ನೆರವಿನ ನಿರೀಕ್ಷೆಯಲ್ಲಿ ಯೋಗ ಪಟು
Team Udayavani, Sep 24, 2019, 5:17 AM IST
ಉಪ್ಪುಂದ: ಯೋಗದಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವ ಮರವಂತೆಯ ಶಿವಮಾಸ್ತಿ ಮನೆ ಚಂದ್ರಶೇಖರ ಪೂಜಾರಿ ಹಾಗೂ ಜ್ಯೋತಿ ದಂಪತಿ ಪುತ್ರಿ 11 ವರ್ಷದ ಧ್ವನಿ ಪೂಜಾರಿ ಅವರ ಮನೆಗೆ ಗಂಗೊಳ್ಳಿ ಠಾಣಾಧಿಕಾರಿ ವಾಸಪ್ಪ ನಾಯ್ಕ, ಸಿಬಂದಿ ಭೇಟಿ ನೀಡಿ ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
ಸಿಬಂದಿಗಳಾದ ಆಲಿಂಗಯ್ಯ ಕಾಟಿ, ಸಂಪತ್ತ ನಾಯ್ಕ, ಮಂಜುನಾಥ ದೇವಾಡಿಗ ಬಿಜೂರು, ಮೌನೇಶ ನಾಯ್ಕ, ಹನುಮಂತ ಮೇಟಿ, ರಾಜೇಶ ನಾಯ್ಕ ಉಪಸ್ಥಿತರಿದ್ದರು.
ಕಳೆದ ಆಗಸ್ಟ್‌ನಲ್ಲಿ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದ ಯೋಗ ಸ್ಪರ್ಧೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಧ್ವನಿ ಅಕ್ಟೋಬರ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗೋತ್ಸವದಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದಾಳೆ.
ನೆರವಿನ ನಿರೀಕ್ಷೆ
ತ್ರಾಸಿಯ ಡಾನ್ ಬಾಸ್ಕೊ ಶಾಲೆಯಲ್ಲಿ 6ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಈಕೆಯದ್ದು ನಿತ್ಯ ಕೂಲಿ ಮಾಡಿ ಜೀವನ ನಡೆಸುವ ಕುಟುಂಬ. ಅಕ್ಟೋಬರ್‌ನಲ್ಲಿ ಮಲೇಷ್ಯಾಕ್ಕೆ ತೆರಳಲು ಸುಮಾರು 16,000 ರೂ. ಅಗತ್ಯವಿದ್ದು ಕುಟುಂಬಕ್ಕೆ ಹಣ ಭರಿಸುವುದು ಕಷ್ಟವಾಗಿದೆ. ಆದ್ದರಿಂದ ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ.
ಸಹಾಯ ಮಾಡಲಿಚ್ಛಿಸುವವರು ನಾವುಂದ ಸಿಂಡಿಕೇಟ್ ಬ್ಯಾಂಕ್ ಉಳಿತಾಯ ಖಾತೆ: 01732200124750 (ಐಎಫ್‌ಎಸ್‌ಸಿ: ಸಿವೈಎನ್‌ಬಿ0000173)ಗೆ ಹಣ ಜಮೆ ಮಾಡಬಹುದು.