ಯಲ್ಲಾಪುರ: ಕಾರು ಅಡ್ಡಗಟ್ಟಿ ದರೋಡೆ; ಮೂವರು ಅಂತರಾಜ್ಯ ದರೋಡೆಕೋರರ ಬಂಧನ
Team Udayavani, Nov 29, 2022, 7:40 PM IST
ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದ ಮೂವರು ಅಂತರ್ ರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಸರಗೋಡಿನ ಸಿರಿಯಾದ ಮಹಮ್ಮದ್ ಕಬೀರ್ ಮೈನುದ್ದೀನ್, ಕೋಜಿಕೋಡಿನ ಸುಭಾಸ ರಾಧಾಕೃಷ್ಣನ್ ಹಾಗೂ ಪಾಲಕ್ಕಾಡಿನ ನಿವೇಶ ಅಪ್ಪು ವಿಜಯಕೃಷ್ಣನ್ ಬಂಧಿತರು.
ಇವರು ಕಳೆದ ಅಕ್ಟೋಬರ್ 2 ರಂದು ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಕೊಲ್ಲಾಪುರದ ನೀಲೇಶ ಪಾಂಡುರಂಗ ನಾಯ್ಕ ಅವರಿಗೆ ಸೇರಿದ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಕಾರು ಹಾಗೂ ಕಾರಿನಲ್ಲಿ 2.11 ಕೋಟೊ ರೂ. ಎರಡು ಮೊಬೈಲ್ ಗಳನ್ನು ಸಿನಿಮಿಯ ಮಾದರಿಯಲ್ಲಿ ದರೋಡೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದು, ಅವರಿಂದ ಮೂರು ಕಾರು, 98,000 ರೂ ನಗದು ವಶಪಡಿಸಿಕೊಂಡಿದ್ದಾರೆ.
ಕೃತ್ಯದಲ್ಲಿ 20ಕ್ಕೂ ಹೆಚ್ಚು ಅಂತರ್ ರಾಜ್ಯ ದರೋಡೆಕೋರರು ಭಾಗಿಯಾಗಿರುವುದು ತನಿಖೆ ವೇಳೆ ಹೆಸರನ್ನು ಹೇಳಿದ್ದಾರೆ. ಉಳಿದವರ ಪತ್ತೆಗಾಗಿ ಪೊಲೀಸರು ತಮ್ಮ ಜಾಲ ಬೀಸಿದ್ದಾರೆ.
ಎಸ್.ಪಿ ವಿಷ್ಣುವರ್ಧನ್, ಡಿವೈಎಸ್.ಪಿ ರವಿ ನಾಯ್ಕ ಶಿರಸಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ, ಪಿಎಸ್ಐಗಳಾದ ಮಂಜುನಾಥ ಗೌಡರ್, ಅಮೀನ್ ಸಾಬ ಅತ್ತಾರ, ಪ್ರೊಬೇಶನರಿ ಪಿಎಸ್ಐ ಉದಯ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ ನಾಯ್ಕ, ಡ್ಯಾನಿ ಫರ್ನಾಂಡೀಸ್, ರಾಜೇಶ ನಾಯ್ಕ, ಪರಶುರಾಮ ಕಾಳೆ, ದೀಪಕ್,ಪ್ರವೀಣ ಪೂಜಾರ, ಚೆನ್ನಕೇಶವ, ಗಿರೀಶ, ನಂದೀಶ, ಸುಕ್ರಪ್ಪ, ಶೇಷು, ವಿಜಯ, ಶೋಭಾ ನಾಯ್ಕ, ಸಿಡಿಆರ್ ಸೆಲ್ ನ ಉದಯ, ರಮೇಶ, ಯೋಗೇಶ ಕಾರ್ಯಾಚರಣೆಯಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ
ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್ ಜೋಷಿ ಸಂವಾ
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಹೊಸ ಸೇರ್ಪಡೆ
ಫೆ.11, 12: ನಮ್ಮ ಸಂತೆಯಲ್ಲಿ ನಿಮ್ಮ ಮಳಿಗೆಯೂ ಇರಲಿ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
ಚೀನಾದ ಗೂಢಚಾರಿಕೆ ಬಲೂನ್ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ
“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು
ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್!