Frog ಶಬ್ದ ಗ್ರಹಿಸಲು ಎಐ ಬಳಕೆ: ಕಾರ್ಕಳ ಪಶ್ಚಿಮಘಟ್ಟ ತಪ್ಪಲಿನಲ್ಲಿ ಕಪ್ಪೆ ಸಂಶೋಧನೆ

ಹವಾಮಾನ ವೈಪರೀತ್ಯದಿಂದ ಉಭಯವಾಸಿಗಳ ಮೇಲೆ ಪರಿಣಾಮ

Team Udayavani, Jun 24, 2024, 7:20 AM IST

Frog ಶಬ್ದ ಗ್ರಹಿಸಲು ಎಐ ಬಳಕೆ: ಕಾರ್ಕಳ ಪಶ್ಚಿಮಘಟ್ಟ ತಪ್ಪಲಿನಲ್ಲಿ ಕಪ್ಪೆ ಸಂಶೋಧನೆ

ಉಡುಪಿ: ಪರಿಸರ ಸಮತೋಲನದಲ್ಲಿ ಬಹುಮುಖ್ಯ ಪಾತ್ರವಹಿಸುವ ಉಭಯವಾಸಿ ಜೀವಿ ಕಪ್ಪೆ ಮೇಲೆ ಹವಾಮಾನ ವೈಪರೀತ್ಯವು ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬ ನಿಟ್ಟಿನಲ್ಲಿ ಸಂಶೋಧಕರು ಅಧ್ಯಯನ ಆರಂಭಿಸಿದ್ದಾರೆ. ಈಗ “ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌’ (ಎಐ) ಸೌಂಡ್‌ ಡಿವೈಸ್‌ ಮೂಲಕ ಕಪ್ಪೆಗಳ ಶಬ್ದ ಗ್ರಹಣ ಕಾರ್ಯ ನಡೆಯುತ್ತಿದೆ.

ಕಾರ್ಕಳ, ಮಾಳ ಸಮೀಪ ಪಶ್ಚಿಮಘಟ್ಟದ ತಪ್ಪಲಿನ ಅರಣ್ಯದಲ್ಲಿ ಕಪ್ಪೆ ಸಂಶೋಧಕ ಡಾ| ಕೆ. ವಿ. ಗುರುರಾಜ್‌ ಸಹಿತ ಹಲವರು ಅಧ್ಯಯನ ಕೈಗೊಂಡಿದ್ದಾರೆ. ಇತ್ತೀಚೆಗೆ ಗುರುರಾಜ್‌ ಮಾರ್ಗದರ್ಶನದಲ್ಲಿ ಸಂಶೋಧನ ವಿದ್ಯಾರ್ಥಿಗಳ ತಂಡವು ರಾತ್ರಿ ಪಶ್ಚಿಮಘಟ್ಟದ ಕಾಡಿನಲ್ಲಿ ಸಂಚರಿಸಿ ಕಪ್ಪೆಗಳ ವಿಶಿಷ್ಟತೆ ಬಗ್ಗೆ ಅಧ್ಯಯನ ನಡೆಸಿದೆ.

ಮಲೆನಾಡ ರಾತ್ರಿ ಕಪ್ಪೆ, ಕೆಂಪು ಹೊಳೆ, ಕೊಟ್ಟಿಗೆಹಾರ, ಇಂದಿರಾನ, ವೆಸ್ಟರ್ನ್ ಟ್ರೀ ಫ್ರಾಗ್‌, ಮಲೆನಾಡ ಮರಗಪ್ಪೆ, ಮಲಬಾರ್‌ ಗಿಲ್ಡಿಂಗ್‌ ಫ್ರಾಗ್‌ ಸಹಿತ 10ಕ್ಕೂ ಅಧಿಕ ಪ್ರಭೇದಗಳನ್ನು ಗುರುತಿಸಲಾಗಿದೆ.

ಎಐ ಸೌಂಡ್‌ ಟ್ರ್ಯಾಕಿಂಗ್‌ ಡಿವೈಸ್‌
ಅಧ್ಯಯನದ ಪ್ರಾಥಮಿಕ ಭಾಗವಾಗಿ ಪಶ್ಚಿಮಘಟ್ಟದ ಅರಣ್ಯಗಳಲ್ಲಿ 15ರಿಂದ 20 ಕಡೆಗಳಲ್ಲಿ ಎಐ ತಂತ್ರಜ್ಞಾನದ ಸೌಂಡ್‌ ಟ್ರ್ಯಾಕಿಂಗ್‌ ಡಿವೈಸ್‌ ಅಳವಡಿಸಲಾಗುತ್ತದೆ. ಒಂದೊಂದು ಪ್ರಭೇದದ ಕಪ್ಪೆಯೂ ಭಿನ್ನ ರೀತಿಯಲ್ಲಿ ಕೂಗುತ್ತದೆ. ಕಪ್ಪೆ ಕೂಗುವ ಪ್ರಕ್ರಿಯೆ ಸಂಗಾತಿಯನ್ನು ಕೂಡುವ ಸಂಕೇತವಾಗಿರುತ್ತದೆ. ರಾತ್ರಿಯಿಂದ ಬೆಳಗ್ಗಿನವರೆಗೂ ಕಪ್ಪೆ ಕೂಗುವ ಶಬ್ದವನ್ನು ಈ ಉಪಕರಣ ದಾಖಲಿಸಿಕೊಳ್ಳುತ್ತದೆ. ಅನಂತರ ಇದರ ಮುಂದಿನ ಅಧ್ಯಯನ ಕೈಗೊಳ್ಳಲಾಗುವುದು. ಇಲ್ಲಿಯವರೆಗೆ ನಾವೇ ಸ್ವತಃ ಅರಣ್ಯದಲ್ಲಿದ್ದು, ಆಲಿಸಿಕೊಂಡು ಗುರುತಿಸುವ ಕೆಲಸವಾಗುತ್ತಿತ್ತು ಎಂದು ಡಾ| ಗುರುರಾಜ್‌ ತಿಳಿಸಿದ್ದಾರೆ.

ವನ್ಯಜೀವಿ ಕಾಯ್ದೆ ಶೆಡ್ನೂಲ್‌ 2ಗೆ ಕಪ್ಪೆ ಸೇರ್ಪಡೆ
ಅಪಾಯದಂಚಿನಲ್ಲಿರುವ ಜೀವಿಗಳನ್ನು ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಶೆಡ್ನೂಲ್‌ 2ಕ್ಕೆ ಇತ್ತೀಚೆಗೆ ಸೇರಿಸಲಾಗಿದೆ. ಇತ್ತೀಚೆಗೆ ಕಪ್ಪೆಗಳ ಸಂತತಿ ಅಳಿವಿನಂಚಿಗೆ ಸಾಗುತ್ತಿರುವ ಬಗ್ಗೆ ಕಪ್ಪೆ ಸಂಶೋಧಕರ ವರದಿಗಳನ್ನು ಆಧರಿಸಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ಕಪ್ಪೆಗಳನ್ನೂ ಶೆಡ್ನೂಲ್‌2 ಪಟ್ಟಿಗೆ ಸೇರಿಸಿದೆ. ಕಪ್ಪೆಗಳ ಬೇಟೆ, ಅಕ್ರಮ ಸಾಗಾಟ, ಕಪ್ಪೆಗಳ ಸಂತತಿಗೆ ಹಾನಿ ಮಾಡುವಂಥ ಚಟುವಟಿಕೆಗಳನ್ನು ಈ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ಇತ್ತೀಚೆಗೆ ಗೋವಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಕಪ್ಪೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರವಾರದಲ್ಲಿ ಆರೋಪಿಗಳ ಸಹಿತ ವಶಕ್ಕೆ ಪಡೆದು ಈ ಕಾನೂನಿನಡಿ ಪ್ರಕರಣ ದಾಖಲಿಸಿದ್ದಾರೆ.

ಕಪ್ಪೆಗಳಿಗೆ ಯಾಕಿಷ್ಟು ಪ್ರಾಮುಖ್ಯ?
ಇತ್ತೀಚೆಗೆ ಜಗತ್ತಿನಲ್ಲಿ 8 ಸಾವಿರ ಕಪ್ಪೆ ಪ್ರಭೇದಗಳ ಬಗ್ಗೆ ಅಧ್ಯಯನ ಮಾಡಲಾಗಿದ್ದು, ಶೇ.41 ಕಪ್ಪೆ ಅಳವಿನಂಚಿನ ಸ್ಥಿತಿಯಲ್ಲಿದೆ. ನಮ್ಮ ದೇಶದಲ್ಲಿ 426 ಪ್ರಭೇದಗಳ ಅಧ್ಯಯನ ಮಾಡಿದ್ದು, 136 ಪ್ರಭೇದಗಳು ವಿನಾಶದಂಚಿನಲ್ಲಿವೆ. ಇದರಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಪರಿಸರ ವ್ಯವಸ್ಥೆಯ ಆಹಾರ ಸರಪಳಿಯಲ್ಲಿ ಕಪ್ಪೆಗಳದ್ದು ಬಹುದೊಡ್ಡ ಪಾತ್ರ. ಕಪ್ಪೆಗಳು ಪರಿಸರದ ಆರೋಗ್ಯ ಸೂಚಕ ಜೀವಿಗಳಾಗಿವೆ. ಕೀಟ ಸಾಂದ್ರತೆಯನ್ನು ನಿಯಂತ್ರಣದಲ್ಲಿಡುವ ಶಕ್ತಿ ಇವುಗಳಿಗಿದೆ. ಕಪ್ಪೆ ಸಂತತಿಯೇ ಇಲ್ಲದಾದರೆ ಕೀಟ ಸಂತತಿಗಳು ಏರಿಕೆಯಾಗಿ ದೊಡ್ಡ ಗಂಡಾಂತರ ಎದುರಾಗಬಹುದು. ರೈತ ಸ್ನೇಹಿಯಾಗಿಯೂ ಕಪ್ಪೆಗಳು ಕೆಲಸ ಮಾಡುತ್ತವೆ ಎನ್ನುತ್ತಾರೆ ಕಪ್ಪೆ ಸಂಶೋಧಕರು.

ಮಾಹೆ ವಿ.ವಿ.ಯ ಡಾ| ಟಿ. ಎಂ. ಪೈ ಎಂಡೋಮೆಂಟ್‌ ಚೆಯರ್‌ ವತಿಯಿಂದ ಕಪ್ಪೆಗಳ ಅಧ್ಯಯನ ಮತ್ತು ಪ್ರಸ್ತುತ ಹವಾಮಾನ ಸ್ಥಿತಿಗತಿ ಕಪ್ಪೆಗಳ ಮೇಲಾಗುತ್ತಿರುವ ಪರಿಣಾಮದ ಬಗ್ಗೆ ಸಂಶೋಧನೆಗಾಗಿ 10 ಲಕ್ಷ ರೂ. ಅನುದಾನ ನೀಡಿದೆ. ಈ ನಿಟ್ಟಿನಲ್ಲಿ ಕೆಲಸಗಳು ಸಾಗುತ್ತಿದ್ದು, ಆಧುನಿಕ ತಂತ್ರಜ್ಞಾನದ ನೆರವು ಪಡೆದು ಕಪ್ಪೆಗಳ ಅಧ್ಯಯನ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ.
– ಡಾ| ಕೆ. ವಿ. ಗುರುರಾಜ್‌, ಕಪ್ಪೆ ಸಂಶೋಧಕರು, ಸಹ ಪ್ರಾಧ್ಯಾಪಕ, ಸೃಷ್ಟಿ ಮಣಿಪಾಲ್‌, ಇನ್‌ಸ್ಟಿಟ್ಯೂಟ್‌ ಆಫ್ ಡಿಸೈನ್‌ ಆ್ಯಂಡ್‌ ಟೆಕ್ನಾಲಜಿ, ಮಾಹೆ, ಬೆಂಗಳೂರು.

– ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

HDK

MUDA Scam: ಸಿದ್ದರಾಮಯ್ಯನವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ: ಎಚ್‌ಡಿಕೆ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Thirthahalli ನಿರಂತರ ಮಳೆಯ ಆರ್ಭಟ : ಕುಸಿದು ಬಿದ್ದ ಮನೆಯ ಗೋಡೆ

Thirthahalli ನಿರಂತರ ಮಳೆಯ ಆರ್ಭಟ: ಕುಸಿದು ಬಿದ್ದ ಮನೆಯ ಗೋಡೆ

Rain-Karnataka

Rain Alert: ಕರಾವಳಿ ಜಿಲ್ಲೆಗಳಲ್ಲಿ ಜು.25ರವರೆಗೂ ವ್ಯಾಪಕ ಮಳೆ 

1-mmm

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi; ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಭೇಟಿ

Udupi; ಕಡಲ್ಕೊರೆತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ಭೇಟಿ

Kota-poojary

CM Siddaramaiah; ನನ್ನ ಮೇಲಿನ ಆರೋಪವನ್ನು ಹಿಂಪಡೆಯಬೇಕು: ಕೋಟ

1-sadsad

Udupi ಪ್ರವಾಹ ನಿಗಾಕ್ಕೆ ವಿಶೇಷ ಟಾಸ್ಕ್ ಫೋರ್ಸ್‌ ರಚನೆ

1-asaas

Udupi ಪ್ರವಾಸೋದ್ಯಮ: ನಿನ್ನೆ, ಇಂದು, ನಾಳೆ ವಿಚಾರಗೋಷ್ಠಿ

Kapu-Accident

Kapu: ಬೈಕ್‌ -ಕಾರು ಮುಖಾಮುಖಿ ಢಿಕ್ಕಿ; ಬೈಕ್‌ ಸವಾರ ಮೃತ್ಯು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

HDK

MUDA Scam: ಸಿದ್ದರಾಮಯ್ಯನವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ: ಎಚ್‌ಡಿಕೆ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Kota ಯಡಾಡಿ – ಮತ್ಯಾಡಿ: ಇಸ್ಪೀಟ್‌ ನಿರತರ ಬಂಧನ

Kota ಯಡಾಡಿ – ಮತ್ಯಾಡಿ: ಇಸ್ಪೀಟ್‌ ನಿರತರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.