ಜಿಲ್ಲೆಯಲ್ಲಿ ವೆಲ್ಲೂರು ಮಾದರಿ ಘನ ತ್ಯಾಜ್ಯ ನಿರ್ವಹಣೆ


Team Udayavani, Jun 5, 2018, 6:00 AM IST

0406udcp1.jpg

ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರಕ್ಕೆ ಮುಖ್ಯ ಮಾರಕವಾದುದು ಪ್ಲಾಸ್ಟಿಕ್‌. ಪ್ಲಾಸ್ಟಿಕ್‌ ತ್ಯಾಜ್ಯ ಸಹಿತ ಇತರ ತ್ಯಾಜ್ಯಗಳನ್ನು ಉಪಯೋಗಿಸಿಕೊಂಡು ಕಸದಿಂದ ರಸ ತೆಗೆಯಲಾಗುತ್ತಿದೆ. ಪ್ಲಾಸ್ಟಿಕ್‌ನ್ನು ಕಡಿಮೆಯಾಗಿ ಬಳಸಬೇಕು, ಬಳಸಿದ ಬಳಿಕ ಮರುಬಳಕೆಗೆ ಉಪಯೊಗಿಸಬೇಕೆಂಬ ಸಂದೇಶ ಇಲ್ಲಿದೆ.

ಉಡುಪಿ: ತಮಿಳುನಾಡಿನ ವೆಲ್ಲೂರು ಮಾದರಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಉಡುಪಿ ಜಿಲ್ಲಾಡಳಿತ ಪಣ ತೊಟ್ಟಿದೆ. ಅದರಂತೆ ಘನ ತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆ (ಎಸ್‌ಎಲ್‌ಆರ್‌ಎಂ) ತಂಡ ಕಾರ್ಯಾಚರಿಸುತ್ತಿದ್ದು ನಿರೀಕ್ಷಿತ ಪ್ರಗತಿ ಕಾಣುತ್ತಿದೆ. ಮುಂದಿನ ಗಾಂಧಿ ಜಯಂತಿಯಂದು (ಅ. 2) ತ್ಯಾಜ್ಯ ಮುಕ್ತ ಉಡುಪಿ ಜಿಲ್ಲೆ ಘೋಷಣೆಯಾಗಲಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಜಿಲ್ಲಾಡಳಿತವು ಸ್ವತ್ಛ ಉಡುಪಿ ಮಿಶನ್‌ ಮೂಲಕ ಸ್ವತ್ಛತೆಯೊಂದಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದೆ. ಜಿಲ್ಲಾಡಳಿತದಿಂದಲೇ ಉತ್ತಮ ತರಬೇತಿ ಪಡೆದಿರುವ ಘನ ತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆ (ಎಸ್‌ಎಲ್‌ಆರ್‌ಎಂ) ತಂಡ ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮಾರ್ಗದರ್ಶನದಲ್ಲಿ ವೆಲ್ಲೂರಿನಲ್ಲಿ ಯಶಸ್ವಿಯಾಗಿ ತ್ಯಾಜ್ಯ ನಿರ್ವಹಣೆ ಮಾಡಿರುವ ಹಾಗೂ ಇಂಡಿಯನ್‌ ಗ್ರೀನ್‌ ಸರ್ವೀಸಸ್‌ನ ಪ್ರಾಜೆಕ್ಟ್ ಡೈರೆಕ್ಟರ್‌ ವೆಲ್ಲೂರು ಶ್ರೀನಿವಾಸನ್‌ ಅವರ ನಿರ್ದೇಶನದಲ್ಲಿ ತ್ಯಾಜ್ಯ ವಿಂಗಡಣೆ, ನಿರ್ವಹಣೆ, ಮರು ಬಳಕೆಯಾಗುತ್ತಲಿದೆ.

ಮನೆಯಲ್ಲೇ ಮೊದಲ ವಿಂಗಡಣೆ
ಗ್ರಾ.ಪಂ. ವ್ಯಾಪ್ತಿಯ ಮನೆಗಳಿಗೆ ತೆರಳಿ ಸರ್ವೇ ಕಾರ್ಯ ನಡೆಸಿ ಅವರಿಗೆ ಕಸ ವಿಂಗಡಣೆಯ ಮಾಹಿತಿಯನ್ನು ನೀಡಲಾಗಿದೆ. ಕೆಂಪು ಮತ್ತು ಹಸಿರು ಬಕೆಟ್‌ಗಳನ್ನು ಮನೆಗಳಿಗೆ ಒದಗಿಸಲಾಗಿದೆ. ಮನೆಯವರು ಪ್ಲಾಸ್ಟಿಕ್‌, ಗಾಜು ಇಂತಹ ತ್ಯಾಜ್ಯಗಳನ್ನು ಕೆಂಪು ಬಕೆಟ್‌ಗೆ, ಹಸಿ ತರಕಾರಿಗಳಂತಹ ತ್ಯಾಜ್ಯವನ್ನು ಹಸಿರು ಬಕೆಟ್‌ಗೆ ಹಾಕಿಡಬೇಕು. ತ್ರಿಚಕ್ರ ಸೈಕಲ್‌ನಲ್ಲಿ ಮನೆಗಳಿಗೆ ತೆರಳುವ ಎಸ್‌ಎಲ್‌ಆರ್‌ಎಂ ತಂಡದವರು ಬಕೆಟ್‌ ತ್ಯಾಜ್ಯಗಳನ್ನು ಸಂಗ್ರಹಿಸುತ್ತಾರೆ. ಅಲ್ಲಿಂದ ತ್ಯಾಜ್ಯಗಳು ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಸ್‌ಎಲ್‌ಆರ್‌ಎಂ ಕೇಂದ್ರಗಳಿಗೆ ಬಂದು ವ್ಯವಸ್ಥಿತವಾಗಿ ವಿಂಗಡಣೆಯಾಗುತ್ತವೆ. ಎಲ್ಲವನ್ನೂ ನೀರಿನಲ್ಲಿ ತೊಳೆಯಲಾಗುತ್ತದೆ. ಆನಂತರ ಮರುಬಳಕೆಯಾಗಬಹುದಾದಂತಹ ತ್ಯಾಜ್ಯಗಳನ್ನು ಪ್ರತ್ಯೇಕ ವಿಂಗಡಿಸಲಾಗುವುದು. ಉತ್ಪನ್ನ ತಯಾರಿಕಾ ತ್ಯಾಜ್ಯವು ದೊಡ್ಡಣಗುಡ್ಡೆಯಲ್ಲಿರುವ ಎಸ್‌ಎಲ್‌ಆರ್‌ಎಂ ಕೇಂದ್ರಕ್ಕೆ ರವಾನೆಯಾಗುತ್ತದೆ. ಕೊಳೆತ ತರಕಾರಿಗಳನ್ನು ಕಾಂಪೋಸ್ಟ್‌ ಗೊಬ್ಬರಕ್ಕೆ ಉಪಯೋಗಿಸಲಾಗುತ್ತದೆ.

ತಯಾರಾಗುತ್ತಿದೆ ಹಲವು ಉತ್ಪನ್ನಗಳು
ತ್ಯಾಜ್ಯ ವಿಂಗಡಣೆಯಾಗಿ ಸಿಗುವ ಬಟ್ಟೆ ವಸ್ತುಗಳನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು ಡೋರ್‌ ಮ್ಯಾಟ್‌, ಕ್ಯಾರಿ ಬ್ಯಾಗ್‌ಗಳನ್ನು ಮಾಡಲಾಗುತ್ತಿದೆ. 

ವಾಶಿಂಗ್‌ ಪೌಟರ್‌, ಗಿಡಗಳಿಗೆ ಉತ್ತಮ ಪೋಷಕಾಂಶ ಒದಗಿಸುವ ಪಂಚಗವ್ಯ, ಅಮೃತಪಾನಿ ಉತ್ಪನ್ನ, ಕೀಟನಾಶಕವಾದ ಬಯೋ ಪೆಸ್ಟಿಸೈಡ್‌ ಮೊದಲಾದ 25 ಕ್ಕೂ ಅಧಿಕ ಸಾವಯವ ಉತ್ಪನ್ನಗಳು ದೊಡ್ಡಣಗುಡ್ಡೆಯಲ್ಲಿರುವ ಎಸ್‌ಎಲ್‌ಆರ್‌ಎಂ ಉತ್ಪನ್ನಗಳ ತಯಾರಿ ಮತ್ತು ಮಾರಾಟ ಮಳಿಗೆಯಲ್ಲಿ ಸಿದ್ಧಪಡಿಸಲಾಗುತ್ತದೆ. ದೇವಸ್ಥಾನಗಳಿಂದ ಬರುವ ಹೂವುಗಳಿಂದ ರಂಗೋಲಿ ಪುಡಿ, ಮೊಟ್ಟೆ ಚಿಪ್ಪುಗಳಿಂದ ಕ್ಯಾಲ್ಸಿಯಂ ತಯಾರಿಸಲಾಗುತ್ತಿದೆ. ಹಾಗೆಯೇ ಭುಜಂಗ ಪಾರ್ಕ್‌ನಲ್ಲಿ ಒಣ ಎಲೆ, ಸೆಗಣಿ ಬಳಸಿ ಕಾಂಪೋಸ್ಟ್‌ ಬೆಡ್‌ ಅನ್ನು ಮಾಡಲಾಗಿದೆ. ಅತ್ಯುತ್ತಮ ಸಾವಯವ ಗೊಬ್ಬರವಾಗಿ ಅದು ಮಾರ್ಪಾಡಾಗಿದೆ ಎಂದು ತಯಾರಿ ಮತ್ತು ಮಾರಾಟ ಮಳಿಗೆಯ ಮುಖ್ಯಸ್ಥ ಭಾಸ್ಕರ್‌ ಶೆಟ್ಟಿ ತಿಳಿಸಿದ್ದಾರೆ.

ಯಶಸ್ವಿ ತಾರಸಿ ತೋಟ
ತ್ಯಾಜ್ಯವನ್ನು ಬಳಸಿ ಗೊಬ್ಬರವನ್ನಾಗಿಸಿ ದೊಡ್ಡಣಗುಡ್ಡೆಯಲ್ಲಿ ತಾರಸಿ ತೋಟ ಮಾಡಲಾಗಿದೆ. ಇಲ್ಲಿ ಹಲವಾರು ಬಗೆಯ ಸಾವಯವ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಉತ್ತಮ ಲಾಭದಾಯಕ ಇಳುವರಿ ಬರುತ್ತಿದೆ. ರವಿವಾರ ಸಾವಯವ ಸಂತೆಯಲ್ಲಿ ತರಕಾರಿ ಬಹುಬೇಗನೆ ಮಾರಾಟವಾಗುತ್ತಲಿದೆ.
ಅನುಷ್ಠಾನಗೊಂಡಿರುವ ಗ್ರಾ.ಪಂ.ನಿಟ್ಟೆ, ವಾರಂಬಳ್ಳಿ, ವಂಡ್ಸೆ, ಹೆಬ್ರಿ, ಹಾರ್ದಳ್ಳಿ- ಮಂಡಳ್ಳಿ, ತ್ರಾಸಿ, ಮರವಂತೆ, ಮೂಡಾರು, ಮುಂಡ್ಕೂರು.

ಪೈಲಟ್‌ ಯೋಜನೆಯಾಗಿ ಆರಂಭ
ಮೊದಲು ನಿಟ್ಟೆ,ವಾರಂಬಳ್ಳಿ,ವಂಡ್ಸೆ ಈ 3 ಗ್ರಾ.ಪಂ.ನಲ್ಲಿ ಪೈಲಟ್‌ ಯೋಜನೆಯಾಗಿ ಪ್ರಾರಂಭಗೊಂಡ ತ್ಯಾಜ್ಯ ವಿಂಗಡಣೆಕಾರ್ಯವು ಇಂದು 9 ಗ್ರಾ.ಪಂ.ಗಳಿಗೆ ವಿಸ್ತರಣೆಯಾಗಿದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ 158 ಗ್ರಾ.ಪಂ.ಗಳಲ್ಲಿಯೂ ಕಸದಿಂದ ರಸ ತೆಗೆಯುವ ಕಾರ್ಯವಾಗಲಿದೆ ಎಂದು ಎಸ್‌ಎಲ್‌ಆರ್‌ಎಂ ತಂಡ ಆಶಾಭಾವನೆ ಹೊಂದಿದೆ.

ಪ್ರವಾಸಿಗರಿಂದ ಸಮಸ್ಯೆ
ಮನೆಯವರು ತ್ಯಾಜ್ಯ ಶೇಖರಿಸಿ ವಿಂಗಡಣೆಯೂ ಮಾಡುತ್ತಾರೆ. ಆದರೆ ಆಯಾ ಊರುಗಳಿಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ  ಪ್ಲಾಸ್ಟಿಕ್‌ ಮೊದಲಾದ ತ್ಯಾಜ್ಯಗಳನ್ನು ಎಸೆಯುವುದರಿಂದ ಅವುಗಳ ಸಂಗ್ರಹಣೆಯಲ್ಲಿ  ಸಮಸ್ಯೆಯಾಗುತ್ತಿದೆ ಎಂದು ಎಸ್‌ಎಲ್‌ಆರ್‌ಎಂ ಕಾರ್ಯಕರ್ತರು ಹೇಳುತ್ತಾರೆ. 

ಎಲ್ಲ ಗ್ರಾ.ಪಂ.ಗಳಿಗೆ ಸೂಚನೆ ರವಾನೆ
9 ಗ್ರಾ.ಪಂ.ಗಳಲ್ಲಿ ಕಾರ್ಯಚಟುವಟಿಕೆ ಪ್ರಾರಂಭವಾಗಿದೆ. ಕೊಕ್ಕರ್ಣೆ ಗ್ರಾ.ಪಂ.ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಆಗಲಿದೆ. ಮತ್ತೂ 5 ಗ್ರಾ.ಪಂ. ಸಿದ್ಧವಾಗುತ್ತಿದೆ. ಹಂತ-ಹಂತವಾಗಿ ಮುಂದುವರಿಯುತ್ತಿದ್ದೇವೆ.ಪ್ಲಾಸ್ಟಿಕ್‌, ಗಾಜು ಇಂತಹ ಒಣ ಕಸಗಳನ್ನಾದರೂ ಪ್ರಾಥಮಿಕವಾಗಿ ಜಿಲ್ಲೆಯ ಎಲ್ಲ ಗ್ರಾ.ಪಂ.ನವರು ಮನೆಗಳಿಂದ ಸಂಗ್ರಹಿಸಬೇಕು. ಕನಿಷ್ಠ  1 ವಾರ್ಡ್‌ನಲ್ಲಾದರೂ ಇಂತಹ ಕೆಲಸ ಪ್ರಾರಂಭಿಸಬೇಕು ಎಂದು ಎಲ್ಲ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿದೆ. ತ್ಯಾಜ್ಯ ಸಂಗ್ರಹಣೆ, ನಿರ್ವಹಣೆ ಜಿಲ್ಲೆಯಲ್ಲಿ ಯಶಸ್ಸು ಕಾಣಲಿದೆ.
– ಶ್ರೀನಿವಾಸ ರಾವ್‌, ನೋಡಲ್‌ ಅಧಿಕಾರಿ (ಜಿ.ಪಂ. ಮುಖ್ಯಯೋಜನಾಧಿಕಾರಿ)

– ಚೇತನ್‌ ಪಡುಬಿದ್ರಿ

ಟಾಪ್ ನ್ಯೂಸ್

ಮದುವೆಗೆ ಮೊದಲೇ ವಿಕ್ಕಿ-ಕತ್ರಿನಾ ವಿರುದ್ಧ ದೂರು

ಮದುವೆಗೆ ಮೊದಲೇ ವಿಕ್ಕಿ-ಕತ್ರಿನಾ ವಿರುದ್ಧ ದೂರು

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ಕೊಡಿಸಿದ ಪುಣ್ಯಾತ್ಮ ಕೊಂಡಯ್ಯ: ಸಂತೋಷ ಲಾಡ್

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ಕೊಡಿಸಿದ ಪುಣ್ಯಾತ್ಮ ಕೊಂಡಯ್ಯ: ಸಂತೋಷ ಲಾಡ್

ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಇಎಂಐ ಶುಲ್ಕ ದುಬಾರಿ

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಇಎಂಐ ಶುಲ್ಕ ದುಬಾರಿ

ಒಮಿಕ್ರಾನ್‌ ರೂಪಾಂತರಿ ಹಿನ್ನೆಲೆ: ಬಡ್ಡಿದರ ಯಥಾ ಸ್ಥಿತಿ ಸಾಧ್ಯತೆ

ಒಮಿಕ್ರಾನ್‌ ರೂಪಾಂತರಿ ಹಿನ್ನೆಲೆ: ಬಡ್ಡಿದರ ಯಥಾ ಸ್ಥಿತಿ ಸಾಧ್ಯತೆ

ರಾಜ್ಯದಲ್ಲಿಂದು 299 ಕೋವಿಡ್‌ ಸೋಂಕು ಪತ್ತೆ: 6 ಸಾವು

ರಾಜ್ಯದಲ್ಲಿಂದು 299 ಕೋವಿಡ್‌ ಸೋಂಕು ಪತ್ತೆ: 6 ಸಾವು

ಗೋವಾ: ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಶಾಸಕ ರವಿ ನಾಯ್ಕ್ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ

ಗೋವಾ: ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಶಾಸಕ ರವಿ ನಾಯ್ಕ್ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪದವಿ ವಿದ್ಯಾರ್ಥಿಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತಿ

ಪದವಿ ವಿದ್ಯಾರ್ಥಿಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತಿ

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

1-sdsad

ಕಾರ್ಕಳ : ಖ್ಯಾತ ಜ್ಯೋತಿಷಿ ರಾಜಗೋಪಾಲ್ ಭಟ್ ವಿಧಿವಶ

ಸಿ.ಎ. ಸೈಟ್‌ಗೆ ಸಂಘ-ಸಂಸ್ಥೆಗಳ ನಿರಾಸಕ್ತಿ

ಸಿ.ಎ. ಸೈಟ್‌ಗೆ ಸಂಘ-ಸಂಸ್ಥೆಗಳ ನಿರಾಸಕ್ತಿ

“ಸುಭಿಕ್ಷೆಯ ನಾಡಿಗೆ ಧರ್ಮ, ರಾಜಕೀಯ ಅಗತ್ಯ’

“ಸುಭಿಕ್ಷೆಯ ನಾಡಿಗೆ ಧರ್ಮ, ರಾಜಕೀಯ ಅಗತ್ಯ’

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

ಮದುವೆಗೆ ಮೊದಲೇ ವಿಕ್ಕಿ-ಕತ್ರಿನಾ ವಿರುದ್ಧ ದೂರು

ಮದುವೆಗೆ ಮೊದಲೇ ವಿಕ್ಕಿ-ಕತ್ರಿನಾ ವಿರುದ್ಧ ದೂರು

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ಕೊಡಿಸಿದ ಪುಣ್ಯಾತ್ಮ ಕೊಂಡಯ್ಯ: ಸಂತೋಷ ಲಾಡ್

ಗ್ರಾಮ ಪಂಚಾಯ್ತಿ ಸದಸ್ಯರಿಗೆ ಮತದಾನ ಹಕ್ಕು ಕೊಡಿಸಿದ ಪುಣ್ಯಾತ್ಮ ಕೊಂಡಯ್ಯ: ಸಂತೋಷ ಲಾಡ್

ಇಂದಿರಾಗಾಂಧಿ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ತೆರೆ

ಇಂದಿರಾಗಾಂಧಿ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ತೆರೆ

ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

ಕೋವಿಡ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆ ಪರಾರಿ : ಖಾಸಗಿ ಹೋಟೆಲ್‌ ವಿರುದ್ಧ ಎಫ್ಐಆರ್‌

suman

ಭಟ್ಕಳ, ಮುರುಡೇಶ್ವರ ಠಾಣೆಗೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.