ಕಾಪು: ಕೈಪುಂಜಾಲ್ ನಲ್ಲಿ ಮೀನುಗಾರಿಕಾ ದೋಣಿ ಅವಶೇಷ ಪತ್ತೆ; 15 ಲಕ್ಷ ರೂಪಾಯಿ ನಷ್ಟ
Team Udayavani, Jul 2, 2022, 3:05 PM IST
ಕಾಪು: ಮಲ್ಪೆ ಧಕ್ಕೆಯಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಮೀನುಗಾರಿಕಾ ದೋಣಿಯೊಂದು ನೀರಿನ ಸೆಳೆತಕ್ಕೆ ಸಿಲುಕಿ ಪಲ್ಟಿಯಾಗಿದ್ದು ಕೈಪುಂಜಾಲು ಕಡಲ ಕಿನಾರೆಯಲ್ಲಿ ದಡಕ್ಕೆ ಬಂದು ಬಿದ್ದಿದೆ.
ಮೀನುಗಾರಿಕಾ ದೋಣಿ ಸಹಿತವಾಗಿ ಅದರಲ್ಲಿದ್ದ ಬಲೆ, ಇಂಜಿನ್ ಸಹಿತ ಎಲ್ಲಾ ವಸ್ತುಗಳು ಸಮುದ್ರ ಪಾಲಾಗಿದ್ದು ಪಳಿಯುಳಿಕೆಯಂತಹ ಸಾಮಾಗ್ರಿಗಳು ಕೈಪುಂಜಾಲು ಕೆಂಪುಗುಡ್ಡೆಯಲ್ಲಿ ಸಂಪೂರ್ಣ ನುಜ್ಜು ನೂರಾಗಿ ಬಿದ್ದಿವೆ.
ಮಲ್ಪೆಯ ರಾಕೇಶ್ ಮತ್ತು ಯಶವಂತ್ ಎಂಬವರಿಗೆ ಸೇರಿದ ಮೀನುಗಾರಿಕಾ ದೋಣಿ ಇದಾಗಿದ್ದ ಸುಮಾರು 15 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ.
ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.