Udayavni Special

ಹದವಾದ ಮಳೆ; ಕೃಷಿ ಕಾಯಕ ಚುರುಕು

ಕೊರೊನಾತಂಕದ ಮಧ್ಯೆ ಕೃಷಿ ಚಟುವಟಿಕೆ­ಭತ್ತ-ಗೋವಿನ ಜೋಳ ಬೀಜ ವಿತರಣೆ

Team Udayavani, May 24, 2021, 9:27 PM IST

23mnd1

ಮುನೇಶ ತಳವಾರ

ಮುಂಡಗೋಡ: ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ ಬಿದ್ದ ಮಳೆಯಿಂದಾಗಿ ಬಿತ್ತನೆಗೆ ಭೂಮಿ ಉತ್ತಮ ಹದವಾಗಿದ್ದು ಕೊರೊನಾ ಭಯದ ನಡುವೆಯೂ ನೇಗಿಲಯೋಗಿಯ ಕಾಯಕ ಚುರುಕುಗೊಂಡಿದೆ.

ತಾಲೂಕಿನಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ ಹೆಚ್ಚಾಗಿ ಈಗಾಗಲೇ ಪಟ್ಟಣ ಸೇರಿ 5 ಗ್ರಾಮವನ್ನು ಕಂಟೈನ್ಮೆಂಟ್‌ ವಲಯ ಎಂದು ಜಿಲ್ಲಾಡಳಿತ ಘೋಷಿಸಿದ್ದರೂ ಕೃಷಿ ಚಟುವಟಿಕೆ ತೊಂದರೆ ಆಗದಂತೆ ರೈತರಿಗೆ ಉಳುಮೆ ಮಾಡಲು ಸಮಯವನ್ನು ನಿಗದಿ ಮಾಡಿದೆ. ವಾಸ್ತವವಾಗಿ ಗ್ರಾಮೀಣ ಭಾಗದಲ್ಲಿಯೇ ಸೋಂಕಿತರ ಪ್ರಮಾಣ ಹೆಚ್ಚಾಗಿದ್ದರೂ ಇದನ್ನು ಲೆಕ್ಕಸದೇ ಅನ್ನದಾತ ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ.

ಕೃಷಿ ಇಲಾಖೆಯ ವತಿಯಿಂದ ತಾಲೂಕಿನಲ್ಲಿ ಮುಂಗಾರು ಹಂಗಾಮಿಗಾಗಿ ಪ್ರಮುಖ ಬೆಳೆಯಾದ ಭತ್ತ ಹಾಗೂ ಗೋವಿನ ಜೋಳ ಬೀಜವನ್ನು ಸಹಾಯಧನದಲ್ಲಿ ಮುಂಡಗೋಡ ಹಾಗೂ ಪಾಳಾ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ವಿತರಿಸುತ್ತಿದ್ದಾರೆ. ಕಳೆದ ವರ್ಷ ಕೈಕೊಟ್ಟಿದ್ದ ಜೋಳ: ಕಾತೂರು ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮದ ರೈತರು ಲೋಕಲ್‌ ಭತ್ತದ ತಳಿಯ ಒಣ ಬಿತ್ತನೆ ಮಾಡಿದರೆ, ಇನ್ನು ಕೆಲವು ರೈತರು ಮಳೆಯ ಹದ ಕಾಯ್ದು ಈಗ ತಾನೇ ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ಹದ ಮಾಡುತ್ತಿದ್ದಾರೆ. ಕೆಲವರು ಟ್ರ್ಯಾಕ್ಟರ್‌ ಬಳಸಿ ಉಳುಮೆ ಮಾಡಿದರೆ ಇನ್ನು ಕೆಲ ರೈತರು ಎತ್ತುಗಳನ್ನು ಸಂಗಾತಿಯಾಗಿ ಬಳಸಿ ಭೂಮಿ ಹದವನ್ನು ಮುಗಿಸಿದ್ದಾರೆ.

ಕಳೆದ ಬಾರಿ ಗೋವಿನ ಜೋಳದ ಬೆಳೆಯು ಇಳುವರಿ ಹೆಚ್ಚಿದ್ದರೂ ಸರಿಯಾದ ಬೆಲೆ ಇಲ್ಲದೆ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ಮಳೆಯ ಭರವಸೆಯ ಮೇಲೆ ಭೂಮಿ ಹದವನ್ನು ಮಾಡಿದ್ದೇವೆ ಕಾದು ನೋಡಬೇಕು ಎಂಬ ಮಾತು ತಾಲೂಕಿನ ರೈತರಿಂದ ಕೇಳಿ ಬರುತ್ತಿದೆ. ಪ್ರಸಕ್ತ ವರ್ಷ ತಾಲೂಕಿನಲ್ಲಿ 6500 ಹೆಕ್ಟೆರ್‌ ಪ್ರದೇಶದಲ್ಲಿ ಭತ್ತ ಬಿತ್ತನೆ, 5000 ಹೆಕ್ಟೇರ್‌ ಪ್ರದೇಶದಲ್ಲಿ ಗೋವಿನ ಜೋಳದ ಬೆಳೆ, 50 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. 500 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬಿತ್ತನೆ ಕಾರ್ಯ ಈಗಾಗಲೇ ಮಾಡಿದ್ದಾರೆ.

ಟಾಪ್ ನ್ಯೂಸ್

09

ವಿಜಯಪುರ : ಸಲಾದಹಳ್ಳಿಯಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ

ಮತ್ತೆ ರೆಕ್ಕೆ ಬಿಚ್ಚಲಿದೆ ಜೆಟ್‌ ಏರ್‌ ವೇಸ್ : ವಿಮಾನಯಾನ ಕಂಪನಿಯಲ್ಲಿ ಹೊಸ ಆಶಾಕಿರಣ

ಮತ್ತೆ ರೆಕ್ಕೆ ಬಿಚ್ಚಲಿದೆ ಜೆಟ್‌ ಏರ್‌ ವೇಸ್ : ವಿಮಾನಯಾನ ಕಂಪನಿಯಲ್ಲಿ ಹೊಸ ಆಶಾಕಿರಣ

ಅಲ್ಪಸಂಖ್ಯಾತರ ಆಯೋಗದ ವರದಿ ಸದನದಲ್ಲಿ ಮಂಡಿಸಿದ ವಿವರ ಕೇಳಿದ ಹೈಕೋರ್ಟ್‌

08

ಕೋವಿಡ್: 8111 ಸೋಂಕಿತರು ಗುಣಮುಖ, 3709 ಹೊಸ ಪ್ರಕರಣ ಪತ್ತೆ

ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಕಡ್ಡಾಯ : ಪ್ರತಿ ಟಿಕೆಟ್‌ಗೆ 300 ರೂ. ನಿಗದಿ

ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಕಡ್ಡಾಯ : ಪ್ರತಿ ಟಿಕೆಟ್‌ಗೆ 300 ರೂ. ನಿಗದಿ

06

ಪ್ರಾಣಿ ಕಲ್ಯಾಣ ಸಹಾಯವಾಣಿ ನಾಳೆ(ಜೂನ್ 23) ಲೋಕಾರ್ಪಣೆ : ಸಚಿವ ಪ್ರಭು ಚವ್ಹಾಣ್

ಜಾರಕಿಹೊಲಿ ಸಿಡಿ ಪ್ರಕರಣ : ಸಂತ್ರಸ್ತೆ ಯುವತಿ ತಂದೆ ಸಲ್ಲಿಸಿದ ಅರ್ಜಿ ವಜಾ

ಜಾರಕಿಹೊಳಿ ಸಿಡಿ ಪ್ರಕರಣ : ಸಂತ್ರಸ್ತೆ ಯುವತಿ ತಂದೆ ಸಲ್ಲಿಸಿದ ಅರ್ಜಿ ವಜಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

210621kpn14

ಐಎನ್‌ಎಸ್‌ ಕದಂಬದಲ್ಲಿ ಯೋಗ

05

ವಿದ್ಯಾರ್ಥಾ ಡಾಟ್ ಕಾಂ ಯೋಜನೆಗೆ ಶಿರಸಿ ಲಯನ್ಸ್ ಶಾಲೆ ಆಯ್ಕೆ

j20srs5 (2)

ಯೋಗ ಪಾಠ ಮಾಡುವ ಮಕ್ಕಳ ಡಾಕ್ಟ್ರು!

20kwr02

ಉತ್ತರ ಕನ್ನಡವೀಗ ಬೀಗ ಮುಕ್ತ

ರಸಗೊಬ್ಬರದ ಅಭಾವ ಇಲ್ಲ: ಮಾನೆ

ರಸಗೊಬ್ಬರದ ಅಭಾವ ಇಲ್ಲ: ಮಾನೆ

MUST WATCH

udayavani youtube

ಅಬ್ಬಾ Unlock ಆಯ್ತು | ಈಗ ಹೇಗಿದೆ ಬದುಕು ?

udayavani youtube

Chiffon ಸೀರೆಗಳು | ಮೊದಲು ತಿಳಿಯಿರಿ ನಂತ್ರ ಖರೀದಿಸಿ

udayavani youtube

ದಿಲ್ಲಿಯ ಮೆಟ್ರೋ ರೈಲಿನಲ್ಲಿ ಕೋತಿಯ ಜಾಲಿ ರೈಡ್‌

udayavani youtube

ಗೋವಾ ಬೆಳಗಾವಿ ಸಂಪರ್ಕ ಸೇತುವೆ: ಚೋರ್ಲಾ ಘಾಟ್‍ನಲ್ಲಿ ಗುಡ್ಡ ಕುಸಿತ

udayavani youtube

ಅಕ್ರಮ ಗೋಸಾಗಾಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಸಾಥ್..!

ಹೊಸ ಸೇರ್ಪಡೆ

09

ವಿಜಯಪುರ : ಸಲಾದಹಳ್ಳಿಯಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ

yoga day

ಯೋಗದಿಂದ ರೋಗಗಳು ನಿವಾರಣೆ: ಸಂಸದ

hasana news

ಮೆಗಾಡೇರಿ ನಿರ್ಮಾಣ ಕಾಮಗಾರಿಗೆ ಚಾಲನೆ

covid vaccination

ಕೋವಿಡ್‌ ಲಸಿಕೆ ಪಡೆದು ಸೋಂಕಿನಿಂದ ಮುಕ್ತರಾಗಿ

drone-experiment-successful

ಡ್ರೋಣ್‌ ಪ್ರಯೋಗ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.