ಚೆಕ್‌ ಡ್ಯಾಂಗೆ 5 ಲಕ್ಷ ರೂ. ಬಿಡುಗಡೆ: ಶಾಸಕ ದಿನಕರ ಶೆಟ್ಟಿ

Team Udayavani, Jan 17, 2020, 5:19 PM IST

ಹೊನ್ನಾವರ: ಭಾಸ್ಕೇರಿ ಹೊಳೆ ಸೇರುವ ದೊಡ್ಡಹಿತ್ತಲ್‌ ಸೇತುವೆ ಬಳಿ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಯನ್ನು ಶಾಸಕ ದಿನಕರ ಶೆಟ್ಟಿ ಪರಿಶೀಲಿಸಿದರು. ಈಗಾಗಲೇ ಸಾಲ್ಕೋಡ್‌ ಚೆಕ್‌ ನಿರ್ಮಾಣ ಮುಗಿದಿದ್ದು ಅದೇ ಮಾದರಿಯಲ್ಲಿ ಈ ಸ್ತಳದಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಮಾಡಲು ಈಗಾಗಲೇ ಪಂಚಾಯತ ವತಿಯಿಂದ ಚಾಲನೆ ನೀಡಲಾಗಿತ್ತು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹೊಸಾಕುಳಿ ಗ್ರಾಮದಲ್ಲಿ ನನ್ನ ಅವಧಿಯಲ್ಲಿ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಪಂಚಾಯತ ವತಿಯಿಂದನಿರ್ಮಾಣವಾಗುತ್ತಿರುವ ಚೆಕ್‌ ಡ್ಯಾಂನಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕುಡಿಯುವನೀರು ಹಾಗೂ ಬೆಳೆಗೆ ನೀರಿನ ಅಭಾವಬೇಸಿಗೆಯಲ್ಲಿ ತಪ್ಪುವುದರಿಂದ 5 ಲಕ್ಷ ರೂ. ನೀಡಲು ಭರವಸೆ ನೀಡಿದ್ದೇನೆ. ಮುಂದಿನ ದಿನದಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದ್ದು ಗ್ರಾಮಸ್ಥರಿಗೆ ಅನೂಕೂಲವಾಗಲಿದೆ. ಅಲ್ಲದೆ ಗ್ರಾಮದ ರಸ್ತೆ ಸ್ಥಿತಿಗತಿ ಬಗ್ಗೆ ಬೇಡಿಕೆ ನೀಡಿದ್ದು ಅದನ್ನು ಮುಂದಿನ ದಿನದಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು.

ಪಂಚಾಯತ ಅಧ್ಯಕ್ಷ ಸುರೇಶ ಶೆಟ್ಟಿ, ಟಿ.ಎಸ್‌. ಹೆಗಡೆ, ಜಿಪಂ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ, ಗ್ರಾಪಂ ಸದಸ್ಯ ಶ್ರೀಧರ ಹೆಗಡೆ, ಬಿಜೆಪಿ ಮುಖಂಡರಾದ ಎಂ.ಎಸ್‌.ಹೆಗಡೆ, ರಮೇಶ ನಾಯ್ಕ, ಉಮೇಶ ನಾಯ್ಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ