ಬಜಗೋಳಿ ಪೇಟೆ: ಅವೈಜ್ಞಾನಿಕ ರಸ್ತೆ ವಿಭಾಜಕ


Team Udayavani, Oct 22, 2019, 5:30 AM IST

2010PALLI01A

ಬಜಗೋಳಿ: ಬೆಳೆಯುತ್ತಿರುವ ಬಜಗೋಳಿ ಪೇಟೆಯಲ್ಲಿ ಅವೈಜ್ಞಾನಿಕ ರಸ್ತೆ ವಿಭಾಜಕದಿಂದ ವಾಹನ ಸವಾರರು ಸಂಕಷ್ಟಕೀಡಾಗಿದ್ದಾರೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಕಾರ್ಕಳ ಬೈಪಾಸ್‌ ಬಳಿಯಿಂದ ಬಜಗೋಳಿ ಮೂಲಕ ಹೊಸ್ಮಾರುವರೆಗೆ 22 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೊಂಡಿತ್ತು. ಆ ಸಂದರ್ಭ ಬಜಗೋಳಿ ಕಂಬಳ ಕ್ರಾಸ್‌ ಬಳಿಯಿಂದ ಆರ್‌.ಕೆ. ನಗರದವರೆಗೆ ಹಾಗೂ ಬಜಗೋಳಿ ಪೇಟೆಯ ಮತ್ತೂಂದು ಪಾರ್ಶ್ವದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ರಸ್ತೆ ವಿಭಾಜಕ ಅಳವಡಿಸಲಾಗಿತ್ತು.

ಬಜಗೋಳಿ ಪೇಟೆಯ ಆರ್‌.ಕೆ. ನಗರದ ಆರಂಭದಲ್ಲಿ ರಸ್ತೆ ವಿಭಾಜಕ ನಿರ್ಮಿಸದೆ ಇರುವುದರಿಂದ ಪ್ರವಾಸಿ ವಾಹನ ಸವಾರರು ರಸ್ತೆ ವಿಭಾಜಕದ ಅರಿವಿಲ್ಲದೆ ಸಂಚರಿಸುವುದರಿಂದ ಮತ್ತೂಂದು ಪಾರ್ಶ್ವದ ರಸ್ತೆ ವಿಭಾಜಗ‌ಕ್ಕೆ ಢಿಕ್ಕಿ ಹೊಡೆಯುವಂತಾಗಿದೆ. ಮಳೆ ಸುರಿಯುವ ಸಂದರ್ಭ, ರಾತ್ರಿ ಹೊತ್ತು ವಾಹನ ಸವಾರರಿಗೆ ಇದು ಗಮನಕ್ಕೆ ಬಾರದೆ ತೊಂದರೆಯುಂಟಾಗುತ್ತಿದೆ.

ರಸ್ತೆ ಉಬ್ಬು ಅಳವಡಿಕೆ ಅಗತ್ಯ
ಶೃಂಗೇರಿ, ಧರ್ಮಸ್ಥಳ ಕಡೆಗೆ ಸಂಚರಿಸುವ ವಾಹನಗಳು ಅತಿ ವೇಗವಾಗಿ ಬಜಗೋಳಿ ಪೇಟೆಯ ಬಸ್‌ ತಂಗುದಾಣ ಮಾರ್ಗವಾಗಿಯೇ ಸಂಚರಿಸುವುದರಿಂದ ಇಲ್ಲಿ ರಸ್ತೆ ಉಬ್ಬು ಅಳವಡಿಸಬೇಕಾಗಿರುವುದು ಅತ್ಯವಶ್ಯ ಎಂಬುದು ಸ್ಥಳೀಯರ ಅಭಿಪ್ರಾಯ. ರಸ್ತೆ ದಾಟಲು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ರಸ್ತೆ ಉಬ್ಬು ನಿರ್ಮಿಸಿದಲ್ಲಿ ವೇಗಕ್ಕೆ ಕಡಿವಾಣ ಹಾಕುವುದರ ಜತೆಗೆ ಸಂಭವನೀಯ ಅವಘಡವನ್ನೂ ತಪ್ಪಿಸಬಹುದು ಎನ್ನುತ್ತಾರೆ ಸ್ಥಳೀಯರು.

ಈ ರಸ್ತೆಯಲ್ಲಿ ರಿಫ್ಲೆಕ್ಟರ್‌ ಹಾಗೂ ಯಾತ್ರಾರ್ಥಿಗಳಿಗೆ ಸೂಕ್ತ ನಿರ್ದೇಶನ ನೀಡುವ ಸೂಚನ ಫ‌ಲಕಗಳಿಲ್ಲದ ಕಾರಣ ವಾಹನ ಸವಾರರು ರಾತ್ರಿ ವೇಳೆಯಲ್ಲಿ ಗೊಂದಲಕ್ಕೆ ಈಡಾಗುವ ಘಟನೆಗಳು ನಡೆದಿವೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹ.

ದಾರಿದೀಪ ವ್ಯವಸ್ಥೆಗೆ ಕ್ರಮ
ಇತ್ತೀಚೆಗಿನ ದಿನಗಳಲ್ಲಿ ಬಜಗೋಳಿ ಪೇಟೆಯಲ್ಲಿ ಅಪಘಾತಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ರಿಫ್ಲೆಕ್ಟರ್‌ ಅಳವಡಿಸುವ ಜತೆಗೆ ಇಲಾಖೆಯ ವತಿಯಿಂದ ದಾರಿದೀಪ ವ್ಯವಸ್ಥೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಸೋಮ್‌ಶೇಖರ್‌, ಸಹಾಯಕ ಇಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕಾರ್ಕಳ

ದಾರಿ ದೀಪ ಇಲ್ಲ
ಪೇಟೆಯಲ್ಲಿರುವ ರಸ್ತೆ ವಿಭಾಜಕಕ್ಕೆ ದಾರಿದೀಪ ಅಳವಡಿಸದೆ ಇರುವುದರಿಂದ ವಾಹನ ಸವಾರರಿಗೆ ಇದರ ಅರಿಲ್ಲದೆ ನಿರಂತರ ಅವಘಡ ಸಂಭವಿಸುವಂತಾಗಿದೆ. ರಸ್ತೆ ವಿಸ್ತರಣೆ ಸಂದರ್ಭ ಇದ್ದ ಕೆಲ ದಾರಿದೀಪಗಳನ್ನು ತೆರವುಗೊಳಿಸಲಾಗಿದ್ದು, ಪೇಟೆಯ ನಡುವೆ ಹಾದುಹೋಗಿರುವ ಎಲ್ಲ ರಸ್ತೆ ವಿಭಾಜಕದ ಭಾಗಗಳಲ್ಲಿ ದಾರಿದೀಪ ಅತ್ಯವಶ್ಯಕವಾಗಿದೆ. ಅಲ್ಲದೆ ಇದಕ್ಕೆ ಬಣ್ಣ ಬಳಿಯುವುದೂ ಅತ್ಯವಶ್ಯಕ.

ರಿಫ್ಲೆಕ್ಟರ್‌ ಅಳವಡಿಸಿ
ಬಜಗೋಳಿ ಪೇಟೆಯಲ್ಲಿ ದಾರಿದೀಪದ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಇದರ ಜತೆಗೆ ರಸ್ತೆ ವಿಭಾಜಕಗಳಿಗೆ ಸೂಕ್ತ ರಿಫ್ಲೆಕ್ಟರ್‌ ಅಳವಡಿಸಿ ಅಪಘಾತ ತಪ್ಪಿಸಬಹುದಾಗಿದೆ.
-ಜಿತೇಶ್‌ ಪೂಜಾರಿ, ಬಜಗೋಳಿ

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.