Udayavni Special

21 ಜನರಿಗೆ ಕೋವಿಡ್‌ ಪಾಸಿಟಿವ್‌

Team Udayavani, Jul 6, 2020, 5:32 PM IST

21 ಜನರಿಗೆ ಕೋವಿಡ್‌ ಪಾಸಿಟಿವ್‌

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರವಿವಾರ 21 ಜನರಲ್ಲಿ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡಿದೆ. ಇದರ ಜೊತೆಗೆ ಜನತೆ ರವಿವಾರದ ಲಾಕ್‌ಡೌನ್‌ನನ್ನು ಶ್ರದ್ಧೆಯಿಂದ ಸ್ವಾಗತಿಸಿದ್ದಾರೆ. ಎಲ್ಲೆಡೆ ಬಂದ್‌ ವಾತಾವರಣವಿದ್ದು, ಜನರು ಮನೆಯಿಂದ ಹೊರಬರಲಿಲ್ಲ.

ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು, ಇನ್ನು ರವಿವಾರ ಸಹ ಕೋವಿಡ್‌ ಹಾವಳಿ ಮುಂದುವರಿದಿದ್ದು, 21 ಜನರಲ್ಲಿ ಕೋವಿಡ್‌ ಕಂಡು ಬಂದಿದೆ. 6ಜನಗುಣಮುಖರಾಗಿದ್ದಾರೆ. ಜಿಲ್ಲಾಡಳಿತ 21 ಜನರಿಗೆ ಕೋವಿಡ್‌ ವೈರಾಣು ಪತ್ತೆಯಾಗಿರುವುದನ್ನು ರವಿವಾರ ಸಂಜೆ ದೃಢಪಡಿಸಿದೆ. ಭಟ್ಕಳದ 9 ಜನರಿಗೆ, ಕುಮಟಾ, ಹಳಿಯಾಳ, ಮುಂಡಗೋಡ ತಾಲೂಕಿನಲ್ಲಿ ತಲಾ ಮೂವರಂತೆ 9 ಜನರಿಗೆ, ಕಾರವಾರ, ಕದ್ರಾದಲ್ಲಿ ಒಬ್ಬೊಬ್ಬರಿಗೆ ಕೋವಿಡ್‌ ಪಾಸಿಟಿವ್‌ ಬಂದಿದ್ದು, ಅವರನ್ನು ಆಯಾ ತಾಲೂಕುಗಳಲ್ಲಿರುವ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈತನಕ 354 ಜನರಿಗೆ ಕೋವಿಡ್‌ ಪಾಜಿಟಿವ್‌ ಬಂದಿದೆ. ಕೋವಿಡ್‌ ಕಾಣಿಸಿಕೊಂಡವರಲ್ಲಿ ಭಟ್ಕಳದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. 132 ಜನ ಭಟ್ಕಳದಲ್ಲಿ ಕೋವಿಡ್‌ನಿಂದ ಬಳಲಿದ್ದರೆ, ಜೋಯಿಡಾದಿಂದ 5, ಅಂಕೋಲಾದಿಂದ 21, ಹಳಿಯಾಳದಿಂದ 31, ಹೊನ್ನಾವರದಿಂದ 34, ಶಿರಸಿಯಿಂದ 25, ಕಾರವಾರದಿಂದ 17, ಕುಮಟಾದಿಂದ 28, ಮುಂಡಗೋಡದಿಂದ 21, ಸಿದ್ದಾಪುರದಿಂದ 6, ಯಲ್ಲಾಪುರದಿಂದ 34 ಜನ ಕೋವಿಡ್‌ ಪಾಸಿಟಿವ್‌ ಹೊಂದಿದ್ದರು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಇವರಲ್ಲಿ 159 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. 194 ಜನ ಕಾರವಾರದ ಕ್ರಿಮ್ಸ್‌ ಸೇರಿದಂತೆ ವಿವಿಧ ತಾಲೂಕಾ ಆಸ್ಪತ್ರೆಯ ಕೋವಿಡ್‌ ಚಿಕಿತ್ಸಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವೃದ್ಧೆ ಮಾತ್ರ ಮೃತಪಟ್ಟ ಘಟನೆ ನಡೆದಿದೆ. ಉಳಿದಂತೆ ಬಹುತೇಕರು ಗುಣಮುಖರಾಗಿದ್ದಾರೆ. ಕಾರವಾರದ ಕ್ರಿಮ್ಸ್‌ನಲ್ಲಿ 49 ಜನ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಓರ್ವರ ಸ್ಥಿತಿ ಗಂಭೀರವಾಗಿದೆ. 48 ಜನರ ಆರೋಗ್ಯ ಸ್ಥಿರವಾಗಿದ್ದು ಅವರು ಸುಧಾರಿಸಿಕೊಳ್ಳುತ್ತಿದ್ದಾರೆಂದು ವೈದ್ಯಕೀಯ ಕಾಲೇಜಿನ ಮೂಲಗಳು ಹೇಳಿವೆ.

ಹೊರ ಜಿಲ್ಲೆಯಿಂದ ಬಂದವರಿಗೆ ಜ್ವರ ತಪಾಸಣೆ ಕಡ್ಡಾಯ: ಹೊರ ಜಿಲ್ಲೆಯಿಂದ ಉತ್ತರ ಕನ್ನಡಕ್ಕೆ ಬರುವವರು 3 ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಜಿಲ್ಲೆಯಲ್ಲಿ ಉಳಿದರೆ ಜ್ವರ ತಪಾಸಣೆ ಕಡ್ಡಾಯ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜ್ವರ ತಪಾಸಣೆಯಿಂದ ತಪ್ಪಿಸಿಕೊಂಡರೆ, 14 ದಿನ ಕಡ್ಡಾಯ ಕ್ವಾರಂಟೈನ್‌ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಈ ಸಂಬಂಧ ಎಲ್ಲಾ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದು, ಹೊರ ಜಿಲ್ಲೆಯಿಂದ ಬರುವವರ ಬಗ್ಗೆ ನಿಗಾ ವಹಿಸಲಾಗಿದೆ. ಹೊರ ಜಿಲ್ಲೆಯಿಂದ ಬರುವವರು ಜ್ವರ ತಪಾಸಣಾ ಕೇಂದ್ರಕ್ಕೆ ಸ್ವಯಂ ಪ್ರೇರಿತರಾಗಿ ಬರುವಂತೆ ವಿನಂತಿಸಲಾಗಿದೆ. ನಿಯಮ ಮೀರಿದರೆ, ಪ್ರಾಕೃತಿಕ ವಿಪತ್ತು ನಿಯಮದಡಿ ಕಾನೂನು ಕ್ರಮ ಖಚಿತ ಎಂದು ಜಿಲ್ಲಾಡಳಿತ ಹೇಳಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಿಶಾ ಕೇಸ್; ಮೂವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ ದಿಶಾ ತಂದೆ

ದಿಶಾ ಕೇಸ್; ಮೂವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ ದಿಶಾ ತಂದೆ

ಪೊಲೀಸ್ ಗುಂಪಿನ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರ ಸಾವು

ಪೊಲೀಸ್ ಗುಂಪಿನ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರ ಸಾವು

ಬೆಂಗಳೂರು ಗಲಭೆ ಆರೋಪಿಗಳು ಬಳ್ಳಾರಿಗೆ ಶಿಫ್ಟ್: ಬಳ್ಳಾರಿ ಜೈಲಿನ 16 ಖೈದಿಗಳಿಗಿದೆ ಕೋವಿಡ್ !

ಬೆಂಗಳೂರು ಗಲಭೆ ಆರೋಪಿಗಳು ಬಳ್ಳಾರಿಗೆ ಶಿಫ್ಟ್: ಬಳ್ಳಾರಿ ಜೈಲಿನ 16 ಖೈದಿಗಳಿಗಿದೆ ಕೋವಿಡ್ !

ಮುಂಬಯಿಯಲ್ಲಿ ಮುಂದಿನ 24 ಗಂಟೆಯಲ್ಲಿ ಇನ್ನಷ್ಟು ಮಳೆ ; ಐಎಂಡಿ ಮುನ್ಸೂಚನೆ

ಮುಂಬಯಿಯಲ್ಲಿ ಮುಂದಿನ 24 ಗಂಟೆಯಲ್ಲಿ ಇನ್ನಷ್ಟು ಮಳೆ ; ಐಎಂಡಿ ಮುನ್ಸೂಚನೆ

ಪಾಣೆಮಂಗಳೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿ ಸಂಪೂರ್ಣ ಬೆಂಕಿಗಾಹುತಿ

ಪಾಣೆಮಂಗಳೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿ ಸಂಪೂರ್ಣ ಬೆಂಕಿಗಾಹುತಿ

ಬೆಂಗಳೂರು ದಾಳಿ ಪ್ರಕರಣ ಆರೋಪಿಗಳು ಬಳ್ಳಾರಿ ಜೈಲಿಗೆ ಶಿಫ್ಟ್ ! ಕಾರಣವೇನು ಗೊತ್ತಾ?

ಬೆಂಗಳೂರು ದಾಳಿ ಪ್ರಕರಣ ಆರೋಪಿಗಳು ಬಳ್ಳಾರಿ ಜೈಲಿಗೆ ಶಿಫ್ಟ್ ! ಕಾರಣವೇನು ಗೊತ್ತಾ?

ಭಾರತ ಐದಲ್ಲ, 500 ರಫೇಲ್ ಬೇಕಾದ್ರೂ ಖರೀದಿಸಲಿ: ಪಾಕಿಸ್ತಾನ ಸೇನೆ ಹೇಳಿದ್ದೇನು?

ಭಾರತ ಐದಲ್ಲ, 500 ರಫೇಲ್ ಬೇಕಾದ್ರೂ ಖರೀದಿಸಲಿ: ಪಾಕಿಸ್ತಾನ ಸೇನೆ ಹೇಳಿದ್ದೇನು?
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಡಗೋಡ: ವಾರ್ಡ್‌ ಮಟ್ಟದಲ್ಲಿ ಪಾಠ ಪ್ರವಚನ ಶುರು

ಮುಂಡಗೋಡ: ವಾರ್ಡ್‌ ಮಟ್ಟದಲ್ಲಿ ಪಾಠ ಪ್ರವಚನ ಶುರು

ಕೊಂಕಣ ರೈಲ್ವೆ ನಿರ್ಲಕ್ಷ್ಯ : ಜನರಿಗೆ ಜಲವಾಸ : ಮನೆ-ದೇವಾಲಯಗಳಿಗೆ ಹೊಕ್ಕ ನೀರು

ಕೊಂಕಣ ರೈಲ್ವೆ ನಿರ್ಲಕ್ಷ್ಯ : ಜನರಿಗೆ ಜಲವಾಸ : ಮನೆ-ದೇವಾಲಯಗಳಿಗೆ ಹೊಕ್ಕ ನೀರು

ಬೆಳೆ ಹಾನಿ ಸಮೀಕ್ಷೆ ಪಾರದರ್ಶಕವಾಗಿರಲಿ

ಬೆಳೆ ಹಾನಿ ಸಮೀಕ್ಷೆ ಪಾರದರ್ಶಕವಾಗಿರಲಿ

ಬಂದರು ಅಭಿವೃದ್ಧಿಗೆ ಕ್ರಮ: ಅನಂತಕುಮಾರ

ಬಂದರು ಅಭಿವೃದ್ಧಿಗೆ ಕ್ರಮ: ಅನಂತಕುಮಾರ

uk-tdy-1

ರಸ್ತೆ ಸಾರಿಗೆ ಸಂಸ್ಥೆಗೆ ಸಂಕಷ್ಟ

MUST WATCH

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆಹೊಸ ಸೇರ್ಪಡೆ

ದಿಶಾ ಕೇಸ್; ಮೂವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ ದಿಶಾ ತಂದೆ

ದಿಶಾ ಕೇಸ್; ಮೂವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ ದಿಶಾ ತಂದೆ

tk-tdy-1

ಪ್ರತಿ ತಾಲೂಕಿಗೆ 10 ದಿನ ಹೇಮೆ ನೀರು

ಪೊಲೀಸ್ ಗುಂಪಿನ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರ ಸಾವು

ಪೊಲೀಸ್ ಗುಂಪಿನ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರ ಸಾವು

ಟ್ಯಾಬ್‌ನಿಂದ ರಾಸುಗಳ ನೈಜ ಮಾಹಿತಿ ಸಂಗ್ರಹಿಸಿ

ಟ್ಯಾಬ್‌ನಿಂದ ರಾಸುಗಳ ನೈಜ ಮಾಹಿತಿ ಸಂಗ್ರಹಿಸಿ

ಷೇರುದಾರರಿಗೆ ಡಿವಿಡೆಂಡ್‌ ವಿತರಣೆ

ಷೇರುದಾರರಿಗೆ ಡಿವಿಡೆಂಡ್‌ ವಿತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.