ತಿಮ್ಮಕ್ಕ ಗಾರ್ಡನ್‌ನಲ್ಲಿ ಚಿಟ್ಟೆ ಪಾರ್ಕ್‌ಗೆ ಯತ್ನ

Team Udayavani, Dec 4, 2019, 5:48 PM IST

ಕಾರವಾರ: ಇಲ್ಲಿನ ಕಡಲತೀರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದಲ್ಲೇ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಚಿಟ್ಟೆ ಪಾರ್ಕ್‌ಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಯ ಯತ್ನಗಳು ಸದ್ದಿಲ್ಲದೇ ಸಾಗಿವೆ. ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಚಿಟ್ಟೆಗಳ ಉದ್ಯಾನ, ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಪತಂಗ ಉದ್ಯಾನವನ ಆಗಲಿದೆ ಎಂಬ ಹೆಗ್ಗಳಿಕೆ ಪಡೆದಿರುವ ಸದರ್ನ್ ಬಟರ್‌ ಫ್ಲೈ ಗಳನ್ನೂ ಒಳಗೊಂಡು ಸುಮಾರು 48 ಪ್ರಭೇದದ ಚಿಟ್ಟೆಗಳಿಗೆ ಆಶ್ರಯ ಕಲ್ಪಿಸಿದೆ.

ಕೋಡಿಬಾಗದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನ ಸುಮಾರು 1.5 ಹೆಕ್ಟೇರ್‌ ವಿಸ್ತಾರವಾದ ಜಾಗ ಹೊಂದಿದೆ. ಇದರಲ್ಲಿ ಈಗಾಗಲೇ ಸುಮಾರು 16 ಎಕರೆ ಜಾಗವನ್ನು ಅಭಿವೃದ್ಧಿಪಡಿಸಿ ವೃಕ್ಷಉದ್ಯಾನ ನಿರ್ಮಾಣ ಮಾಡಲಾಗಿದೆ. ಅದರಲ್ಲೇ 2 ಗುಂಟೆ ಪ್ರದೇಶವನ್ನು ಈಗ ಚಿಟ್ಟೆ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರವೇಶದ್ವಾರದ ಒಳ ಹೊಕ್ಕುತ್ತಿದ್ದಂತೆ ಎಡಭಾಗದಲ್ಲೇ ಈ ಉದ್ಯಾನವಿದೆ. ಉದ್ಯಾನದ ಒಳಭಾಗದಲ್ಲಿ ಚಿಟ್ಟೆಗಳು ಕುಳಿತು ಪರಾಗಸ್ಪರ್ಶ ಕ್ರಿಯೆ ನಡೆಸಲು ಅನುಕೂಲವಾಗುವ ಹಾಗೂ ಹೆಚ್ಚು ಮಕರಂದ ನೀಡುವ ಚಿಕ್ಕ ಚಿಕ್ಕಹೂವುಗಳ ಹಾಗೂ ಕಾಡು ಗಿಡಗಳನ್ನು ಬೆಳೆಸಲಾಗಿದೆ. ಮಳೆಗಾಲದಲ್ಲಿ ಇನ್ನಷ್ಟು ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಮಧ್ಯಮ ಪ್ರಮಾಣದ ಬಿಸಿಲು ಹಾಗೂ ತಂಪಿನ ವಾತಾವರಣ ಚಿಟ್ಟೆಗಳು ಬಯಸುವುದರಿಂದ ಉದ್ಯಾನದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ.

ಸದ್ಯ ಪ್ರಾಯೋಗಿಕವಾಗಿ ಸಣ್ಣ ಜಾಗದಲ್ಲಿ ಚಿಟ್ಟೆ ಉದ್ಯಾನ ಅಭಿವೃದ್ಧಿಗೊಳ್ಳುತ್ತಿದೆ. ಇದು ಯಶಸ್ವಿಯಾದರೆ ಮತ್ತಷ್ಟು ಪ್ರದೇಶದಲ್ಲಿ ಉದ್ಯಾನವಿಸ್ತರಿಸಲಾಗುತ್ತದೆ. ಚಿಟ್ಟೆಯ ಕುರಿತಾದ ಮಾಹಿತಿ ಫಲಕಗಳನ್ನೂ ಇಲ್ಲಿ ಅಳವಡಿಸಲಾಗಿದೆ. ಉದ್ಯಾನಕ್ಕೆ ಭೇಟಿ ನೀಡುವವರಿಗೆ ಚಿಟ್ಟೆಗಳ ಜೀವನ ಶೈಲಿಯ ಬಗ್ಗೆ ಮಾಹಿತಿ ಒದಗಿಸುವಕಾರ್ಯವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮಾಡಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದಾಂಡೇಲಿ: ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಕಚೇರಿಗಳನ್ನು ಶೀಘ್ರದಲ್ಲಿ ಪ್ರಾರಂಭಿಸವುದರ ಜೊತೆಗೆ ಸಮಗ್ರ ಅಭಿವೃದ್ಧಿಗೆ ಹಾಗೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು...

  • ಹೊನ್ನಾವರ: ಪ್ರತಿವರ್ಷ ಪ್ರಸಿದ್ಧ ಇಂಗ್ಲಿಷ್‌ ಪತ್ರಿಕೆ ಔಟ್‌ಲುಕ್‌ ನೀಡುವ ಬೆಸ್ಟ್‌ ಟೂರ್‌ ಆಪರೇಟರ್‌ ಬೆಳ್ಳಿ ಪ್ರಶಸ್ತಿ ಡಾ| ಸವಿತಾ ನಾಯಕರ ಬುಡ ಫ್ಲೋಕ್‌ಲೋರ್‌ಗೆ...

  • ಕುಮಟಾ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆಗೊಳಿಸಿರುವ ತಾಲೂಕಿನ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವ ಕುರಿತು ಮತ್ತು ಅರಣ್ಯ ಹಕ್ಕು ಕಾಯಿದೆ...

  • ಶಿರಸಿ: ಐನೂರು ವರ್ಷಗಳ ಇತಿಹಾಸವುಳ್ಳ, ಕರೂರು ಅರಸ ಶಿವಪ್ಪ ನಾಯಕನಿಂದ ಪ್ರತಿಷ್ಠಾಪಿತವಾಗಿದೆ ಎಂಬ ಐತಿಹ್ಯವುಳ್ಳ ತಾಲೂಕಿನ ತುಡಗುಣಿ ಸಿದ್ಧಿವಿನಾಯಕ ದೇವಸ್ಥಾನದ...

  • ಸಿದ್ದಾಪುರ: ರಾಜ್ಯದಲ್ಲಿ ಸಂಭವಿಸಿದ ಜಲಪ್ರಳಯ ಶತಮಾನದಲ್ಲೊಮ್ಮೆ ಸಂಭವಿಸುವಂಥದ್ದು. ಅದರಿಂದ ಆದ ಅನಾಹುತಗಳನ್ನು ಎದುರಿಸಲು ರಾಜ್ಯ ಸರಕಾರ ಸವಾಲನ್ನೇ ಎದುರಿಸಬೇಕಾಗಿ...

ಹೊಸ ಸೇರ್ಪಡೆ