ಇಂದು “ವಿಶ್ವಾರ್ಪಣಂ’; ಪುಣ್ಯಜಲಾಭಿಷೇಕ

Team Udayavani, Jun 17, 2019, 6:00 AM IST

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ವಿರಾಟಪರ್ವ ಪ್ರವಚನ ಮಂಗಲ ಮತ್ತು ಷಷ್ಠಿ ಪೂರ್ತಿ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ “ವಿಶ್ವಾರ್ಪಣಂ”ನ್ನು ಆಯೋಜಿಸಲಾಗಿದೆ.

ಜೂ. 17ರಂದು ದಶ ಕುಂಡಗಳಲ್ಲಿ 108 ಋತ್ವಿಜರಿಂದ ಧನ್ವಂತರಿ ಯಾಗ, ಪುಣ್ಯ ಕ್ಷೇತ್ರ ಹಾಗೂ ಪುಣ್ಯ ನದಿಗಳ ಜಲದಿಂದ ಶ್ರೀಪಾದರಿಗೆ ಅಭಿಷೇಕ ನಡೆಯಲಿದೆ.
ಇದರ ಪೂರ್ವಭಾವಿಯಾಗಿ ಎಲ್ಲ ಕ್ಷೇತ್ರಗಳ ಪುಣ್ಯ ಜಲವನ್ನು ಪಲ್ಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ತಂದು ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ಸನ್ನಿಧಿಯಲ್ಲಿ ಪಲಿಮಾರು ಹಿರಿಯ ಕಿರಿಯ, ಅದಮಾರು ಹಿರಿಯ, ಕಿರಿಯ ಮಠಾಧೀಶರು ದೇವತಾ ಪ್ರಾರ್ಥನೆ ನಡೆಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ