Udayavni Special

ಭೂತಾಯಿಯ ಒಡಲು ವೈವಿಧ್ಯತೆಯ ಕಡಲು


Team Udayavani, Jul 27, 2019, 9:15 AM IST

uk-tdy-2

ಹೊನ್ನಾವರ: ಬಳ್ಳಾರಿಯಂತೆ ಬರಿ ಬಂಡೆಯಲ್ಲ, ಬಯಲುಸೀಮೆ ಕಪ್ಪು ಜಿಗುಟು ಮಣ್ಣಲ್ಲ, ಮಲೆನಾಡಿನ ಕೆಂಪು ಮಣ್ಣೂ ಅಲ್ಲ. ಉತ್ತರ ಕನ್ನಡದ ಭೂ ತಾಯಿಯ ಒಡಲು ಕೆಂಪು ಮಣ್ಣು, ಚಿರೆಕಲ್ಲು, ಅಲ್ಲಲ್ಲಿ ಶಿಲೆ, ಒಡಲಿನಲ್ಲಿ ಶೇಡಿ ಮಣ್ಣು, ಹೊಯ್ಗೆ, ಹೀಗೆ ವೈವಿಧ್ಯತೆಯಿಂದ ಕೂಡಿದೆ. ಸ್ವಲ್ಪ ಅಲ್ಲಾಡಿಸಿದರೂ ಅನಾಹುತ ತಪ್ಪಿದ್ದಲ್ಲ.

ಮುರ್ಡೇಶ್ವರ, ಧಾರೇಶ್ವರ, ಗೋಕರ್ಣ ಮೊದಲಾದ ಕಡಲತೀರಗಳಿಂದ ಆರಂಭಿಸಿ ಕಾದಿಟ್ಟ ಅರಣ್ಯ ಪ್ರದೇಶದವರೆಗೂ ಬಂಡೆಗಲ್ಲನ್ನು ತಲೆ ಮೇಲೆ ಹೊತ್ತು ನಿಂತ ಬೆಟ್ಟ. ನೋಡಲು ಗಟ್ಟಿಕಂಡರೂ ಕೈತಾಕಿದರೆ ಕುಸಿಯುತ್ತದೆ. ಕಿರಿದಾದ ಕರಾವಳಿ ಭೂ ಪ್ರದೇಶದ ನಿಗೂಢತೆ ತಿಳಿದ ಬ್ರಿಟೀಷರು ಇಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದರು. ಜಾರ್ಜ್‌ ಫರ್ನಾಂಡೀಸ್‌, ರಾಮಕೃಷ್ಣ ಹೆಗಡೆ, ಮಧು ದಂಡವತೆ ಕೊಂಕಣ ರೈಲ್ವೆ ಯೋಜನೆಗೆ ಕೈಹಾಕಿ ನಾಲ್ಕು ವರ್ಷಗಳಲ್ಲಿ ಮುಗಿಯಬೇಕು ಎಂದರು. ಹೆಜ್ಜೆ ಹೆಜ್ಜೆಗೆ ಭೂ ಕುಸಿತ, ಸುರಂಗಗಳ ಕುಸಿತ, ಇಳಿಜಾರಾಗಿ ಧರೆ ಕುಸಿಯಿತು. ಇದರಿಂದ ಕಂಗೆಟ್ಟ ಕೆಆರ್‌ಸಿಎಲ್ ಯೋಜನೆ ಕೈಬಿಡುವ ಮಾತನಾಡಿತ್ತು. ವಿದೇಶಿ ತಂತ್ರಜ್ಞಾನವೂ ಇಲ್ಲಿ ಉಪಯುಕ್ತವಾಗಲಿಲ್ಲ. ಶ್ರೀಧರನ್‌ ನೇತೃತ್ವದ ಅನುಭವಿ ತಂಡ ಭಾರತೀಯ ತಂತ್ರಗಾರಿಕೆ ಬಳಸಿದ ಕಾರಣ ನಾಲ್ಕು ವರ್ಷ ತಡವಾಗಿ ಕೊಂಕಣ ರೇಲ್ವೆ ಓಡಿತು.

ಹೊನ್ನಾವರ, ಶಿರೂರುಗಳಲ್ಲಿ ಕಿಮೀ ಸುರಂಗ ರಚಿಸುವಾಗ ಶೇಡಿ ಮಣ್ಣಿನ ಕುಸಿತದಿಂದಾಗಿ ಕೆಲಸ ವಿಳಂಬವಾಯಿತು. ನಂತರ ಮಧ್ಯದಲ್ಲಿ ಸುರಂಗ ಬಾವಿ ನಿರ್ಮಿಸಿ ನಾಲ್ಕೂ ಕಡೆಯಿಂದ ಕಾಮಗಾರಿ ನಡೆಸಬೇಕಾಯಿತು. ಹೊರಗಿನ ಬಂಡೆ ನೋಡಿ ಒಳಪ್ರವೇಶಿಸಿದರೆ ಹತ್ತಡಿ ಆಳದಲ್ಲಿ ದಪ್ಪ ದೋಸೆ ಹಿಟ್ಟಿನಂತಹ ಮಣ್ಣಿನ ಪ್ರವಾಹ ಅಧಿಕಾರಿಗಳನ್ನು ಕಂಗೆಡಿಸಿತ್ತು. ಅದೇ ಸಂದರ್ಭದಲ್ಲಿ ಸುರಂಗ ಬಾವಿಯಲ್ಲಿ ಭೂಕುಸಿತ ಉಂಟಾಗಿ 11 ಕಾರ್ಮಿಕರು ಮೃತಪಟ್ಟರು. ಹೊನ್ನಾವರದ ಸುರಂಗಬಾವಿಯನ್ನು ಪ್ರಭಾತನಗರದಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಶಿರೂರು ಘಟ್ಟದಲ್ಲಿ ಹೆದ್ದಾರಿ ಮಧ್ಯೆ ಸುರಂಗ ಬಾವಿ ತ್ರಿಶಂಕು ಸ್ಥಿತಿಯಲ್ಲಿದ್ದರೆ, ಅರ್ಧ ಮೇಲಿನಿಂದ ಕಾಣುತ್ತದೆ. ಇದನ್ನು ಅಲ್ಲಾಡಿಸಲೂ ಭಯ. ತುರ್ತು ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಹಾಗೆ ಇಟ್ಟಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಕೊಂಕಣ ರೈಲು ಓಡ ತೊಡಗಿದ ಮೇಲೂ ನಾಲ್ಕಾರು ವರ್ಷ ಭೂಕುಸಿತದಿಂದ ರೈಲು ಸಂಚಾರ ನಿಲ್ಲಿಸಬೇಕಾಗಿ ಬಂತು.ಕಾಸರಕೋಡ ಕೆಳಗಿನೂರಿನಲ್ಲಿ ಈಗಲೂ ಭೂಮಿ ಗಟ್ಟಿಯಾಗಿಲ್ಲ. ದ್ವಿಪಥ ನಿರ್ಮಾಣವಾಗಿ ಎಷ್ಟೋ ವರ್ಷಗಳಾದ ಮೇಲೆ ಭೂಮಿ ಗಟ್ಟಿಯಾಗಿತ್ತು. ಚತುಷ್ಪಥ ನಿರ್ಮಾಣ ಕಾಮಗಾರಿಗೆ ಭೂ ಕುಸಿತ ಸಮಸ್ಯೆಯಾಗಿದೆ. ಕಳೆದ ವರ್ಷ ಶಿರೂರು, ಭಟ್ಕಳ, ಹೊನ್ನಾವರಗಳಲ್ಲಿ ದೊಡ್ಡ ಪ್ರಮಾಣದ ಕುಸಿತ ಉಂಟಾಯಿತು. ಧರೆಗೆ ಸಿಮೆಂಟ್ ಮೆತ್ತಿದ್ದು ಮಿರ್ಜಾನ್‌ ಬಳಿ ಹಪ್ಪಳದಂತೆ ಮಣ್ಣಿನೊಟ್ಟಿಗೆ ಕೆಳಗಿಳಿದು ಕೂತಿದೆ. ಇಂದು ಅಲ್ಲಿ ಜಲ್ಲಿ ರಾಶಿ ಹಾಕಿದ್ದು ಕಂಡುಬಂತು. ಕಳೆದ ಎರಡು ದಶಕಗಳಲ್ಲಿ ಅಣೆಕಟ್ಟು, ನೌಕಾನೆಲೆ, ಚತುಷ್ಪಥಗಳಿಗಾಗಿ ಅಗಾಧ ಪ್ರಮಾಣದಲ್ಲಿ ಶಿಲೆ ಮತ್ತು ಕೆಂಪು ಚಿರೆಕಲ್ಲನ್ನು ಮೇಲೆತ್ತಲಾಗಿದೆ. ಕೆಂಪು, ಶೇಡಿ ಮತ್ತು ಹೊಯ್ಗೆ ಮಿಶ್ರಿತ ಮಣ್ಣು ಸಡಿಲಾಗಿದೆ. ಎಲ್ಲ ಹಳ್ಳಿಗಾಡಿನಲ್ಲೂ ಜೆಸಿಬಿ ಬಳಸಿ ಭೂಸ್ಥಿತ್ಯಂತರ ಮಾಡಲಾಗಿದೆ. ಒಂದೂ ಜೆಸಿಬಿ ಕಾಣದ ಜಿಲ್ಲೆಯಲ್ಲಿ ಈಗ ಸಾವಿರಾರು ಖಾಸಗಿ ಜೆಸಿಬಿ, ಮಣ್ಣು ಸಾಗಿಸುವ ಟಿಪ್ಪರ್‌ಗಳು ಬಂದಿವೆ. ಬೋರ್ವೆಲ್ ಮಿಶನ್‌ಗಳು ಅಷ್ಟೇ ಸಂಖ್ಯೆಯಲ್ಲಿ ಭೂಮಿ ಕೊರೆದಿವೆ. ಪಶ್ಚಿಮದಿಂದ ಕಡಲು ಕೊರೆತ ಜೋರಾಗಿದೆ. ತೆರೆ ತಡೆಯುವ ಹೊಂಯ್ಗೆ ದಿನ್ನೆಗಳೆಲ್ಲಾ ಗಾಜು ತಯಾರಿಕೆಗೆ ಬಳಸುವ ಸಿಲಿಕಾನ್‌ ಪ್ರಮಾಣ ಹೆಚ್ಚಿದ್ದ ಕಾರಣ ಸಾಗಾಟವಾಗಿದೆ. ಖಾಲಿ ಸ್ಥಳದಲ್ಲಿ ಮನೆ ತಲೆ ಎತ್ತಿದೆ. 4000 ಮಿಮೀ ಮಳೆ ಬಿದ್ದರೂ ಅನಾಹುತವಾಗದ ದಿನಗಳು ಹೋಗಿ ಕೇವಲ 2000ಮಿಮೀ ಮಳೆ ಬಿದ್ದಾಗ ಅದರ ಧಾರಣ ಶಕ್ತಿ ಭೂಮಿಗೂ ಇಲ್ಲ, ಜನಕ್ಕೂ ಇಲ್ಲ. ನೀರು ಪ್ರಯೋಜನಕ್ಕೂ ಇಲ್ಲವಾಗಿದೆ.

 

•ಜೀಯು, ಹೊನ್ನಾವರ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿಗೆ ಆದ್ಯತೆ

ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿಗೆ ಆದ್ಯತೆ

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ: ಸುಧಾಕರ್

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ: ಸುಧಾಕರ್

ಯುವಕನ ಆತ್ಮಹತ್ಯೆ- ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿರುವ ಶಂಕೆ

ಯುವಕನ ಆತ್ಮಹತ್ಯೆ- ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿರುವ ಶಂಕೆ

ಪಿಎಂ ಕಿಸಾನ್‌ ಯೋಜನೆ : ನಕಲಿ ಫಲಾನುಭವಿಗಳಿಗೆ ಜಿಲ್ಲಾಡಳಿತ ನೋಟಿಸ್‌

ಪಿಎಂ ಕಿಸಾನ್‌ ಯೋಜನೆ : ನಕಲಿ ಫಲಾನುಭವಿಗಳಿಗೆ ಜಿಲ್ಲಾಡಳಿತ ನೋಟಿಸ್‌

pub-g

ಭಾರತದಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ ಪಬ್ ಜಿ

ನೆರೆ-ಪ್ರವಾಹ ಪರಿಹಾರ ನೀಡಿಕೆಯಲ್ಲಿ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ-ಯತ್ನಾಳ

ನೆರೆ-ಪ್ರವಾಹ ಪರಿಹಾರ ನೀಡಿಕೆಯಲ್ಲಿ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ-ಯತ್ನಾಳ

ಲೋಕಲ್‌ ರೈಲುಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಆ್ಯಪ್‌, ಕಲರ್‌ ಕೋಡಿಂಗ್‌:  ಸರಕಾರ ಚಿಂತನೆ

ಲೋಕಲ್‌ ರೈಲುಗಳಲ್ಲಿ ಜನ ದಟ್ಟಣೆ ನಿಯಂತ್ರಣಕ್ಕೆ ಆ್ಯಪ್‌, ಕಲರ್‌ ಕೋಡಿಂಗ್‌:  ಸರಕಾರ ಚಿಂತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಿಕ್ಷಾದವರ ಕೋಣೆಯಲ್ಲಿ ಕಂಟ್ರೋಲರ್‌

ರಿಕ್ಷಾದವರ ಕೋಣೆಯಲ್ಲಿ ಕಂಟ್ರೋಲರ್‌

ಮಳೆಗೆ ನೆಲ ಕಚ್ಚಿದ ಭತ್ತದ ಫಸಲು! ನಷ್ಟದಲ್ಲಿವೆ ಸಾವಿರಾರು ರೈತ ಕುಟುಂಬಗಳು

ಮಳೆಗೆ ನೆಲ ಕಚ್ಚಿದ ಭತ್ತದ ಫಸಲು! ನಷ್ಟದಲ್ಲಿವೆ ಸಾವಿರಾರು ರೈತ ಕುಟುಂಬಗಳು

uk-tdy-2

ಕೋವಿಡ್‌ನಿಂದ ನಲುಗುತ್ತಿದೆ ಜಿಲ್ಲೆಯ ಆರ್ಥಿಕತೆ

UK-TDY-1

ಅಪರೂಪದ ಅಪ್ಪೆ ಮಾವಿಗೆ ಕಸಿ ಕಾಯಕಲ್ಪ

UK-TDY-1

ನೆರೆಯಿಂದ 37 ಗ್ರಾಮಗಳಿಗೆ ಹಾನಿ

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿಗೆ ಆದ್ಯತೆ

ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿಗೆ ಆದ್ಯತೆ

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ: ಸುಧಾಕರ್

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ: ಸುಧಾಕರ್

ಯುವಕನ ಆತ್ಮಹತ್ಯೆ- ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿರುವ ಶಂಕೆ

ಯುವಕನ ಆತ್ಮಹತ್ಯೆ- ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿರುವ ಶಂಕೆ

ಪಿಎಂ ಕಿಸಾನ್‌ ಯೋಜನೆ : ನಕಲಿ ಫಲಾನುಭವಿಗಳಿಗೆ ಜಿಲ್ಲಾಡಳಿತ ನೋಟಿಸ್‌

ಪಿಎಂ ಕಿಸಾನ್‌ ಯೋಜನೆ : ನಕಲಿ ಫಲಾನುಭವಿಗಳಿಗೆ ಜಿಲ್ಲಾಡಳಿತ ನೋಟಿಸ್‌

pub-g

ಭಾರತದಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ ಪಬ್ ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.