ವಾರಾಹಿ ನೀರು ಸೀತಾನದಿ ಸಂಪರ್ಕಿಸಲು ಆಗ್ರಹ

Team Udayavani, May 14, 2019, 6:10 AM IST

ಬ್ರಹ್ಮಾವರ: ಇತ್ತೀಚಿನ ವರ್ಷಗಳಲ್ಲಿ ಬೇಸಗೆಯಲ್ಲಿ ಸೀತಾ ನದಿ ಒಣಗುತ್ತಿದೆ. ಈ ವರ್ಷ ಕಡು ಬೇಸಗೆಯಿಂದ ಬಹುತೇಕ ಕಡೆ ಬರಿದಾಗಿದೆ.

ಆದ್ದರಿಂದ ವಾರಾಹಿ ಕಾಲುವೆ ನೀರನ್ನು ಸೀತಾನದಿಗೆ ಹರಿಸಬೇಕಾಗಿ ಕೃಷಿಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸೀತಾನದಿ ಒಣಗಿದ ಪರಿಣಾಮ ನಂಚಾರು, ಮಿಯಾರು, ಹೆಸ್ಕಾಂದ, ಬೆಳ್ವೆ, ಜೋಮುÉ, ಚಾರಾ ಮೊದಲಾದ ಪ್ರದೇಶದ ಕೃಷಿಕರು ಕಂಗಾಲಾಗಿದ್ದಾರೆ. ನೀರಿಲ್ಲದೆ ಅಡಕೆ, ತೆಂಗಿನ ತೋಟಗಳು ಒಣಗಿವೆ. ನದಿ ತೀರದ ಜನರು ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ.

ಕಾಲುವೆ ಸಂಪರ್ಕ
ಇತ್ತ ನದಿ ಒಣಗಿ ಮರುಭೂಮಿ ಯಂತಾದರೆ, ಸ್ವಲ್ಪ ದೂರದಲ್ಲೇ ವಾರಾಹಿ ಕಾಲುವೆ ನೀರು ಗದ್ದೆ, ಬಯಲಿಗೆಲ್ಲಾ ಹರಿದು ವ್ಯರ್ಥ ವಾಗುತ್ತಿದೆ. ಆದ್ದರಿಂದ ವಂಡಾರು ತನಕ ಇರುವ ಕಾಲುವೆಯನ್ನು ಸಮೀಪದ ಸೀತಾನದಿಗೆ ಜೋಡಿಸುವುದರಿಂದ ಬಹಳಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಸಂಬಂಧ ಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಮನವಿ ಮಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ