“ವಿಜ್ಞಾನ ಸಹಿತ ಯಾವುದೇ ಕ್ಷೇತ್ರದಲ್ಲಿ ಆಸಕ್ತಿಯಿದ್ದಾಗ ಸಾಧನೆ ಸಾಧ್ಯ’

Team Udayavani, Feb 28, 2019, 1:00 AM IST

vijnana.jpg

ಮಣಿಪಾಲ: ವಿಜ್ಞಾನ ಸಹಿತ ಯಾವುದೇ ಕ್ಷೇತ್ರದಲ್ಲೂ ಆಸಕ್ತಿಯಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಮಾಹೆ ರಿಜಿಸ್ಟ್ರಾರ್‌ ಡಾ| ನಾರಾಯಣ ಸಭಾಹಿತ್‌ ಹೇಳಿದರು.

ಅವರು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮಣಿಪಾಲ ಸ್ಕೂಲ್‌ ಆಫ್ ಲೈಫ್ ಸೈನ್ಸ್‌ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಹಾಗೂ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಜ್ಞಾನ 
ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಲ್ಲೇ ವಿಜ್ಞಾನದ ಆಸಕ್ತಿಯನ್ನು ಮೂಡಿಸುವ ಸಲುವಾಗಿ ಕಳೆದ 
15 ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. 

ಇದರಿಂದ ಪ್ರೇರಣೆ ಪಡೆದು ಗ್ರಾಮೀಣ ವಿದ್ಯಾರ್ಥಿಗಳೂ ವಿಜ್ಞಾನಿಗಳಾಗಿ ರೂಪುಗೊಳ್ಳುವುದು ಸಾಧ್ಯ ಎಂದರು.
ಸಂಸ್ಥೆಯ ನಿರ್ದೇಶಕ ಕೆ. ಸತ್ಯಮೂರ್ತಿ ಅವರು ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ಸಿ.ವಿ. ರಾಮನ್‌ ಅವರ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಿದರು. ಬಹುಮಾನ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿದ ವಿಜ್ಞಾನ ಮಾದರಿಗಳ ಬಗ್ಗೆ ತಿಳಿಸಿದರು.

ವಿಜ್ಞಾನ ವಸ್ತು ಪ್ರದರ್ಶನ
ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ತರಬೇತಿಗೆ ಆಗಮಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳು ರಚಿಸಿದ ಸುಮಾರು 50 ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನ ಆರಂಭವಾಗಿದ್ದು, ಫೆ. 28ರಂದು ಜಿಲ್ಲೆಯ ವಿವಿಧೆಡೆಗಳ ವಿದ್ಯಾರ್ಥಿಗಳು ರಚಿಸಿದ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಲಿದೆ. ಸಿ.ವಿ. ರಾಮನ್‌ ಅವರ ಭಾವಚಿತ್ರವಿರುವ ಫ‌ಲಕವನ್ನು ಅನಾವರಣಗೊಳಿಸಿ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಇಸಿಜಿ ಮಾನಿಟರ್‌, ಈಸ್ಟ್‌ ಪಂಪ್‌, ವೈನ್‌ ಪ್ರೊಡಕ್ಷನ್‌, ಸೂಕ್ಷ್ಮಾಣು ಜೀವಿಗಳು, ಅವುಗಳಿಂದ ಉಂಟಾಗುವ ಕಾಯಿಲೆ, ಕಿಣ್ವಗಳು, ಪ್ಲಾಸ್ಮಾ, ಆಮ್ಲಜನಕ ಉತ್ಪಾದನೆ, ಸೈಕ್ಲೋಸಿಸ್‌, ಹೂ-ಎಲೆಗಳ ವರ್ಣ ದರ್ಶನ, ಮಿದುಳು, ಹೈಡ್ರಾಲಿಕ್ಸ್‌, ಜೆನೆಟಿಕ್ಸ್‌, ಭೌತ ಮತ್ತು ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳು ಪ್ರದರ್ಶನದಲ್ಲಿದ್ದವು.

ತರಬೇತಿ ಕಾರ್ಯಾಗಾರ
ವಿಜ್ಞಾನ ದಿನದ ಅಂಗವಾಗಿ ಸಂಸ್ಥೆಯಲ್ಲಿ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 5 ದಿನಗಳ ವಿಜ್ಞಾನ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಅವರಿಗೆ ವಿಜ್ಞಾನದ ಕೌತುಕ, ಲ್ಯಾಬೋರೇಟರಿ ಸಂಶೋಧನೆ, ಜೆನೆಟಿಕ್ಸ್‌ ಇತ್ಯಾದಿಗಳ ಮಾಹಿತಿ, ಪ್ರಾತ್ಯಕ್ಷಿಕೆ ನೀಡಲಾಯಿತು.  ಪತ್ರಕರ್ತ ಶೇಚಾದ್ರಿ ಚಾರಿ, ಉಪನ್ಯಾಸಕರಾದ ಡಾ| ಟಿ.ಜಿ. ವಾಸುದೇವನ್‌, ಪ್ರೊ| ಭರತ್‌ಪ್ರಸಾದ್‌, ಪಿಆರ್‌ಒ ಬಾಬಣ್ಣ ಮೊದಲಾದವರಿದ್ದರು.

ಆನೆಯ ಟೂತ್‌ಪೇಟ್ಸ್‌!
ತರಬೇತಿ ವೇಳೆ ವಿಜ್ಞಾನದ ಹೊಸ ಪ್ರಪಂಚವೇ ಕಣ್ಣಿಗೆ ಕಟ್ಟಿದಂತಾಗಿದೆ. ರಕ್ತ ವರ್ಗೀಕರಣ, ಜೀವಕೋಶಗಳಿಂದ ಡಿಎನ್‌ಎ ಪ್ರತ್ಯೇಕಿಸುವಿಕೆ, ಆನೆಯ ಟೂತ್‌ಪೇಸ್ಟ್‌ ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಸಾಧ್ಯವಾಗಿದೆ. ವಿಜ್ಞಾನ ವಿಷಯದಲ್ಲಿ ಮುಂದುವರಿಯುವ ಪ್ರೇರಣೆ ದೊರೆತಿದೆ.
-ಸಮೀಕ್ಷಾ, ಎಸ್‌ಎಲ್‌ಎನ್‌ಪಿ ವಿದ್ಯಾಲಯ, ಪಾಣೆ ಮಂಗಳೂರು

ಚೀನ ಮಾದರಿಯ ಅಂತಸ್ತು ಕೃಷಿ
ನೀರಿನ ಮಿತವ್ಯಯದೊಂದಿಗೆ ವಿಶಿಷ್ಟ ಕ್ರಮದಲ್ಲಿ ಮಾಡಲಾಗುವ ಚೀನ ಮಾದರಿಯ ಅಂತಸ್ತು ಕೃಷಿಯ ಮಾದರಿ ಆಕರ್ಷಣೀಯವಾಗಿತ್ತು. ಬಾಟಲ್‌ಗ‌ಳನ್ನು ಉಪಯೋಗಿಸಿ ಅಂತಸ್ತು ಕೃಷಿಯನ್ನು ಬಿಂಬಿಸಲಾಗಿದ್ದು, ಮೇಲೆ ಹಾಕಿದ ನೀರನ್ನು ಗಿಡಗಳು ಬೇಕಾದಷ್ಟು ಬಳಸಿ ಕೆಳ ಅಂತಸ್ತಿನ ಗಿಡಗಳಿಗೆ ಬಿಟ್ಟುಕೊಡುವ ತಣ್ತೀವನ್ನು ಬಿತ್ತರಿಸಲಾಗಿತ್ತು.

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.