ಕೆಳಪರ್ಕಳದಲ್ಲಿ ಭೂಗರ್ಭದಿಂದ ಮತ್ತೆ ಉಕ್ಕಿತು ನೀರು…
Team Udayavani, Dec 3, 2017, 5:25 PM IST
ಉಡುಪಿ: ಮಣಿಪಾಲ ಸಮೀಪದ ಕೆಳ ಪರ್ಕಳದಲ್ಲಿ ನೀರು ಭೂಗರ್ಭದಿಂದ ಮತ್ತೆ ಉಕ್ಕಿ ಬಂದಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಈ ಭಾಗದಲ್ಲಿ ಬೇಸಗೆಯ ಸಂದರ್ಭವೂ ನೀರುಕ್ಕಿದ್ದು ವಿಸ್ಮಯ ಮೂಡಿಸಿತ್ತು.
ಕೆಳ ಪರ್ಕಳದ ಕೋಟಿಚೆನ್ನಯ ಗರೋಡಿಯ ಸಮೀಪದ ತೋಡಿನಲ್ಲಿ ಕಳೆದ ವರ್ಷದಂತೆ ಭೂಗರ್ಭದಿಂದ ನೀರು ಉಕ್ಕಿ ಬರುತ್ತಿದ್ದು, ತೋಡಿನಲ್ಲಿ ನೀರು ಯಥೇತ್ಛ ಹರಿಯುತ್ತಿದೆ. ಪರಿಸರದ ಬಾವಿಗಳಲ್ಲೂ ನೀರಿನ ಒರತೆಯಾಗಿದ್ದು, ನೀರು ಮೇಲ್ಮಟ್ಟಕ್ಕೆ ಬಂದಿದೆ. ಈ ಭಾಗದ ಜನರು ಮಾತ್ರವಲ್ಲದೆ ರೈತರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ಭೂಮಿಯ ಒಳಪದರದಲ್ಲಿ ಆಗುವ ಒತ್ತಡದ ಕಾರಣದಿಂದ ಈ ರೀತಿಯಾಗುತ್ತದೆ. ಇದರಿಂದ ಏನೂ ಅಪಾಯವಿಲ್ಲ ಎಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ. ಆದರೂ ಈ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಭೂಗರ್ಭದಿಂದ ಚಿಮ್ಮಿದ ನೀರು ತೋಡಿನಲ್ಲಿ ಹರಿಯುತ್ತಿರುವುದು. ಬಾವಿಯಲ್ಲಿ ಮೇಲ್ಮಟ್ಟಕ್ಕೆ ಬಂದಿರುವ ನೀರಿನ ಮಟ್ಟ