಟು ತಡವಾಗಿ ತಡರಾತ್ರಿ 10 ಗಂಟೆಯ ಸುಮಾರಿಗೆ ಸ್ಥಳಕ್ಕಾಗಮಿಸಿದೆ ಎಂದು ಆರೋಪಿಸುತ್ತಿದ್ದು, ಇದರಿಂದಾಗಿ ಹೆಚ್ಚಿನ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿತ್ತು ಎನ್ನುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ