Udayavni Special

ಹಣ ಬಂದರೂ ನಿರ್ಮಾಣವಾಗಿಲ್ಲ ತಡೆಗೋಡೆ


Team Udayavani, Nov 23, 2019, 3:58 PM IST

uk-tdy-2

ಕುಮಟಾ: ಎರಡು ವರ್ಷಗಳ ಹಿಂದೆ ತಾಲೂಕಿನ ಮಿರ್ಜಾನ್‌ ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಐಆರ್‌ಬಿ ಕಂಪೆನಿ ಸ.ಹಿ.ಪ್ರಾ. ಶಾಲೆ ಆವಾರದ ತಡೆಗೋಡೆ ಕೆಡವಿದ್ದು, ಇದುವರೆಗೂ ಮರುನಿರ್ಮಾಣ ಮಾಡಿಕೊಡದ ಬಗ್ಗೆ ಶಾಲೆ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಶಾಲೆ 1932 ರಲ್ಲಿ ಸ್ಥಾಪನೆಯಾಗಿದ್ದು, ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿದೆ. ಈ ಶಾಲೆ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವ, ವಜ್ರಮಹೋತ್ಸವ ಆಚರಿಸಿಕೊಂಡಿಲ್ಲ. ಇದರಿಂದಾಗಿ ಸ್ಮಾರ್ಟ್‌ಕ್ಲಾಸ್‌, ಕಂಪ್ಯೂಟರ್‌ ಶಿಕ್ಷಣದಂತಹ ವಿಶೇಷ ಸೌಲಭ್ಯಗಳಿಲ್ಲವಾಗಿದೆ. ಈ ಹಿಂದೆ ಐಆರ್‌ಬಿ ಕಂಪೆನಿಯವರು ರಸ್ತೆ ಅಗಲೀಕರಣದ ಕಾರಣಕ್ಕೆ ಆವಾರದ ಗೋಡೆ ನೆಲಸಮಗೊಳಿಸಿದ್ದು, ಆ ಸಮಯದಲ್ಲಿ ಆದಷ್ಟು ಶೀಘ್ರ ಆವಾರ ತಡೆಗೋಡೆ ನಿರ್ಮಿಸಿಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು.

ಇದರ ಹಣ ಜಿಪಂಗೆ ಜಮಾ ಆಗಿದೆ ಆದರೆ ಕಂಪೌಂಡ್‌ ಭಾಗ್ಯ ಮಾತ್ರ ಶಾಲೆಗೆ ದೊರೆಯದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಂತೆ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಸಭೆ ಸೇರಿ ತಹಶೀಲ್ದಾರ್‌, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ, ಆದಷ್ಟು ಶೀಘ್ರದಲ್ಲಿ ಆವಾರದ ಗೋಡೆ ನಿರ್ಮಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದರು.

ಆ ಸಮಯದಲ್ಲಿ ಉಪವಿಭಾಗಾಧಿಕಾರಿ ಗಳಾಗಿದ್ದ ಪ್ರೀತಿ ಗೆಲ್ಹೋಟ್‌ ಸ್ಥಳ ಪರಿಶೀಲನೆ ನಡೆಸಿ, ಕಂಪೌಂಡ್‌ ನಿರ್ಮಿಸಿ ಕೊಡುವ ಬಗ್ಗೆ ಭರವಸೆ ಕೂಡ ನೀಡಿದ್ದರು. ಆದರೆ ಅವರು ವರ್ಗಾವಣೆಗೊಂಡಿದ್ದು, ಭರವಸೆ ಮಾತ್ರ ಹಾಗೆಯೇ ಉಳಿದಿದೆ. ಶಾಲಾ ಕಂಪೌಂಡ್‌ ನಿರ್ಮಾಣಕ್ಕೆ ನೀಡಿದ ಪರಿಹಾರದ ಮೊತ್ತ ಜಿಲ್ಲಾಡಳಿತಕ್ಕೆ ಜಮೆಯಾಗಿದೆ ಎಂದು ತಿಳಿದುಬಂದಿದ್ದು, ಈ ಹಣ ವಿನಿಯೋಗಿಸಿ ಯಾವ ಕಾರಣಕ್ಕೆ ಕಂಪೌಂಡ್‌ ನಿರ್ಮಿಸಲು ಮುಂದಾಗುತ್ತಿಲ್ಲವೆಂಬುದೇ ಯಕ್ಷ ಪ್ರಶ್ನೆಯಾಗಿದೆ.

ಶಾಲೆಯ ಭದ್ರತೆಗೆ ಕಂಪೌಂಡ್‌ ಆಧಾರವಾಗಿದ್ದು, ಶಾಲಾ ಸುರಕ್ಷತೆ ಹಾಗೂ ಸೌಂದರ್ಯಕ್ಕೆ ಕಂಪೌಂಡ್‌ ಅತ್ಯವಶ್ಯಕ. ತಡೆಗೋಡೆ ಭದ್ರವಾಗಿ ನೆಲೆಯೂರಿದರೆ ಶಾಲೆಯಲ್ಲಿ ಮಕ್ಕಳು ಕೈಯಾರೆ ಪ್ರೀತಿಯಿಂದ ಬೆಳೆಸಿದ ಹೂವಿನಗಿಡಗಳು ಸುಂದರವಾಗಿ ಕಾಣಲು ಸಾಧ್ಯ. ತಡೆಗೋಡೆಯಿಲ್ಲದ ಕಾರಣ ದನ-ಕರುಗಳು ಅದನ್ನು ಹಾಳುಗೆಡುವುತ್ತಿವೆ. ಅಲ್ಲದೇ ಕೌಂಪೌಂಡ್‌ ಇಲ್ಲದ ಶಾಲೆಯಲ್ಲಿ ಭಿಕ್ಷುಕರ ವಾಸಸ್ಥಾನವಾಗಿ ಗಲೀಜು ನಿರ್ಮಾಣವಾಗುತ್ತದೆ ಎನ್ನುತ್ತಾರೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮನಾಥ ಬಾಬು ನಾಯ್ಕ. ಶಾಲೆಯ ಆವಾರದ ತಡೆಗೋಡೆ ನಿರ್ಮಿಸಲು ತಹಶೀಲ್ದಾರ್‌ ಹಾಗೂ ಸಹಾಯಕ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಏನೂ ಪ್ರಗತಿ ಕಾಣದೇ ಇರುವುದರಿಂದ ಶಾಲಾ ವಿದ್ಯಾರ್ಥಿಗಳೇ ಜಾಗೃತರಾಗಿ, ತಮ್ಮ ಶಾಲೆಗೆ ವಜ್ರ ಮಹೋತ್ಸವ ಆಚರಿಸುವ ಮುನ್ನವೇ ಕಂಪೌಂಡ್‌ ನಿರ್ಮಿಸಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿರುವುದು ವಿಶೇಷವಾಗಿದೆ. ಈ ಬಗ್ಗೆ ಸಂಬಂಸಿದ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕೆಂಬುದು ಹಲವರ ಆಶಯವಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ಪುತ್ರನ ಚಿತ್ರಕ್ಕೆ ರವಿಚಂದ್ರನ್ ಆ್ಯಕ್ಷನ್-ಕಟ್..! 

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

Covid-19-Positive-1

ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಯಾದಗಿರಿ ; ರವಿವಾರ 44 ಜನರಲ್ಲಿ ಸೋಂಕು ದೃಢ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂ. ಏರಿಕೆ 

ಮಹಾರಾಷ್ಟ್ರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ 2 ರೂ. ಏರಿಕೆ 

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಕೋವಿಡ್‌ ಕಾಲದಲ್ಲಿ ಡಾಕ್ಟ್ರಿಗೂ, ನರ್ಸ್‌ಗೂ ಮದುವೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಪಿಎಂಸಿ ಮುಖ್ಯ ದ್ವಾರ ಪರಿಶೀಲನೆ

ಎಪಿಎಂಸಿ ಮುಖ್ಯ ದ್ವಾರ ಪರಿಶೀಲನೆ

1,036 ಕೋಟಿ ರೂ. ಬಜೆಟ್‌ ಮಂಡನೆ

1,036 ಕೋಟಿ ರೂ. ಬಜೆಟ್‌ ಮಂಡನೆ

ಪಕ್ಷಾಂತರ ನಿಷೇಧ ಕಾಯ್ದೆ ಅಗತ್ಯ

ಪಕ್ಷಾಂತರ ನಿಷೇಧ ಕಾಯ್ದೆ ಅಗತ್ಯ

ಸಾರ್ವಜನಿಕ ಅಹವಾಲು ಕೇಂದ್ರ

ಸಾರ್ವಜನಿಕ ಅಹವಾಲು ಕೇಂದ್ರ

ಕೋವಿಡ್  ಗೆದ್ದ  ಐದು ತಿಂಗಳ ಮಗು

ಕೋವಿಡ್ ಗೆದ್ದ ಐದು ತಿಂಗಳ ಮಗು

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ದಿಲ್ಲಿಯಲ್ಲಿ ಕೋವಿಡ್‌ ಪ್ರಕರಣಗಳು ದಾಖಲೆ ಏರಿಕೆ  

ಪುತ್ರನ ಚಿತ್ರಕ್ಕೆ ರವಿಚಂದ್ರನ್ ಆ್ಯಕ್ಷನ್-ಕಟ್..! 

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

200 ವಿಶೇಷ ರೈಲುಗಳ ಮೂಲಕ 1.45 ಲಕ್ಷ ಜನರ ಪ್ರಯಾಣ

Covid-19-Positive-1

ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಯಾದಗಿರಿ ; ರವಿವಾರ 44 ಜನರಲ್ಲಿ ಸೋಂಕು ದೃಢ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

ಪ್ರಾಧಿಕಾರದಿಂದ ದೇಶಾದ್ಯಂತ 57 ಹೆದ್ದಾರಿ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.