Udayavni Special

ಯುವಜನರಿಂದ ಹಿರಿಯರ ವರೆಗೆ ಮತದಾನೋತ್ಸಾಹ


Team Udayavani, May 14, 2018, 11:26 AM IST

matadanotsava.jpg

ಉಡುಪಿ: ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿದ್ದು, ಮತದಾನದ ಕುರಿತು ಜಾಗೃತಿ ಮೂಡಿಸುವ ಜಿಲ್ಲಾ ಸ್ವೀಪ್‌ ಸಮಿತಿಯ ಆಶಯಕ್ಕೆ ಯಶಸ್ಸು ಲಭಿಸಿದೆ. ಹಿರಿಯ ನಾಗರಿಕರು, ಹೊಸ ಮತದಾರರು, ಮಹಿಳೆಯರು ಈ ಬಾರಿ ಹೆಚ್ಚು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. 

ಸುಮಾರು ಎರಡು ತಿಂಗಳುಗಳಿಂದ ಜಿಲ್ಲಾ ಸ್ವೀಪ್‌ ಸಮಿತಿಯು ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಮತದಾರ ಜಾಗೃತಿ ಕಾರ್ಯ ನಡೆಸಿತ್ತು. ಜಿಲ್ಲೆಯ ವಿವಿಧ ಸರಕಾರಿ ಕಚೇರಿಗಳು, ಸಂಘಸಂಸ್ಥೆಗಳು, ಇತರ ಸಂಸ್ಥೆಗಳು ಕೈಜೋಡಿಸಿದ್ದವು. 

ಒಳಗೊಳ್ಳುವ, ಸುಗಮ, ನೈತಿಕ ಮತದಾನ
ಜಿಲ್ಲಾ ಸ್ವೀಪ್‌ ಸಮಿತಿ ನಡೆಸಿದ ಎಲ್ಲ ಜಾಗೃತಿ ಕಾರ್ಯಕ್ರಮಗಳನ್ನು “ಒಳಗೊಳ್ಳುವ, ಸುಗಮ ಮತ್ತು ನೈತಿಕ ಮತದಾನ’ ಶೀರ್ಷಿಕೆಯಡಿ ನಿರ್ವಹಿಸಲಾಗಿತ್ತು. ಆಕಾಶವಾಣಿ, ಎಫ್‌ಎಂ, ಕೆಎಸ್‌ಆರ್‌ಟಿಸಿ, ರೈಲ್ವೇ ಇಲಾಖೆ, ಬ್ಯಾಂಕ್‌, ಆಸ್ಪತ್ರೆಗಳು ಸಹಕರಿಸಿದ್ದವು. ಜಿಲ್ಲೆಯಲ್ಲಿ ವಿಶೇಷವಾಗಿ ಸೈಕಲ್‌ ರ್ಯಾಲಿ, ವಾಕಥಾನ್‌, ವಿದ್ಯಾರ್ಥಿಗಳ ಮೆಗಾರ್ಯಾಲಿಗಳನ್ನು ಆಯೋಜಿಸಲಾಗಿತ್ತು. 

ವಿವಿಧ ಸೆಲೆಬ್ರಿಟಿಗಳ ಆಡಿಯೋ ಜಿಂಗಲ್ಸ್‌, ವೀಡಿಯೋ ಮಾಡಿ ಜಾಗೃತಿ ಮೂಡಿಸಲಾಗಿತ್ತು. ಜಿ.ಪಂ. ಸಿಇಒ ನೇತೃತ್ವದ ತಂಡ ಸ್ವೀಪ್‌ ಕಾರ್ಯ ಚಟುವಟಿಕೆಗಳನ್ನು ನಡೆಸಿದೆ. ಪ್ರತಿ ತಾ.ಪಂ.ಗಳ ಇಒಗಳು ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಸಿಇಒ ಅವರು ಎಲ್ಲ ಕೊರಗರ ಕಾಲನಿಗಳಿಗೆ ತೆರಳಿ ಅಲ್ಲಿ ಮತ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಸಿದರು, ಎಲ್ಲ ಕಾರ್ಮಿಕರ ಕಾಲನಿಗಳಿಗೆ ತೆರಳಿ ಮತದಾನ ಜಾಗೃತಿ ಮೂಡಿಸಿದರು. ಮಲ್ಪೆ ಬೀಚ್‌ನಲ್ಲಿ ಪ್ರತಿ ರವಿವಾರ ವಿಶೇಷ ಚೇತನರು, ಶ್ರವಣ ದೋಷದವರು, ದೃಷ್ಟಿ ದೋಷದವರು ಹೀಗೆ ವಿಶೇಷ ಗಮನ ಹರಿಸಬೇಕಾದವರಿಗೆ ಜಾಗೃತಿ ಮೂಡಿಸಿದರು. ಯಕ್ಷಗಾನ ಶೈಲಿಯ ಹಾಡುಗಳನ್ನು ವಿವಿಧೆಡೆ ಆಡಿಯೋ ಮೂಲಕ ಪ್ರಚಾರ ಮಾಡಲಾಯಿತು, ಮತದಾನದ ಅಗತ್ಯ ಬಿತ್ತರಿಸುವ ಯಕ್ಷಗಾನ ಪ್ರದರ್ಶನವನ್ನು ನಡೆಸಲಾಯಿತು. ಫ್ಲ್ಯಾಶ್‌ ಮೋಬ್‌ಗಳು ವಿವಿಧೆಡೆ ಕಾರ್ಯ ನಿರ್ವಹಿಸಿದವು. 

20 ಲಕ್ಷ ರೂ. ಅನುದಾನ
ಮತದಾರರ ಜಾಗೃತಿಗಾಗಿ ಸ್ವೀಪ್‌ ಸಮಿತಿಗೆ 20 ಲಕ್ಷ ರೂ. ಅನುದಾನ ನೀಡಲಾಗಿದೆ. 10 ಪಿಂಕ್‌ ಮತಗಟ್ಟೆಗಳಿಗೆ ತಲಾ 10 ಸಾವಿರ ರೂಗಳಂತೆ ನೀಡಲಾಯಿತಾದರೂ ಜಿಲ್ಲಾಧಿಕಾರಿಯವರು ವಿಶೇಷ ಮುತುವರ್ಜಿಯಿಂದ ಹೆಚ್ಚಿನ ಅನುದಾನ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಮಾಡಿದ ಜಾಗೃತಿ ಕಾರ್ಯಕ್ರಮ, ಮಾಧ್ಯಮಗಳು ಸುಮಾರು ಎರಡು ತಿಂಗಳಿಂದ ವಿವಿಧ ರೀತಿಗಳಲ್ಲಿ ಪ್ರಜಾಪ್ರಭುತ್ವದ ಮಹತ್ವವನ್ನು ನಿರಂತರವಾಗಿ ಸಾರಿ ಸಾರಿ ಹೇಳಿದ್ದರಿಂದ ಎಲ್ಲರ ಮನಸ್ಸನ್ನು ಗೆಲ್ಲಲು ಸಹಕಾರಿಯಾಯಿತು ಮತ್ತು ಮತದಾನ ಕಾರ್ಯದಲ್ಲಿ ಏನೋ ಮಹತ್ವವಿದೆ ಎನ್ನುವುದನ್ನು ಮತದಾರರು ತಿಳಿಯಲು ಸಾಧ್ಯವಾಯಿತು. ಮೊದಲ ಬಾರಿ ಮತದಾನ ಮಾಡುವವರು ಕುತೂಹಲದಿಂದ ಮತದಾನ ಮಾಡಿದರು. ಹೀಗೆ ಎಲ್ಲರ ಪರಿಶ್ರಮ ಸೇರಿ ಫ‌ಲಶ್ರುತಿ ರೂಪದಲ್ಲಿ ಮತದಾನ ಹೆಚ್ಚಳವಾಯಿತು. 
– ಶಿವಾನಂದ ಕಾಪಶಿ, ಮುಖ್ಯಸ್ಥರು, ಸ್ವೀಪ್‌ ಸಮಿತಿ, ಉಡುಪಿ ಜಿಲ್ಲೆ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗೆಲುವಿಗೆ ಟ್ರ್ಯಾಕ್‌ಗೆ ಮರಳಲು ಚೆನ್ನೈ ಕಾತರ

ಗೆಲುವಿಗೆ ಟ್ರ್ಯಾಕ್‌ಗೆ ಮರಳಲು ಚೆನ್ನೈ ಕಾತರ

631

ಕೋವಿಡ್‌ನಿಂದ ರದ್ದಾದ ವಿಮಾನದ ಟಿಕೆಟ್‌ ರೀಫ‌ಂಡ್‌; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ದೆಹಲಿ ಗಲಭೆ: ಜೆಎನ್ ಯು ಹಳೆ ವಿದ್ಯಾರ್ಥಿ ಉಮರ್ ಮತ್ತೆ ಬಂಧನ, 3 ದಿನ ಪೊಲೀಸ್ ವಶಕ್ಕೆ

ದೆಹಲಿ ಗಲಭೆ: ಜೆಎನ್ ಯು ಹಳೆ ವಿದ್ಯಾರ್ಥಿ ಉಮರ್ ಮತ್ತೆ ಬಂಧನ, 3 ದಿನ ಪೊಲೀಸ್ ವಶಕ್ಕೆ

ಗುಡ್ ನ್ಯೂಸ್: ಭಾರೀ ಗಾತ್ರದ ಮೀನು ಹಿಡಿದು ಒಂದೇ ದಿನದಲ್ಲಿ ಶ್ರೀಮಂತೆಯಾದ ಬಡ ಮಹಿಳೆ!

ಗುಡ್ ನ್ಯೂಸ್: ಭಾರೀ ಗಾತ್ರದ ಮೀನು ಹಿಡಿದು ಒಂದೇ ದಿನದಲ್ಲಿ ಶ್ರೀಮಂತೆಯಾದ ಬಡ ಮಹಿಳೆ!

ಶಾಲೆ- ಕಾಲೇಜು ಆರಂಭದ ಬಗ್ಗೆ ಶೀಘ್ರವೇ ಸ್ಪಷ್ಟ ಮಾಹಿತಿ ಎಂದ ಡಿಸಿಎಂ ಅಶ್ವತ್ಥನಾರಾಯಣ

ಶಾಲೆ- ಕಾಲೇಜು ಆರಂಭದ ಬಗ್ಗೆ ಶೀಘ್ರವೇ ಸ್ಪಷ್ಟ ಮಾಹಿತಿ ಎಂದ ಡಿಸಿಎಂ ಅಶ್ವತ್ಥನಾರಾಯಣ

ಮೈತ್ರಿಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜೊತೆ ಎಂದೂ ಮೈತ್ರಿ ಇಲ್ಲ: ಕುಮಾರಸ್ವಾಮಿ

ಮೈತ್ರಿಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜೊತೆ ಎಂದೂ ಮೈತ್ರಿ ಇಲ್ಲ: ಕುಮಾರಸ್ವಾಮಿ

ನೋಯ್ಡಾ ಹೈವೇಯಲ್ಲಿ ಹೈಡ್ರಾಮಾ: ಯುಪಿ ಪೊಲೀಸರ ತಳ್ಳಾಟದಿಂದ ಕೆಳಕ್ಕೆ ಬಿದ್ದ ರಾಹುಲ್ ಗಾಂಧಿ

ನೋಯ್ಡಾ ಹೈವೇಯಲ್ಲಿ ಹೈಡ್ರಾಮಾ: ಯುಪಿ ಪೊಲೀಸರ ತಳ್ಳಾಟದಿಂದ ಕೆಳಕ್ಕೆ ಬಿದ್ದ ರಾಹುಲ್ ಗಾಂಧಿ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ ರಸ್ತೆಗಿಳಿಯಲಿವೆ ಇನ್ನಷ್ಟು ಬಸ್‌ಗಳು

ಇಂದಿನಿಂದ ರಸ್ತೆಗಿಳಿಯಲಿವೆ ಇನ್ನಷ್ಟು ಬಸ್‌ಗಳು

ವಿದ್ಯುತ್‌ ಬಿಲ್‌ ಬಾಕಿಯಿದ್ದರೆ “ಪವರ್‌ ಆಫ್’

ವಿದ್ಯುತ್‌ ಬಿಲ್‌ ಬಾಕಿಯಿದ್ದರೆ “ಪವರ್‌ ಆಫ್’

ಗಾಂಧಿ ಜಯಂತಿಗೂ ಮುನ್ನ ಶಿಥಿಲ ಗಾಂಧಿ ಪ್ರತಿಮೆಗೆ ಹೊಸತನ

ಗಾಂಧಿ ಜಯಂತಿಗೂ ಮುನ್ನ ಶಿಥಿಲ ಗಾಂಧಿ ಪ್ರತಿಮೆಗೆ ಹೊಸತನ

ಉಡುಪಿ ಪ್ರವಾಹದಿಂದ ಕಲಿಯುವುದೇನು

ಉಡುಪಿ ಪ್ರವಾಹದಿಂದ ಕಲಿಯುವುದೇನು

ಬಲೆಗೆ ಬೀಳುತ್ತಿದೆ ಟನ್‌ಗಟ್ಟಲೆ ಕಾರ್ಗಿಲ್‌ ಮೀನು

ಬಲೆಗೆ ಬೀಳುತ್ತಿದೆ ಟನ್‌ಗಟ್ಟಲೆ ಕಾರ್ಗಿಲ್‌ ಮೀನು

MUST WATCH

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ



ಹೊಸ ಸೇರ್ಪಡೆ

ಗೆಲುವಿಗೆ ಟ್ರ್ಯಾಕ್‌ಗೆ ಮರಳಲು ಚೆನ್ನೈ ಕಾತರ

ಗೆಲುವಿಗೆ ಟ್ರ್ಯಾಕ್‌ಗೆ ಮರಳಲು ಚೆನ್ನೈ ಕಾತರ

631

ಕೋವಿಡ್‌ನಿಂದ ರದ್ದಾದ ವಿಮಾನದ ಟಿಕೆಟ್‌ ರೀಫ‌ಂಡ್‌; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನ ಮತ್ತೆ ಒಂದು ತಿಂಗಳ ಕಾಲ ಬಂದ್

ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನ ಮತ್ತೆ ಒಂದು ತಿಂಗಳ ಕಾಲ ಬಂದ್

ದೆಹಲಿ ಗಲಭೆ: ಜೆಎನ್ ಯು ಹಳೆ ವಿದ್ಯಾರ್ಥಿ ಉಮರ್ ಮತ್ತೆ ಬಂಧನ, 3 ದಿನ ಪೊಲೀಸ್ ವಶಕ್ಕೆ

ದೆಹಲಿ ಗಲಭೆ: ಜೆಎನ್ ಯು ಹಳೆ ವಿದ್ಯಾರ್ಥಿ ಉಮರ್ ಮತ್ತೆ ಬಂಧನ, 3 ದಿನ ಪೊಲೀಸ್ ವಶಕ್ಕೆ

ಗಣ್ಯರ ಅನುಪಸ್ಥಿತಿ: ಕಳೆಗುಂದಿದ ಘಟಿಕೋತ್ಸವ ! ಕೋವಿಡ್ ಆತಂಕದಿಂದ ಅತಿಥಿಗಳ ಗೈರು

ಗಣ್ಯರ ಅನುಪಸ್ಥಿತಿ: ಕಳೆಗುಂದಿದ ಘಟಿಕೋತ್ಸವ ! ಕೋವಿಡ್ ಆತಂಕದಿಂದ ಅತಿಥಿಗಳ ಗೈರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.