ಕೋಡಿ: ಇನ್ನೂ ಮೇಲೇಳಲಿಲ್ಲ ಪುರಸಭೆಯ ನೀರಿನ ಟಾಂಕಿ


Team Udayavani, Jan 7, 2019, 8:15 PM IST

kodi-tank-7-1.jpg

ಕುಂದಾಪುರ: ಕೋಡಿ ಭಾಗದ ಜನತೆ ಪ್ರತಿನಿತ್ಯ ಈ ಭಾಗದಲ್ಲಿ ಹಾದುಹೋಗುವಾಗ ಇಂದೆಷ್ಟಾಗಿದೆ ಎಂದು ನೋಡಿ ಹ್ವಾಯ್‌… ಇಷ್ಟೆ  ಕಾಣಿ ಎಂದು ಮುಖ ತಿರುಗಿಸಿ ಹೋಗುವ ಕಾಮಗಾರಿ ಇದು ಎನ್ನುತ್ತಾರೆ ಜನ. ಈ ತಿಂಗಳು ಆಗುತ್ತದೆ, ಮುಂದಿನ ತಿಂಗಳು ಆಗುತ್ತದೆ ಎಂದು ಜನತೆ ಕಾದದ್ದೇ ಬಂತು. ಅಂದಿನ ಜನಪ್ರತಿನಿಧಿಗಳು ಕೂಡ ತಮ್ಮ ಅವಧಿಯಲ್ಲೇ ಕಾಮಗಾರಿ ಆಗುತ್ತದೆ ಎಂದು ಹೇಳಿಕೊಂಡಿದ್ದರು. ಆದರೆ ಸಮಯ ಇಷ್ಟಾದರೂ ಕಾಮಗಾರಿ ನಡೆಯುವುದು ಅಷ್ಟರಲ್ಲೇ ಇದೆ ಎಂಬಂತಿದೆ.

ಇಷ್ಟಕ್ಕೂ ಕೋಡಿ ಭಾಗದಲ್ಲಿ ಜಲ್ಲಿಕಲ್ಲು ತಂದು ಸುರಿದು, ಹೊಂಡ ತೆಗೆದು ಅದೆಷ್ಟು ಸಮಯವಾಯಿತೋ ಗೊತ್ತಿಲ್ಲ. ಸ್ಥಳೀಯರನ್ನು ಕೇಳಿದರೆ ಕೆಲಸಗಾರರು ಎಲ್ಲೋ ಹೋಗಿದ್ದಾರೆ‌, ಇಷ್ಟೇ ಕೆಲಸ ನಡೆದದ್ದು ಎಂದು ತೋರಿಸುತ್ತಾರೆ. ಕೋಡಿಯಲ್ಲೊಂದು ಟ್ಯಾಂಕಿ ಕಾಮಗಾರಿ ಪೂರ್ಣವಾದರೆ ಕುಂದಾಪುರದ ನೀರಿನ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂಬ ಆಶಾಭಾವದಲ್ಲಿದ್ದಾರೆ. ಆದರೆ ಕಾಮಗಾರಿಯ ನಿಧಾನಗತಿ ಮಾತ್ರ ಜನರಿಗೆ ಬೇಸರ ತರಿಸಿದೆ.

35.5 ಕೋ.ರೂ. ಯೋಜನೆ
ಕುಂದಾಪುರ ಪುರಸಭೆ ವ್ಯಾಪ್ತಿಯ ಜನರಿಗೆ, ವಾಣಿಜ್ಯಉಪಯೋಗಕ್ಕೆ ದಿನದ 24 ತಾಸು ನೀರು ಒದಗಿಸಲು ಯೋಜನೆಯ ಕಾಮಗಾರಿ ಆಗುತ್ತಿದೆ. 23.1 ಕೋ.ರೂ.ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು ಏಶ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಸಾಲದಿಂದ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಹೂಡಿಕೆ ಯೋಜನೆ (ಜಲಸಿರಿ) ಮೂಲಕ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಹೂಡಿಕೆಯಲ್ಲಿ ಕಾಮಗಾರಿ ನಡೆಯುತ್ತಿದೆ.

ಕಾಮಗಾರಿಗೆ ಕಲ್ಕತ್ತಾದ ಮೆ| ಜಿ.ಕೆ. ಡಬ್ಲ್ಯೂಕನ್ಸಲ್ಟ್ ಸಂಸ್ಥೆ ತಾಂತ್ರಿಕ ಸಲಹೆ ನೀಡುತ್ತಿದೆ. 2017ರಲ್ಲಿ ಕಾಮಗಾರಿಗೆ ಟೆಂಡರ್‌ ಮಂಜೂರಾಗಿದೆ. ಒಟ್ಟು ಅವಧಿ 25 ತಿಂಗಳು. ಆದ್ದರಿಂದ ಆದಷ್ಟು ಶೀಘ್ರ ಕಾಮಗಾರಿ ಮುಗಿಸಬೇಕಿದೆ. ಕಾಮಗಾರಿ ಮುಗಿದ ನಂತರ 96 ತಿಂಗಳು ಅಂದರೆ 9 ವರ್ಷ ಅದರ ನಿರ್ವಹಣೆ ಹೊಣೆಯೂ ಕಾಮಗಾರಿ ನಿರ್ವಹಿಸಿದ ಸಂಸ್ಥೆಯದ್ದೇ ಆಗಿರುತ್ತದೆ. ಹಾಗಾಗಿ ಕಾಮಗಾರಿಗೆ 23.1 ಕೋ.ರೂ. ನೀಡಿದ್ದರೆ ಅದರ ನಿರ್ವಹಣೆಗೆ ಎಂದೇ 12.4 ಕೋ.ರೂ. ನೀಡಲಾಗುತ್ತಿದೆ. ಒಟ್ಟು 35.5 ಕೋ.ರೂ. ವೆಚ್ಚದ ಕಾಮಗಾರಿ ಇದಾಗಿದೆ.

ಎರಡು ಕಡೆ ಟ್ಯಾಂಕಿ ರಚನೆಯಾಗಬೇಕಿದ್ದು ಸಂಗಮ್‌ ಬಳಿ ರಚನೆಯಾಗುತ್ತಿದೆ. ಪೂರ್ಣ ಹಂತಕ್ಕೆ ತಲುಪಿದೆ. ಕೋಡಿ ಸಮೀಪ ಕಡಲ ತೀರದಲ್ಲಿ ಟ್ಯಾಂಕಿ ರಚನೆ ಕಾಮಗಾರಿಗೆ ಸಿದ್ಧತೆ ಮಾತ್ರ ನಡೆದಿದೆ. 32 ಕಿ.ಮೀ. ಪೈಪ್‌ಲೈನ್‌ ಎರಡು ಟ್ಯಾಂಕಿಗಳಿಂದ 6 ಸಾವಿರ ಸಂಪರ್ಕಗಳಿಗೆ ನೀರು ಕೊಡಲು ಒಟ್ಟು 32 ಕಿ.ಮೀ. ಪೈಪ್‌ಲೈನ್‌ ಕಾಮಗಾರಿ ನಡೆಯಲಿದೆ. ಈಗ 15 ಕಿ.ಮೀ. ಪೈಪ್‌ಲೈನ್‌ ಹಾಕಿಯಾಗಿದೆ. ಪ್ರಸ್ತುತ ಪುರಸಭೆ ವ್ಯಾಪ್ತಿಯಲ್ಲಿ 3 ಸಾವಿರ ನೀರಿನ ಸಂಪರ್ಕಗಳಿವೆ. ಇನ್ನು ಇದು ದುಪ್ಪಟ್ಟು ಆಗಲಿದ್ದು ದಿನವಿಡೀ ನೀರು ಒದಗಿಸಲು ಈ ಯೋಜನೆ ರೂಪಿಸಲಾಗಿದೆ.

ಪೈಪ್‌ಲೈನ್‌
ಕೋಡಿಯಿಂದ ನೀರಿನ ಯೋಜನೆಗಾಗಿ ಭಾರೀ ಗಾತ್ರದ ಪೈಪ್‌ಗಳ ಅಳವಡಿಕೆ ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಗಾತ್ರದ ಪೈಪ್‌ಗಳನ್ನು ತಂದು ಹಾಕಲಾಗಿದ್ದು ರಸ್ತೆ ಪಕ್ಕ ಜೆಸಿಬಿ ಮೂಲಕ ಕಣಿ ತೆಗೆದು ಪೈಪ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ.

ತರಾತುರಿಯಲ್ಲಿ ಆಗುತ್ತಿದೆ
ಸಂಗಮ್‌ ಬಳಿಯ ಟಾಂಕಿ ರಚನೆ ಕಾಮಗಾರಿ ಚೆನ್ನಾಗಿ ನಡೆದು ಪೂರ್ಣ ಹಂತಕ್ಕೆ ತಲುಪಿದೆ. ಕೋಡಿ ಕಾಮಗಾರಿ ಕೂಡಾ ಆಗುತ್ತಿದೆ. ಪೈಪ್‌ಲೈನ್‌ ರಚನೆ ಕಾರ್ಯ ತರಾತುರಿಯಲ್ಲಿ ನಡೆಯುತ್ತಿದೆ. ಜನರ ಉಪಯೋಗಕ್ಕಾಗಿ ಕುಡಿಯುವ ನೀರಿನ ಬೃಹತ್‌ ಯೋಜನೆಯಾದ ಕಾರಣ ಒಂದಷ್ಟು ಗೊಂದಲ ಸಹಜ.
– ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

— ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.