“ಮಾತೃಪೂರ್ಣ’ ಯೋಜನೆ ಯಶಸ್ಸಾಗುವುದೆ?
Team Udayavani, Oct 5, 2017, 2:57 PM IST
ಉಡುಪಿ: ಗರ್ಭಿಣಿಯರು, ಬಾಣಂತಿಯರು, ಚಿಕ್ಕಮಕ್ಕಳಿಗೆ ಪೌಷ್ಟಿಕಾಂಶ ಇರುವ ಆಹಾರ ಪೂರೈಸುವ “ಮಾತೃಪೂರ್ಣ’ ಯೋಜನೆ ಅ. 2ರಂದು ರಾಜ್ಯಾದ್ಯಂತ ಆರಂಭಗೊಂಡಿದೆ. ಇದು ಕರಾವಳಿ, ಮಲೆನಾಡು ಪ್ರದೇಶದಲ್ಲಿ ಯಶಸ್ವಿಯಾಗಲು ಸಾಧ್ಯವೆ? ಕರಾವಳಿಗೆ ಸೂಕ್ತವಲ್ಲ ಅಂಗನವಾಡಿ ಕೇಂದ್ರಗಳ ಮೂಲಕ ಎಲ್ಲ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ವನ್ನು ಪೂರೈಸಬೇಕು ಎಂಬ ಯೋಜನೆಯನ್ನು ಬೆಂಗಳೂರೋ? ದಿಲ್ಲಿಯಲ್ಲಿಯೋ ಕುಳಿತು ರೂಪಿಸಬಹುದು. ಆದರೆ ಇದು ಎಷ್ಟರಮಟ್ಟಿಗೆ ಸಾಧ್ಯ?
ಹಂಚಿ ತಿನ್ನುವ ಸಂಸ್ಕೃತಿಯಿಂದ ಬಾಣಂತಿ, ಗರ್ಭಿಣಿಯರಿಗೆ ಕೊಟ್ಟ ಆಹಾರ ಪೂರ್ತಿ ತಲುಪುತ್ತಿಲ್ಲ ಎಂಬ ವಾದವನ್ನು ಒಪ್ಪಬಹುದಾದರೂ ಹೊಸ ಯೋಜನೆ ಯಶಸ್ಸಾಗುವುದು ಸಂಶಯ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮನೆಗಳು ಚದುರಿಕೊಂಡು ಇವೆ. ಇಂತಹ ಕಡೆ ಯೋಜನೆ ಕಷ್ಟಸಾಧ್ಯ ಎನ್ನುತ್ತಾರೆ ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಿವೃತ್ತ ಅಧಿಕಾರಿ ಸದಾನಂದ ನಾಯಕ್.
ನಡೆಯುವುದು ಸಾಧ್ಯವೆ?
ಕರಾವಳಿ, ಮಲೆನಾಡು ಭಾಗಗಳಲ್ಲಿ ಬಾಣಂತಿಯರು, ಗರ್ಭಿಣಿಯರ ಮನೆಗೂ ಅಂಗನವಾಡಿಕೇಂದ್ರಕ್ಕೂ 2- 3 ಕಿ.ಮೀ. ದೂರ ಇವೆ. ಇಷ್ಟು ದೂರ ನಡೆದುಕೊಂಡು ಹೋಗುವುದು ಎಷ್ಟರ ಮಟ್ಟಿಗೆ ಸಾಧ್ಯ? ರಿಕ್ಷಾದಲ್ಲಿ ಹೋಗುವುದು ಲಾಭದಾಯಕವಲ್ಲ. ಇಂತಹ ಫಲಾನುಭವಿಗಳಿಗೆ ಮುಂಬೈಯಲ್ಲಿದ್ದಂತೆ ಡಬ್ಟಾವಾಲರ ಮೂಲಕ ಆಹಾರ ಪೂರೈಸಬೇಕೆಂದು ಉಡುಪಿ ಜಿಲ್ಲಾಧಿಕಾರಿಯವರು ಚಿಂತನೆ ಹರಿಬಿಟ್ಟಿದ್ದಾರೆ. ಮತ್ತೆ ಈ ಆಹಾರ ಹಂಚಿ ತಿನ್ನುವ ಸಂಸ್ಕೃತಿಯಿಂದ ಫಲಾನುಭವಿಗೇ ತಲುಪುವುದು ಶತಃಸಿದ್ಧ ಎಂದು ಹೇಳುವಂತಿಲ್ಲ. ಗರ್ಭಿಣಿಯರು, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ನಡೆದುಕೊಂಡು ಬಂದು ಅವರು ಸಿದ್ಧಪಡಿಸಿಕೊಟ್ಟ ಆಹಾರವನ್ನು ತಿಂದು ಹೋಗುವುದೂ ಸಂಶಯವೇ ಸರಿ. ಅಂಗನವಾಡಿ ಕೇಂದ್ರಗಳಿಗೆ ಪಾತ್ರೆಗಳನ್ನು ಖರೀದಿಸಲು ಯೋಜನೆ ರೂಪಿಸಲಾಗಿದೆ. ಉತ್ತಮ ಆಹಾರ ಸಿಗಬೇಕೆಂಬ ಈ ಯೋಜನೆಯ ಆಹಾರವನ್ನು ಬೇಯಿಸುವುದು ಅತಿ ಕೆಟ್ಟ ಲೋಹದ ಪಾತ್ರೆಗಳಲ್ಲಿ. ಈ ಅಗ್ಗದ ಪಾತ್ರೆಗಳಲ್ಲಿ ಬೇಯಿಸಿದ ಆಹಾರ ಪದಾರ್ಥಗಳು ಎಷ್ಟು ಆರೋಗ್ಯದಾಯಿ ಎಂಬ ಬಗ್ಗೆ ಪೌಷ್ಟಿಕಾಂಶ ತಜ್ಞರು ಮತ್ತೆ ಅಧ್ಯಯನ ನಡೆಸುವುದು ಸೂಕ್ತ.
ಒತ್ತಡದಿಂದ ನಡೆಯುತ್ತಿದೆ
ಎಲ್ಲ ಅಂಗನವಾಡಿಗಳಲ್ಲಿ ಆಹಾರ ಬೇಯಿಸಲು ಪಾತ್ರೆಗಳ ಪೂರೈಕೆ ಆಗಿಲ್ಲ. ಇದನ್ನು ಬೇಯಿಸಿ ಕೊಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಕೊಡುವ ಪ್ರಸ್ತಾವವೇನೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಾಣಂತಿಯರು, ಗರ್ಭಿಣಿಯರು ಅಂಗನವಾಡಿಗಳಿಗೆ ಬಂದರೆ ಅಗತ್ಯವಾದ ಶೌಚಾಲಯದ ವ್ಯವಸ್ಥೆ ಇಲ್ಲ. ಮಳೆ ಬಂದರೆ ರಕ್ಷಣೆಯೂ ಇಲ್ಲ. 10-20 ಜನರು ಬಂದರೆ ಕುಳಿತುಕೊಳ್ಳಲು ಜಾಗವಿಲ್ಲ. ಇದು ರಾಜ್ಯ ಮಟ್ಟದ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಟ್ಟದ ಉಪನಿರ್ದೇಶಕರು, ಸಿಡಿಪಿಒ, ವಲಯದ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಹೀಗೆ ಮೇಲಿನಿಂದ ಕೆಳಗೆ
ಕೆಳಗೆ ಬಂದಂತೆ ಒತ್ತಡ ಹೇರಿ ಕೆಲಸ ನಡೆಸುತ್ತಿದ್ದಾರೆ. ಅ. 2ರಂದು ಉದ್ಘಾಟನೆಯಾದ ಬಳಿಕ ಸಮೀಕ್ಷೆ ಮಾಡಿ ನೋಡಿದರೆ ತಿಳಿಯುತ್ತದೆ.
ಪ್ರಾಣೇಶ್ ಹೆಜಮಾಡಿ, ಬಾಲವಿಕಾಸ ಸಮನ್ವಯ ಸಮಿತಿ ಅಧ್ಯಕ್ಷ, ಹೆಜಮಾಡಿ ಕೇಂದ್ರ
ಮಟಪಾಡಿ ಕುಮಾರಸ್ವಾಮಿ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ
ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ಹೊಸ ಸೇರ್ಪಡೆ
ಮೆಡಿಕಲ್ ಸೀಟು ಕೊಡಿಸುವ ಆಮಿಷ: ವಿದ್ಯಾರ್ಥಿಗಳ ಪೋಷಕರಿಂದ ಲಕ್ಷ ಲಕ್ಷ ಹಣ ಪಡೆದು ವಂಚನೆ
ಬಜೆಟ್ ನಲ್ಲಿ ಮೈಸೂರು ಅಭಿವೃದ್ಧಿಗೆ ಒತ್ತು ಕೊಡಲು ಸಿಎಂ ಗಮನಕ್ಕೆ ತರುವೆ: ಸೋಮಶೇಖರ್
ಗಣರಾಜ್ಯೋತ್ಸವ: ಟ್ರ್ಯಾಕ್ಟರ್ ರಾಲಿ ವೇಳೆ ಐಎಸ್ಐ, ಖಾಲಿಸ್ತಾನ್ ವಿಧ್ವಂಸಕ ಕೃತ್ಯಕ್ಕೆ ಸಂಚು?
ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಆತ್ಮಹತ್ಯೆ
ಪರಾಕ್ರಮ್ ದಿವಸ್ ಕಾರ್ಯಕ್ರಮಕ್ಕೆ ಬಿಜೆಪಿಯವರಿಗೆ ಹೆಚ್ಚು ಆಹ್ವಾನ : ತೃಣಮೂಲ ಆರೋಪ