ಕೋವಿಡ್ ಔಷಧ ನಿಧಿಗಾಗಿ ಯುವಕರ ಬೈಕ್ ಯಾತ್ರೆ : 3 ಕೋಟಿ ರೂ. ಸಂಗ್ರಹದ ಗುರಿ
Team Udayavani, Dec 1, 2020, 11:41 AM IST
ಕುಂದಾಪುರ, ನ. 30: ಕೋವಿಡ್ ಔಷಧ ನಿಧಿಗಾಗಿ 3 ಕೋ.ರೂ. ಸಂಗ್ರಹಿಸುವ ಗುರಿ ಇರಿಸಿಕೊಂಡು ಬೈಕ್ ಯಾತ್ರೆ ನಡೆಸುವ ಸಾಹಸಕ್ಕೆ ಇಲ್ಲಿನ 23 ಮಂದಿ ಯುವಕರ ತಂಡವೊಂದು ಮುಂದಾಗಿದೆ.
ಡಿ. 1ರಂದು ಬೈಕ್ ಯಾನ ಆರಂಭವಾಗಲಿದ್ದು, 18 ದಿನಗಳ ಪರ್ಯಂತ 4 ಸಾವಿರ ಕಿ.ಮೀ. ದೂರ ಕ್ರಮಿಸಿ 6 ರಾಜ್ಯ, 13 ನಗರ, 11 ರೋಟರಿ ಜಿಲ್ಲೆಗಳನ್ನು ಹಾದು ಹೋಗಲಿದ್ದಾರೆ. ಈ ಸಂದರ್ಭ 100ರಷ್ಟು ಕ್ಲಬ್ಗಳಿಗೆ ಭೇಟಿ ನೀಡಿ ನಿಧಿ ಸಂಗ್ರಹಿಸಲಿದ್ದಾರೆ. ರಾಜ್ಯದ 12 ಕ್ಲಬ್ಗಳ ಸದಸ್ಯರ ತಂಡ ಬೆಂಗಳೂರು, ನೆಲ್ಲೂರು, ವಿಜಯವಾಡ, ಹೈದರಾಬಾದ್, ಸೊಲ್ಹಾಪುರ, ಶಿರ್ಡಿ, ಮುಂಬಯಿ, ಪುಣೆ, ರತ್ನಗಿರಿ, ಗೋವಾ, ಉಡುಪಿ, ಕೋಯಿಕ್ಕೋಡ್, ಮೈಸೂರು ಮೂಲಕ ಸಾಗಿ ಮತ್ತೆ ಡಿ. 18ರಂದು ಬೆಂಗಳೂರು ತಲುಪಲಿದೆ. 20 ಬೈಕ್, ಒಂದು ಕಾರು ಯಾತ್ರೆ ತೆರಳಲಿವೆ. ತಂಡದಲ್ಲಿ ನಾಲ್ವರು ವೈದ್ಯರಿದ್ದಾರೆ. ಮೆಡಿಕಲ್ ಕಿಟ್ಗಳನ್ನು ಇರಿಸಿಕೊಳ್ಳಲಾಗಿದೆ.
ತಂಡದಲ್ಲಿ ಕುಂದಾಪುರದ ರೋಟರಿ ಕ್ಲಬ್ ರಿವರ್ಸೈಡ್ನ ಅಧ್ಯಕ್ಷ ಕೌಶಿಕ್ ಯಡಿಯಾಳ್ ಇರಲಿದ್ದಾರೆ. ಡಿ. 13ರಂದು ಯಾತ್ರೆ ಕುಂದಾಪುರ ತಲುಪಲಿದೆ. ಸಂಗ್ರಹಿಸಿದ ನಿಧಿಯನ್ನು ಸರಕಾರದ ಕೋವಿಡ್ ಔಷಧ ನಿಧಿಗೆ ನೀಡಲಾಗುತ್ತದೆ. ಅನುದಾನ ನೀಡಿದ ಸಂಘ ಸಂಸ್ಥೆಯವರಿಗೆ ಸರಕಾರ ಲಸಿಕೆಗಳನ್ನು ನೀಡಲಿದೆ. ಬಿಪಿಎಲ್ ಕಾರ್ಡ್ದಾರರಿಗೆ ಮತ್ತು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲು ಸರಕಾರದಿಂದ ಔಷಧ ಖರೀದಿಯನ್ನು ಕೂಡ ನಡೆಸಲಾಗುವುದು ಎಂದು ಕೌಶಿಕ್ ಯಡಿಯಾಳ್ ತಿಳಿಸಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ
ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ಹೊಸ ಸೇರ್ಪಡೆ
ಬಜೆಟ್ ನಲ್ಲಿ ಮೈಸೂರು ಅಭಿವೃದ್ಧಿಗೆ ಒತ್ತು ಕೊಡಲು ಸಿಎಂ ಗಮನಕ್ಕೆ ತರುವೆ: ಸೋಮಶೇಖರ್
ಗಣರಾಜ್ಯೋತ್ಸವ: ಟ್ರ್ಯಾಕ್ಟರ್ ರಾಲಿ ವೇಳೆ ಐಎಸ್ಐ, ಖಾಲಿಸ್ತಾನ್ ವಿಧ್ವಂಸಕ ಕೃತ್ಯಕ್ಕೆ ಸಂಚು?
ಸ್ಯಾಂಡಲ್ ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ಆತ್ಮಹತ್ಯೆ
ಪರಾಕ್ರಮ್ ದಿವಸ್ ಕಾರ್ಯಕ್ರಮಕ್ಕೆ ಬಿಜೆಪಿಯವರಿಗೆ ಹೆಚ್ಚು ಆಹ್ವಾನ : ತೃಣಮೂಲ ಆರೋಪ
ಮರಳುವುದೇ ಅವಳಿ ಕೆರೆಗಳ ಗತವೈಭವ? ಕೆರೆಗಳ ಸುತ್ತಲ ಸಮಸ್ಯೆಗಳಿಗೆ ಸಿಗಬೇಕಿದೆ ಸೂಕ್ತ ಪರಿಹಾರ