Udayavni Special

ಬೆಳ್ಳೆ ,ಶಿರ್ವ ಗ್ರಾ.ಪಂ.ಗಳಲ್ಲಿ ಕೆಲವೆಡೆ ನೀರಿನ ಸಮಸ್ಯೆ


Team Udayavani, Feb 15, 2019, 12:30 AM IST

1402shirva1.jpg

ಶಿರ್ವ:  ಕಾಪು ತಾಲೂಕಿನ ಬೆಳ್ಳೆ ಮತ್ತು ಶಿರ್ವ ಗ್ರಾ.ಪಂ.ಗಳಲ್ಲಿ ಹೆಚ್ಚಿನ ಕಡೆ ನೀರು ಪೂರೈಕೆ ಸಮರ್ಪಕವಾಗಿದ್ದು, ಕೆಲವೆಡೆ ಪೈಪ್‌ಲೈನ್‌ ದೋಷದಿಂದಾಗಿ ತಾತ್ಕಾಲಿಕ ನೀರು ಪೂರೈಕೆ ಸಮಸ್ಯೆಯಿದೆ.

ಬೆಳ್ಳೆ ಗ್ರಾ. ಪಂ. ಬೆಳ್ಳೆ -ಕಟ್ಟಿಂಗೇರಿ ಅವಳಿ ಗ್ರಾಮಗಳನ್ನೊಳಗೊಂಡಿದೆ. ಇದರಲ್ಲಿ ಬೆಳ್ಳೆ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಇಲ್ಲಿನ ಗಾಂಧೀ ನಗರ, ಧರ್ಮಶ್ರೀ ಕಾಲನಿ, ರಕ್ಷಾಪುರ ಕಾಲನಿ, ಪೊಯ್ಯದ ಪಾಡಿಗಳಲ್ಲಿ ಬೇಸಗೆಯಲ್ಲಿ ಸಮಸ್ಯೆ ತೀವ್ರವಾಗುತ್ತಿದೆ. ಈ ಬಾರಿ ಕುಂತಳನಗರ ಮತ್ತು ಕೆಂಪು ಜೋರ ಪ್ರದೇಶದಲ್ಲಿ ತಾತ್ಕಾಲಿಕ ಸಮಸ್ಯೆಯಿದ್ದು ಉಳಿದೆಡೆ ಸುಮಾರಾಗಿ ನೀರು ಪೂರೈಕೆಯಾಗುತ್ತಿದೆ.

ಕುಂತಳ ನಗರದಲ್ಲಿ ರಚನೆಯಾದ ಓವರ್‌ ಹೆಡ್‌ ಟ್ಯಾಂಕ್‌ನ ನೀರು ಸಂಗ್ರಹ ಸಾಮರ್ಥ್ಯ 25 ಸಾವಿರ ಲೀಟರ್‌ ಇದ್ದು ಪೈಪ್‌ಲೈನ್‌ ಸಮಸ್ಯೆಯಿಂದ 15 ಮನೆಗಳಿಗೂ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ.

ಶಿರ್ವದಲ್ಲಿ ಕೆಲವೆಡೆ ಸಮಸ್ಯೆ
ಶಿರ್ವ ಗ್ರಾ.ಪಂ.ವ್ಯಾಪ್ತಿಯ ಹೆಚ್ಚಿನೆಡೆ ನೀರು ಪೂರೈಕೆಯಲ್ಲಿ ನ ವ್ಯವಸ್ಥೆ ಉತ್ತಮ ವಾಗಿದ್ದು ತೊಟ್ಲಗುರಿ, ತುಪ್ಪೆಪಾದೆ, ನ್ಯಾರ್ಮ ರಾಧಮ್ಮ ರಸ್ತೆ ಮತ್ತು ಇಂದ್ರಪುರ ಪರಿಸರದಲ್ಲಿ ಸ್ವಲ್ಪಮಟ್ಟಿನ ಕುಡಿಯುವ ನೀರಿನ ಸಮಸ್ಯೆಯಿದೆ. ಜಿ.ಪಂ.ಅನುದಾನದಿಂದ ಇಂದ್ರಪುರ, ಮಸೀದಿ ಬಳಿ ಪೈಪ್‌ಲೈನ್‌ ವಿಸ್ತರಿಸಿ ಬೋರ್‌ವೆಲ್‌ಗೆ ವಿದ್ಯುತ್‌ ಪಂಪ್‌ ಜೋಡಿಸಿ ನೀರು ಪೂರೈಕೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪಂಚಾಯತ್‌ವ್ಯಾಪಿ ¤ಯಲ್ಲಿ ನಳ್ಳಿನೀರಿನ ಪೂರೈಕೆ ವ್ಯವಸ್ಥೆ ಸುಧಾರಿಸಿದೆ. ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಬಂದರೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಗ್ರಾ. ಪಂ. ಸಜ್ಜಾಗಿದೆ.

ನೀರಿನ ಬಿಲ್‌ ಬಾಕಿ 
ಶಿರ್ವ ಗ್ರಾ.ಪಂ. ನಲ್ಲಿ ಸುಮಾರು 10ಲ.ರೂ.ಗಳ ನೀರಿನ ಡಿಮಾಂಡ್‌ ಬಿಲ್‌ ಇದ್ದು ರೂ.3 ಲಕ್ಷದ ವರೆಗೆ ವಸೂಲಿಯಾಗುತ್ತಿದೆ. ಒಂದೆರಡು ವರ್ಷಗಳಿಂದ ಬಾಕಿಯಿರಿಸಿದ ನೀರಿನ ಬಿಲ್‌ ಪಾವತಿ ಮಾಡದಿದ್ದಲ್ಲಿ ನೀರಿನ ಸರಬರಾಜು ನಿಲ್ಲಿಸಲಾಗುವುದು. ಬಿಲ್‌ ಪಾವತಿಸಿದರೆ ಟ್ಯಾಂಕರ್‌ನಲ್ಲಿಯೂ ನೀರು ಪೂರೈಕೆ ಮಾಡಲು ಗ್ರಾ.ಪಂ. ಶಕ್ತವಾಗಿದೆ ಎಂದು ಶಿರ್ವ ಗ್ರಾ.ಪಂ. ಪಿಡಿಒ ಅನಂತ ಪದ್ಮನಾಭ ನಾಯಕ್‌ ತಿಳಿಸಿದ್ದಾರೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ನನೆಗುದಿಗೆ ಬಿದ್ದಿರುವ ಸರಕಾರದ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಂಡು ಪಾಪನಾಶಿನಿ ನದಿ ನೀರನ್ನು ಶುದ್ಧೀಕರಿಸಿ ಗ್ರಾಮಗಳಿಗೆ ನೀಡುವ ಯೋಜನೆ ಸಾಕಾರಗೊಂಡರೆ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಜತೆಗೆ ಅಲ್ಲಲ್ಲಿ ಬೋರ್‌ವೆಲ್‌, ಬಾವಿಗಳಿಂದ ನೀರೆತ್ತಲು ವ್ಯಯಿಸುವ ವಿದ್ಯುತ್‌, ಪಂಪ್‌, ನಿರ್ವಹಣಾ ವೆಚ್ಚವೂ ಕಡಿಮೆಯಾಗಲಿದೆ.

ಬಳಕೆಯಾಗದ ಶುದ್ಧ  ನೀರಿನ ಘಟಕ
ಇನ್‌ಫೋಸಿಸ್‌ನಿಂದ ಸ್ಥಾಪಿತವಾದ ಶುದ್ಧ ಕುಡಿಯುವ ನೀರಿನ ಘಟಕ ಪಡುಬೆಳ್ಳೆಯ ಧರ್ಮಶ್ರೀ ಕಾಲನಿಯ ಸಮುದಾಯ ಭವನದ ಬಳಿ ಇದ್ದು ಸಾರ್ವಜನಿಕರು ಸರಿಯಾಗಿ ಉಪಯೋಗಿಸುತ್ತಿಲ್ಲ. ಶಿರ್ವ ಪಂಚಾಯತ್‌ ಬಳಿ ಮತ್ತು ಪದವು ಸಮಾಜ ಮಂದಿರದ ಅಂಗನವಾಡಿ ಕೇಂದ್ರದ ಬಳಿ ಶುದ್ಧ ಕುಡಿಯುವ ನೀರಿನ ಘಟಕವಿದೆ ಇಲ್ಲೂ ಜನರು ನೀರನ್ನು ಬಳಸುತ್ತಿಲ್ಲ. 

ಕುಸಿದ ತೆರೆದ ಬಾವಿ
ಶಿರ್ವಗ್ರಾ.ಪಂ.ವ್ಯಾಪ್ತಿಯ ತಂಕರಪಲ್ಕೆ ಪರಿಶಿಷ್ಟ ಕಾಲನಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ತೆರೆದ ಬಾವಿ ಕಳೆದ ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಕುಸಿದು ಬಿದ್ದು ಪರಿಸರದ ನಾಗರಿಕರಿಗೆ ಕುಡಿಯುವ ನೀರಿನ ವ್ಯತ್ಯಯ ಉಂಟಾಗಿದೆ. ಇದರ ಬಗ್ಗೆ ಇನ್ನೂ ಇಲಾಖೆ ಕ್ರಮ ಕೈಗೊಂಡಿಲ್ಲ.  ಗ್ರಾಮ ಪಂಚಾಯತ್‌ ಈ ವರೆಗೆ ಬೇರೆ ಕಡೆಯಿಂದ ನೀರಿನ ವ್ಯವಸ್ಥೆ ಕಲ್ಪಿಸಿದ್ದು ಬೇಸಗೆಯಲ್ಲಿ ಕಾಲನಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.

ನೀರು ಪೂರೈಕೆಗೆ ಕ್ರಮ 
ಜನರು ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕಾಗಿ ಬಳಸಿದಲ್ಲಿ ಸಮಸ್ಯೆಯುಂಟಾಗುತ್ತದೆ. ಬೇಸಗೆಯಲ್ಲಿ ಅಗತ್ಯ ಬಿದ್ದಲ್ಲಿ ಟಾಸ್ಕ್ ಫೋರ್ಸ್‌ಗೆ ವರದಿ ನೀಡಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಗ್ರಾ. ಪಂ. ನಿಂದ ವ್ಯವಸ್ಥೆ ಕಲ್ಪಿಸಲಾಗುವುದು.
– ಅನಂತ ಪದ್ಮನಾಭ ನಾಯಕ್‌ 
ಶಿರ್ವ ಗ್ರಾ.ಪಂ. ಪಿಡಿಒ

ತಾತ್ಕಾಲಿಕ ಸಮಸ್ಯೆ 
ಕುಂತಳ ನಗರ ,ಕೆಂಪು ಜೋರ ಪ್ರದೇಶದಲ್ಲಿ ಸ್ವಲ್ಪಮಟ್ಟಿನ ತಾತ್ಕಾಲಿಕ ಸಮಸ್ಯೆಯಿದ್ದು ಪೈಪ್‌ಲೈನ್‌ ವಿಸ್ತರಿಸಿ ನೀರು ಪೂರೈಕೆ ಮಾಡಲಾಗುವುದು. ಉಳಿದಂತೆ ಹೆಚ್ಚಿನ ಕಡೆ ನೀರು ಪೂರೈಕೆ ಉತ್ತಮವಾಗಿದೆ.               
– ವಸಂತಿ
ಬೆಳ್ಳೆ ಗ್ರಾ.ಪಂ. ಪಿಡಿಒ.

– ಸತೀಶ್ಚಂದ್ರ ಶೆಟ್ಟಿ  ಶಿರ್ವ

ಟಾಪ್ ನ್ಯೂಸ್

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

incident held at vijayapura news

ಪತಿಯ ಹತ್ಯೆಗೆ 8 ಲಕ್ಷ ರೂ. ಸುಪಾರಿ ನೀಡಿದ ಪತ್ನಿ

80 ಟನ್‌ ಹೆರಾಯಿನ್‌ ಯಾರದ್ದು ಎಂಬುದು ಕಟೀಲ್‌ ಉತ್ತರಿಸಲಿ : ಹರಿಪ್ರಸಾದ್‌

80 ಟನ್‌ ಹೆರಾಯಿನ್‌ ಯಾರದ್ದು ಎಂಬುದು ಕಟೀಲ್‌ ಉತ್ತರಿಸಲಿ : ಹರಿಪ್ರಸಾದ್‌

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

1-www

ಲ್ಯಾಪ್‌ಟಾಪ್‌ಗಳಲ್ಲಿ ಅಡಗಿಸಿಟ್ಟಿದ್ದ 2.19 ಕೋಟಿ ಮೌಲ್ಯದ ಚಿನ್ನ ವಶ !

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

ಮಹರ್ಷಿ ವಾಲ್ಮೀಕಿ ಸಾಧನೆ ಸರ್ವರಿಗೂ ಪ್ರೇರಣೆ:ಡಿಸಿ

ಮಹರ್ಷಿ ವಾಲ್ಮೀಕಿ ಸಾಧನೆ ಸರ್ವರಿಗೂ ಪ್ರೇರಣೆ:ಡಿಸಿ

ಪೆಟ್ರೋಲ್‌ 45 ರೂ.ಗೆ ನೀಡಲು ಸಾಧ್ಯ: ವೀರಪ್ಪ ಮೊಯ್ಲಿ

ಪೆಟ್ರೋಲ್‌ 45 ರೂ.ಗೆ ನೀಡಲು ಸಾಧ್ಯ: ವೀರಪ್ಪ ಮೊಯ್ಲಿ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

incident held at vijayapura news

ಪತಿಯ ಹತ್ಯೆಗೆ 8 ಲಕ್ಷ ರೂ. ಸುಪಾರಿ ನೀಡಿದ ಪತ್ನಿ

80 ಟನ್‌ ಹೆರಾಯಿನ್‌ ಯಾರದ್ದು ಎಂಬುದು ಕಟೀಲ್‌ ಉತ್ತರಿಸಲಿ : ಹರಿಪ್ರಸಾದ್‌

80 ಟನ್‌ ಹೆರಾಯಿನ್‌ ಯಾರದ್ದು ಎಂಬುದು ಕಟೀಲ್‌ ಉತ್ತರಿಸಲಿ : ಹರಿಪ್ರಸಾದ್‌

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

ಪೊಲೀಸರ ತ್ಯಾಗ, ಬಲಿದಾನ ಸದಾ ಅವಿಸ್ಮರಣೀಯ :  ಜಿಲ್ಲಾಧಿಕಾರಿ ಕೂರ್ಮಾರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.