ನಿತ್ಯ ಅರ್ಧ ಗಂಟೆ ಹೂಡಿಕೆ ಮಾಡಿ, ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಿ

Team Udayavani, Jun 28, 2019, 9:51 AM IST

radhakrishna

ಕಾಪು : ಇಂದಿನ ಮಕ್ಕಳಲ್ಲಿ ಸ್ಮರಣ ಶಕ್ತಿ ಕಡಿಮೆ, ಓದಿದ್ದು ತಲೆಯಲ್ಲಿ ಉಳಿಯುವುದಿಲ್ಲ ಎಂಬ ಮಾತು ಸಾಮಾನ್ಯ. ಯಾವ ಪೋಷಕರನ್ನು ಕೇಳಿದರೂ ಅವರದ್ದು ಇದೇ ಪ್ರಶ್ನೆ.

ಈ ಸಮಸ್ಯೆಯ ಮೂಲ ಕಾರಣಬಾಹ್ಯ ಜಗತ್ತು ಒಡ್ಡುವ ಆಮಿಷಗಳು. ಇದರಿಂದ ಮನಸ್ಸು ಚಂಚಲಕ್ಕೆ ಒಳಗಾಗಿ ಏಕಾಗ್ರತೆಗೆ ಭಂಗ ಒದಗುತ್ತದೆ. ಅದರಿಂದ ಓದಿದ್ದಾಗಲೀ, ಅಭ್ಯಾಸ ಮಾಡಿದ್ದಾಗಲೀ ನೆನಪಿನಲ್ಲಿರದು. ಇದನ್ನೇ ಗಮನಿಸಿಯೇ ಕ್ರಮೇಣ ಸ್ಮರಣ ಶಕ್ತಿ ಕಡಿಮೆ ಎಂಬ ಅಭಿಪ್ರಾಯಕ್ಕೆ ಪೋಷಕರು ಬರುವುದು.

ಇದಕ್ಕೆ ಮದ್ದು ಇಲ್ಲ ಎಂದಲ್ಲ, ಇದೆ. ಆದರೆ ಸತತವಾಗಿ ಕೈಗೊಳ್ಳಬೇಕು. ವಿದ್ಯಾರ್ಥಿಗಳು ನಿತ್ಯ ಕನಿಷ್ಠ 10 ನಿಮಿಷ ಉಸಿರಿನ ನಿಯಂತ್ರಣಕ್ಕಾಗಿ ಓಂಕಾರ ಧ್ಯಾನ, ಏಕಾಗ್ರತೆಗಾಗಿ ಭಾಮರೀ ಪ್ರಾಣಾ ಯಾಮ ಮತ್ತು ಸರ್ವಾಂಗಾಸನ, ಶೀರ್ಷಾಸನ, ವೃಕ್ಷಾಸನಗಳನ್ನು ಕಲಿತು, ಅಭ್ಯಾಸ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಂತೆ. ಯಾಕೆಂದರೆ ಮನಸ್ಸು ಒಂದೆಡೆ ಸ್ಥಿರಗೊಳ್ಳುತ್ತದೆ, ಅಂದರೆ ಏಕಾಗ್ರತೆ ಸಾಧ್ಯವಾದಂತೆ. ಅದು ಸಾಧ್ಯ ವಾದರೆ, ಸ್ಮರಣ ಶಕ್ತಿ ಹೆಚ್ಚಾ ದಂತೆಯೇ. ಇದರೊಂದಿಗೆ ಆಹಾರದ ಬಗ್ಗೆಯೂ ಕೊಂಚ ಎಚ್ಚರ ವಹಿಸಬೇಕು.
ನಮ್ಮ ದೇಹ ಸಾತ್ವಿಕ ಮತ್ತು ತಾಮಸಿಕ ಆಹಾರ ಪದ್ಧತಿಗೆ ಪೂರಕ. ಸೇàವಿಸಿದ ಆಹಾರದಂತೆ ಬುದ್ಧಿ ಮತ್ತು ವರ್ತನೆ ಎನ್ನುವುದು ಹಿರಿಯರ ಉಕ್ತಿ. ಜಂಕ್‌ ಫುಡ್‌ ಮತ್ತು ಫಾಸ್ಟ್‌ ಫುಡ್‌ ದೂರ ಮಾಡಿ ಸಾತ್ವಿಕ ಆಹಾರವನ್ನು ಸೇವಿಸುವುದರಿಂದ ಮನಸ್ಸೂ ಶಾಂತ, ಬದುಕಿಗೂ ನೆಮ್ಮದಿ. ಇದನ್ನೇ ಸಾತ್ವಿಕ ಜೀವನ ಎಂದು ಕರೆಯುವುದು. ಇದೇ ಹೆಚ್ಚು ಅನುಕೂಲಕರವಾದುದು.

ಇದನ್ನೂ ಗಮನಿಸಿ
ಸಾಮಾನ್ಯ ಅಭಿಪ್ರಾಯವೆಂದರೆ, ಆಸನ, ಪ್ರಾಣಾಯಾಮ, ಧ್ಯಾನ- ಇವಿಷ್ಟೇ ಯೋಗ. ವಾಸ್ತವ ಹಾಗಲ್ಲ.ಯೋಗ ಜೀವನದಲ್ಲಿ ಅದಕ್ಕಿಂತ ಪ್ರಾಮುಖ್ಯವಾದ ಇನ್ನೆರಡು ಹೆಜ್ಜೆಗಳಿವೆ. ಅವೇ ಯಮ ಮತ್ತು ನಿಯಮ.  ಏನು ಮಾಡಬೇಕು ಮತ್ತು ಏನು ಮಾಡಬಾರದು; ಯಾವುದು ಸ್ವೀಕಾರಾರ್ಹ ಮತ್ತು ಯಾವುದಲ್ಲ ಎಂಬುದನ್ನು ಸೂಚಿಸುವಂಥದ್ದು ಇವು.  ಇವೇ ಆದರ್ಶ ಬದುಕಿಗೊಂದು ಚೌಕಟ್ಟು ಹಾಕಿ ಕೊಡುವಂಥವು. ಯೋಗ ಜೀವನದ ಮುಖ್ಯ ಗುರಿಯೇ ಯಮ ಮತ್ತು ನಿಯಮವನ್ನು ಪಾಲಿಸುವುದು. ಆಸನ, ಪ್ರಾಣಾಯಾಮ, ಧ್ಯಾನ ಮೊದಲಾದವು ಶಾರೀರಿಕ, ಮಾನಸಿಕ ಅಭಿವೃದ್ಧಿಗಾಗಿ ಇರುವಂತಹವು. ಈ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಯೋಗಾಭ್ಯಾಸ ಮಾಡಿದರೆ ಫ‌ಲಿತಾಂಶ ಅಧಿಕ.

ಯೋಗ ಜೀವನ-ಯೋಗ ಮತ್ತು ಬದುಕಿನ ಸಂಬಂಧವನ್ನು ವಿವರಿಸುವ ಅಂಕಣ. ಇಲ್ಲಿ ನೀಡುತ್ತಿರುವುದು ಸಲಹೆ ಮಾತ್ರ, ಯೋಗಾಭ್ಯಾಸ ಮಾಡುವವ ಆಸಕ್ತರು ಸೂಕ್ತ ಗುರುವಿನ ಮಾರ್ಗದರ್ಶನ ಪಡೆಯ ಬೇಕಾದುದು ಕಡ್ಡಾಯ.

ಎನ್‌. ರಾಧಾಕೃಷ್ಣ ಪ್ರಭು
ಕಾಪು ಕಲ್ಯ ನಿವಾಸಿ ಎನ್‌. ರಾಧಾಕೃಷ್ಣ ಪ್ರಭು 25 ವರ್ಷಗಳಿಂದ ಯೋಗ ತರಗತಿ ನಡೆಸುತ್ತ ಬರುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ ನಿಂದ ತರಬೇತಿ ಪಡೆದ ಅವರು, 2009ರಲ್ಲಿ ಹರಿದ್ವಾರದಲ್ಲಿ ಯೋಗಗುರು ಬಾಬಾ ರಾಮದೇವ್‌ ಅವರಿಂದ ಉನ್ನತ ತರಬೇತಿ ಪಡೆದರು. ಇವರು ಪತಂಜಲಿ ಯೋಗ ಸಮಿತಿಯ ಕಾರ್ಯಕರ್ತರೂ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಶ್ರೀ ಗುರು ಯೋಗ ಸಂಘದ ಅಧ್ಯಕ್ಷರಾಗಿ ನಿರಂತರ ಯೋಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ರಾಧಾಕೃಷ್ಣ ಪ್ರಭುಗಳು.

ಟಾಪ್ ನ್ಯೂಸ್

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.