ಚಟುವಟಿಕೆ ಸ್ತಬ್ಧ ; ಕಲಾವಿದರ ಸಂಕಷ್ಟ ಆಲಿಸುವವರಿಲ್ಲ
Team Udayavani, Aug 26, 2021, 7:50 AM IST
ಕೋಟ: ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಹಾಗೂ ಬಯಲಾಟ ಅಕಾಡೆಮಿಗೆ ಅಧ್ಯಕ್ಷರಿಲ್ಲದೆ ಹಲವು ತಿಂಗಳು ಕಳೆದಿದ್ದು ಅವುಗಳ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದೆ.
ಇಂದಿನ ಕೋವಿಡ್ ಸಂಕಷ್ಟದ ಸಮಯದಲ್ಲಿ ಕಲಾವಿದರ ಸಮಸ್ಯೆಗಳನ್ನು ಸರಕಾರಕ್ಕೆ ಮನವರಿಕೆ ಮಾಡಲೂ ಸಾಧ್ಯವಾಗುತ್ತಿಲ್ಲ.
ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ| ಟಿ.ಬಿ. ಸೊಲಬಕ್ಕನವರ್ 2020ರ ನ. 19ರಂದು ಅಸೌಖ್ಯದಿಂದ ನಿಧನ ಹೊಂದಿದ್ದರು. ಅಂತೆಯೇ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರು 2021 ಎ. 18ರಂದು ನಿಧನ ಹೊಂದಿದ್ದರು. ಹೀಗೆ ತೆರವಾದ ಎರಡೂ ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕೆ ಅರ್ಹರನ್ನು ನಿಯೋಜಿಸುವ ಕಾರ್ಯ ಸರಕಾರದಿಂದ ಇದುವರೆಗೆ ನಡೆದಿಲ್ಲ.
ಕಾರ್ಯಕ್ರಮಗಳಿಗೂ ಹಿನ್ನಡೆ:
ಯಕ್ಷಗಾನ ಅಕಾಡೆಮಿಯಿಂದ ತರಬೇತಿ ಶಿಬಿರ, ದಾಖಲೀಕರಣ, ಹಿರಿಯ ಕಲಾವಿದರಿಗೆ ಗೌರವಾರ್ಪಣೆ, ನೆನಪಿನ ಬುತ್ತಿ ಎನ್ನುವ ಆನ್‌ಲೈನ್ ಲೈವ್ ಮೂಲಕ ಹಿರಿಯ ಕಲಾವಿದರನ್ನು ಪರಿಚಯಿಸುವ ಕಾರ್ಯ ಮುಂತಾದ ಕಾರ್ಯ ಕ್ರಮ ಚಾಲ್ತಿಯಲ್ಲಿದ್ದವು. ಪ್ರಸ್ತುತ ಈ ಎಲ್ಲವೂ ಸ್ಥಗಿತಗೊಂಡಿವೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೂಡ ನಡೆದಿಲ್ಲ. ಬಯಲಾಟ ಅಕಾಡೆಮಿಯಲ್ಲೂ ಇದೇ ರೀತಿ ಹಲವು ಚಟುವಟಿಕೆಗಳು ಸ್ಥಗಿತವಾಗಿವೆ.
ಎಲ್ಲ ಅಕಾಡೆಮಿಗಳಿಗೆ 3 ವರ್ಷಗಳ ಅವಧಿಗೆ ಸದಸ್ಯರು, ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಈಗಾಗಲೇ 2 ವರ್ಷ ಕೋವಿಡ್ ಕಾರಣ ಕಾರ್ಯ ಕ್ರಮಗಳಿಗೆ ಹಿನ್ನಡೆಯಾಗಿದ್ದು, ಇನ್ನುಳಿದ ಒಂದು ವರ್ಷ ಅವಧಿಯ ಚಟುವಟಿಕೆಗಳು ವೇಗವಾಗಿ ನಡೆಸುವ ಸಲುವಾಗಿ ಅಧ್ಯಕ್ಷರನ್ನು ಶೀಘ್ರ ನೇಮಿಸುವ ಕಾರ್ಯ ನಡೆಯಬೇಕಿದೆ.
ನಿಂತ ನೀರಾದ ಅಕಾಡೆಮಿಗಳು! :
ಅಕಾಡೆಮಿಯ ಮೂಲಕ ಯಾವುದೇ ಕಾರ್ಯಕ್ರಮ ಆಯೋಜಿಸಬೇಕಾದರೆ ಹಾಗೂ ಈ ಹಿಂದೆ ಹಾಕಿಕೊಂಡ ಕಾರ್ಯಕ್ರಮವನ್ನು ಮುಂದುವರಿಸಬೇಕಾದರೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಆದರೆ ಅಧ್ಯಕ್ಷರೇ ಇಲ್ಲದ ಕಾರಣ ಬಯಲಾಟ ಅಕಾಡೆಮಿಗೆ 9 ತಿಂಗಳಿಂದ ಹಾಗೂ ಯಕ್ಷಗಾನ ಅಕಾಡೆಮಿಗೆ 5 ತಿಂಗಳಿಂದ ಸಭೆ ನಡೆದಿಲ್ಲ.
ಕಲಾವಿದರ ಪರ ಧ್ವನಿಯಾಗಬೇಕಿತ್ತು :
ಕೋವಿಡ್ ಸಂಕಷ್ಟದಲ್ಲಿ ಕಲಾವಿದರು ಕಾರ್ಯಕ್ರಮಗಳಿಲ್ಲದೆ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಅವರ ಕಷ್ಟಗಳನ್ನು ಸರಕಾರಕ್ಕೆ ಮನವರಿಕೆ ಮಾಡಿ ಹೆಚ್ಚಿನ ಸಹಕಾರ ನೀಡುವ ಹಾಗೂ ಸರಕಾರದಿಂದ ಈಗಾಗಲೇ ಜಾರಿಯಾದ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಂಪರ್ಕ ಸೇತುವಾಗಿ ಈ ಅಕಾಡೆಮಿಗಳು ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಾಯಕನಿಲ್ಲದೆ ಇದ್ಯಾವುದೂ ಸಾಧ್ಯವಾಗಿಲ್ಲ.
ಶೀಘ್ರ ಕ್ರಮ :
ಅಧ್ಯಕ್ಷರಿಲ್ಲದೆ ಅಕಾಡೆಮಿಯ ಕಾರ್ಯನಿರ್ವಹಣೆಗೆ ಹಿನ್ನಡೆಯಾಗಿರುವುದು ಹೌದು. ಈ ಬಗ್ಗೆ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಗಮನಕ್ಕೆ ತರಲಾಗಿದೆ. ಅಧ್ಯಕ್ಷರನ್ನು ನೇಮಿಸುವ ಕುರಿತು ಸಚಿವರು ಶೀಘ್ರ ಕ್ರಮ ಕೈಗೊಳ್ಳಲಿದ್ದಾರೆ.- ಎಸ್. ರಂಗಪ್ಪ , ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
–ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಪು : ಪತ್ನಿಗೆ ಕಿರುಕುಳ ನೀಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶಕ್ಕೆ
ಮಣಿಪಾಲ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾದ ಬೈಕ್ ; ವಿದ್ಯಾರ್ಥಿ ಸಾವು
ಮಳೆ ಸಿದ್ಧತೆ, ಟೆಂಡರ್ ರದ್ದತಿ, ಕಾಮಗಾರಿ ವಿಳಂಬ
ಎಸೆಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಸಾಧನೆ : ಸಾಧಕರಿಗೆ ಉದಯವಾಣಿ ಅಭಿನಂದನೆ
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಪ್ರಿಯಾಂಕಾ ಆಚಾರ್ಯ ಅವರ ಸ್ಟ್ರಿಂಗ್ ಆರ್ಟ್ ಸೇರ್ಪಡೆ
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ದ.ಕ. ಜಿಲ್ಲೆಯಲ್ಲಿ ಮರಳು ಹೇರಳವಾಗಿ ಲಭ್ಯ: ಡಿಸಿ ;”ಮರಳು ಮಿತ್ರ’ ಮೂಲಕ ಮಿತ ದರದಲ್ಲಿ ಲಭ್ಯ
ಬೆಳ್ತಂಗಡಿ ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ: ಚಾರ್ಮಾಡಿ ಘಾಟಿ, ಭೂಕುಸಿತ ಪ್ರದೇಶ ಪರಿಶೀಲನೆ
ಈಡನ್ನಲ್ಲಿ ಆರ್ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ ಸೂಪರ್ ಜೈಂಟ್ಸ್
ಸಿಎಂ ದಾವೋಸ್ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ
ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ