- Friday 13 Dec 2019
‘ದೈಹಿಕ, ಬೌದ್ಧಿಕ ಬೆಳವಣಿಗೆಗೆ ಯಕ್ಷಗಾನ ಸಹಕಾರಿ’
Team Udayavani, Jun 20, 2019, 5:39 AM IST
ಮಲ್ಪೆ: ವಿದ್ಯಾರ್ಥಿಗಳು ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿ ಕೊಂಡಲ್ಲಿ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ವಹಿಸಬೇಕು ಎಂದು ರಂಗನಟ, ಯಕ್ಷಗಾನ ಕಲಾವಿದ ಎಂ.ಎಸ್.ಭಟ್ ನುಡಿದರು.
ಅವರು ಸುಮನಸಾ ಕೊಡವೂರು ಸಂಸ್ಥೆಯು ಯಕ್ಷಗಾನ ಕೇಂದ್ರ ಇಂದ್ರಾಳಿ, ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕೊಡವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ಯಕ್ಷಗಾನ ಹೆಜ್ಜೆ ಪುನಃಶ್ಚೇತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
20 ದಿನಗಳ ಕಾಲ ಹಮ್ಮಿಕೊಂಡ ಶಿಬಿರದಲ್ಲಿ 30 ಶಿಬಿರಾರ್ಥಿಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಜತೆ ಕಾರ್ಯದರ್ಶಿ ಪ್ರಜ್ಞಾ ಅಮೀನ್, ಯಕ್ಷಗಾನ ಗುರು ನಿಶ್ಚಲ್ ಉಪಸ್ಥಿತರಿದ್ದರು. ಯೋಗಿಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.
ಈ ವಿಭಾಗದಿಂದ ಇನ್ನಷ್ಟು
-
ಉಡುಪಿ: ಮಣಿಪಾಲದ ಐನಾಕ್ಸ್ ಚಿತ್ರಮಂದಿರದ ಬಳಿ ಶುಕ್ರವಾರ ಮಧ್ಯಾಹ್ನ ಟಿಪ್ಪರ್ ಲಾರಿಯೊಂದು ಬ್ರೇಕ್ ವೈಫಲ್ಯಕ್ಕೀಡಾಗಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದೆ....
-
ಉಡುಪಿ: ಸಾಮಾನ್ಯವಾಗಿ ಎರಡು ಬಾಳೆಹಣ್ಣುಗಳು ಜತೆಯಾಗಿ ಕಂಡುಬರುವುದಿದೆ. ಇದನ್ನು ಅಂಬ್ಡ್ ಬಾಳೆ ಹಣ್ಣು ಎಂದು ಕರೆಯುತ್ತಾರೆ. ಇದರ ತುಳು ಹೆಸರು "ಅಮರ್ ಪಂರ್ದ್'....
-
ಉಡುಪಿ: ಮುಂದಿನ ತಿಂಗಳು ಉಡುಪಿಯಲ್ಲಿ ನಡೆಯಲಿರುವ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬೆಂಗಳೂರಿನ ತಮ್ಮ...
-
ಮಲ್ಪೆ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸುವರ್ಣ ತ್ರಿಭುಜ ದೋಣಿ ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರ ನಾಪತ್ತೆಗೆ ಡಿ. 13ರಂದು ಒಂದು ವರ್ಷ ತುಂಬುತ್ತದೆ. ಮುಳುಗಿದ...
-
ಬೈಂದೂರು: ಕಾಶ್ಮೀರ ಸಮಸ್ಯೆ, ಕಾಸರಗೋಡು ಗಡಿ ಇವೆಲ್ಲ ರಾಷ್ಟ್ರ ,ರಾಜ್ಯಮಟ್ಟದ ವಿಷಯಗಳಾದರೆ ಉಡುಪಿ ಜಿಲ್ಲೆಯ ಶಿರೋಭಾಗ ವಾದ ಶಿರೂರಿನಲ್ಲಿ ಕಳೆದೊಂದು ತಿಂಗಳಿಂದ...
ಹೊಸ ಸೇರ್ಪಡೆ
-
ಉಡುಪಿ: ಮಣಿಪಾಲದ ಐನಾಕ್ಸ್ ಚಿತ್ರಮಂದಿರದ ಬಳಿ ಶುಕ್ರವಾರ ಮಧ್ಯಾಹ್ನ ಟಿಪ್ಪರ್ ಲಾರಿಯೊಂದು ಬ್ರೇಕ್ ವೈಫಲ್ಯಕ್ಕೀಡಾಗಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದೆ....
-
ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಕ್ಕೆ ಅವಕಾಶ ಮತ್ತು ರಕ್ಷಣೆ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ತಕ್ಷಣವೇ ಆದೇಶ ನೀಡಲು ಸುಪ್ರೀಂಕೋರ್ಟ್...
-
ಉಡುಪಿ: ಸಾಮಾನ್ಯವಾಗಿ ಎರಡು ಬಾಳೆಹಣ್ಣುಗಳು ಜತೆಯಾಗಿ ಕಂಡುಬರುವುದಿದೆ. ಇದನ್ನು ಅಂಬ್ಡ್ ಬಾಳೆ ಹಣ್ಣು ಎಂದು ಕರೆಯುತ್ತಾರೆ. ಇದರ ತುಳು ಹೆಸರು "ಅಮರ್ ಪಂರ್ದ್'....
-
ಹೊಸದಿಲ್ಲಿ: ಭಾರತದಲ್ಲೂ ವಿಶ್ವದರ್ಜೆಯ ರೈಲುಗಳು ಓಡಾಡಬೇಕೆನ್ನುವ ಕನಸು ಶೀಘ್ರ ನನಸಾಗಲಿದೆ. 100 ಮಾರ್ಗಗಳಲ್ಲಿ 150 ವಿಶ್ವದರ್ಜೆಯ ಪ್ರಯಾಣಿಕ ರೈಲುಗಳನ್ನು ಒಡಿಸಲು...
-
ನೆಲ್ಯಾಡಿ : ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಶಾಲೆಯ ಕುಡಿಯುವ ನೀರಿನ ಬಾವಿಗೆ ಕೆಲವು ದಿನಗಳ ಹಿಂದೆ ವಿಷ ಹಾಕಿದ ಪ್ರಕರಣದ ಆರೋಪಿಗಳ ಶೀಘ್ರ...