ಉಡುಪಿ-ಚಿಕ್ಕಮಗಳೂರು : ಸಾರ್ವಕಾಲಿಕ ದಾಖಲೆ ಅಂತರದ ಗುಟ್ಟೇನು?

Team Udayavani, May 24, 2019, 6:10 AM IST

ಉಡುಪಿ: ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆಲುವು ಸಾಧಿಸಿದ್ದಾರೆ.

ಉಡುಪಿ ಲೋಕಸಭಾ ಕ್ಷೇತ್ರಕ್ಕೆ 1951ರಿಂದ ಇದುವರೆಗೆ 18 ಲೋಕಸಭಾ ಚುನಾವಣೆ ಮತ್ತು ಚಿಕ್ಕಮಗಳೂರು ಕ್ಷೇತ್ರ ಹಾಸನದಿಂದ ಬೇರ್ಪಟ್ಟು 1967ರಿಂದ 2004ರವರೆಗೆ 12 ಚುನಾವಣೆ ನಡೆದಿವೆ. 2014ರಲ್ಲಿ ದಾಖಲೆಯ ಅಂತರದ ವಿಜಯ (1,81,643) ಬಿಜೆಪಿಗೆ ಸಿಕ್ಕಿತ್ತು. ಅದನ್ನೀಗ ಬಿಜೆಪಿ ಅಭ್ಯರ್ಥಿ ಶೋಭಾ ಹಿಂದಿಕ್ಕಿದ್ದಾರೆ. ಇಂದಿರಾ ಗಾಂಧಿಯವರಿಗೆ ಪುನರ್ಜನ್ಮ ನೀಡಿದ ಹೆಗ್ಗಳಿಕೆ ಇರುವ ಕ್ಷೇತ್ರದಲ್ಲಿ ಶೋಭಾ ಎರಡನೆಯ ಬಾರಿಗೆ ಮಿಂಚಿದ್ದಾರೆ.

ಗೆಲುವು-ಸೋಲಿನ ಕಾರಣವೇನು?
ಪ್ರಬಲವಾದ ನರೇಂದ್ರ ಮೋದಿ ಅಲೆಯೇ ಗೆಲುವಿಗೆ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಎಸ್‌- ಕಾಂಗ್ರೆಸ್‌ ಮೈತ್ರಿ ಸರಕಾರದ ವಿರುದ್ಧ ಜನರ ಅಭಿಪ್ರಾಯ ಎಂದೂ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹೊಸ ಮತದಾರರು ಆಸಕ್ತಿ ತಳೆದು ಮತ ಚಲಾಯಿಸಿದ್ದು, ಪ್ರಧಾನಿ ವರ್ಚಸ್ಸು ಈ ಭಾರೀ ಅಂತರದ ಗೆಲುವಿಗೆ ಕಾರಣ.

ಮೋದಿ ಪರವಾದ “ಅಂತರ್ಗಾಮಿ’ ತೀವ್ರವಾಗಿರುವುದು ಈಗ ಬಹಿರಂಗವಾಗಿದೆ. ಕಾಂಗ್ರೆಸ್‌ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಪ್ರಿಯವಾಗಿದ್ದರೂ ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಟ್ಟದ್ದು ನಷ್ಟ ತಂದಿತು. ಜೆಡಿಎಸ್‌ ಚಿಹ್ನೆ ಉಡುಪಿ ಜಿಲ್ಲೆಗೆ ಹೊಸತೆಂದೇ ಹೇಳಬಹುದು. ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದರೆ ಇದಕ್ಕಿಂತ ಹೆಚ್ಚಿಗೆ ಮತ ಪಡೆಯುತ್ತಿದ್ದರು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.

ಲಕ್ಷಾಂತರ- ಅಂದು ಇಂದು
ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಐದು ಬಾರಿ ಚುನಾಯಿತರಾದ ಕಾಂಗ್ರೆಸ್‌ ನಾಯಕ ಆಸ್ಕರ್‌ ಫೆರ್ನಾಂಡಿಸ್‌ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಮೂರು ಬಾರಿ, ಟಿ.ಎ.ಪೈ ಒಂದು ಬಾರಿ ಗೆಲುವು ಸಾಧಿಸಿದ್ದರು. ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಡಿ.ಎಂ.ಪುಟ್ಟೇಗೌಡರು ಎರಡು ಬಾರಿ, ಡಿ.ಕೆ. ತಾರಾದೇವಿ ಒಂದು ಬಾರಿ ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ದರು. 2014ರಲ್ಲಿ ತಾನೇ ದಾಖಲೆ ನಿರ್ಮಿಸಿದ 1,81,643 ಮತಗಳ ಅಂತರವನ್ನು ಶೋಭಾ ಈಗ ಮುರಿದಿದ್ದಾರೆ.

23 ವರ್ಷಗಳ ಬಳಿಕ ಪುನರಾಯ್ಕೆ
1980ರಿಂದ 1996ರವರೆಗೆ ಐದು ಬಾರಿ ಸತತವಾಗಿ ಕಾಂಗ್ರೆಸ್‌ ನಾಯಕ ಆಸ್ಕರ್‌ ಫೆರ್ನಾಂಡಿಸ್‌ ಆಯ್ಕೆಯಾದ ಬಳಿಕ ಇದುವರೆಗೂ ಯಾವುದೇ ಸಂಸದರು ಪುನರಾಯ್ಕೆ ಆಗಿರಲಿಲ್ಲ. 1998ರಲ್ಲಿ ಐ.ಎಂ. ಜಯರಾಮ ಶೆಟ್ಟಿ (ಬಿಜೆಪಿ), 1999- ವಿನಯಕುಮಾರ ಸೊರಕೆ (ಕಾಂಗ್ರೆಸ್‌), 2004- ಮನೋರಮಾ ಮಧ್ವರಾಜ್‌ (ಬಿಜೆಪಿ), 2009- ಡಿ.ವಿ.ಸದಾನಂದ ಗೌಡ (ಬಿಜೆಪಿ), 2012ರಲ್ಲಿ ಕೆ.ಜಯಪ್ರಕಾಶ್‌ ಹೆಗ್ಡೆ (ಕಾಂಗ್ರೆಸ್‌), 2014ರಲ್ಲಿ ಶೋಭಾ ಕರಂದ್ಲಾಜೆ (ಬಿಜೆಪಿ) ಆಯ್ಕೆಯಾದರು. 2019ರಲ್ಲಿ ಶೋಭಾ ಮತ್ತೆ ಆಯ್ಕೆಯಾದರು.

ನಿರಂತರ ಮುನ್ನಡೆ
ಪ್ರಥಮ ಸುತ್ತಿನಲ್ಲಿಯೇ 20,933 ಮತಗಳ ಮುನ್ನಡೆ ಸಾಧಿಸಿದ ಶೋಭಾ ಕರಂದ್ಲಾಜೆ, ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡು 3,49,599 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಯುವ ಮತದಾರರ ಜೋಶ್‌
ಮತದಾರರ ಪ್ರಮಾಣ ಏರಿಕೆಯಾಗಿದ್ದು ಮೋದಿ ಕಡೆ ವಾಲಿದ್ದು ಸ್ಪಷ್ಟ. 31,014 ಯುವ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದು ಮಾತ್ರವಲ್ಲದೆ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ