ಬ್ಯಾಡಗಿ ಮೆಣಸಿನಕಾಯಿ ಬೆಳೆದ ಅಡಕೆ ಕೃಷಿಕ


Team Udayavani, Oct 25, 2021, 2:20 PM IST

Untitled-1

ಶಿರಸಿ: ನೆರೆಯ ಹಾವೇರಿ ಜಿಲ್ಲೆ ಬ್ಯಾಡಗಿ ಹಾಗೂದೇವನೂರು ತಳಿಯ ಮೆಣಸಿನಕಾಯನ್ನೇ ಹೆಚ್ಚಾಗಿ ಇಷ್ಟಪಡುವ ಉತ್ತರ ಕನ್ನಡದ ರೈತರು ಇದೀಗ ಸ್ವತಃಅದೇ ತಳಿಯ ಬೇಸಾಯಕ್ಕೆ ಮುಂದಾಗಿದ್ದಾರೆ.ಅಲ್ಲದೇ ಈ ಭಾಗದಲ್ಲಿ ಗುಂಟೂರು ತಳಿಗೆ ಬೇಡಿಕೆ ಕಡಿಮೆ.

ವಿಶೇಷ ಎಂದರೆ, ಈಚೆಗೆ ಹಾವೇರಿ ಜಿಲ್ಲೆಯ ಹಲವೆಡೆ ಮೆಣಸು ಬೆಳೆಗಾರರೂ ಅಡಕೆಬೆಳೆಯುತ್ತಿದ್ದಾರೆ. ಅಲ್ಲಿ ಶಿರಸಿ ಅಡಕೆ ಸಸಿಗಳಿಗೆ ಅಪಾರ ಬೇಡಿಕೆ ಕೂಡ ಇದೆ!

ಇಲ್ಲಿ ಹೊಸ ಸಾಹಸ: ಶಿರಸಿ ಸಮೀಪದ ಅಡಕೆ ಬೆಳೆಗಾರರೊಬ್ಬರು ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾಗಿದ್ದಾರೆ. ಆಧುನಿಕ ಪದ್ಧತಿಯಲ್ಲಿ ಮೆಣಸಿನ ಕೃಷಿ ಮಾಡುತ್ತಿದ್ದಾರೆ. ಬರುವ ಡಿಸೆಂಬರ್‌ ವೇಳೆಗೆಇದರ ಕೊಯ್ಲು ಕೂಡ ಆಗಬಹುದು ಎಂಬುದುಅವರ ನಿರೀಕ್ಷೆ. ಬರೂರು ಪಕ್ಕದ ಕಬ್ಬಗಾರಿನ ಜಯಂತ ಸೋಮೇಶ್ವರ ಹೆಗಡೆ ಈ ಸಾಧನೆಗೆಮುಂದಾಗಿದ್ದಾರೆ. ತೋಟಗಾರಿಕಾ ಇಲಾಖೆಯ ನೆರವು ಪಡೆದು ಸ್ವತಃ 8.50 ಲಕ್ಷ ರೂ. ವಿನಿಯೋಗಿಸಿ 20 ಗುಂಟೆ ಕ್ಷೇತ್ರದಲ್ಲಿ ಪಾಲಿಹೌಸ್‌ ನಿರ್ಮಾಣಮಾಡಿಕೊಂಡರು. ತೋಟಗಾರಿಕಾ ಇಲಾಖೆಯ ಮಹಾಬಲೇಶ್ವರ ಹೆಗಡೆ, ತೋಟಗಾರಿಕಾ ಕಾಲೇಜಿನ, ಕೆವಿಕೆ ವಿಜ್ಞಾನಿಗಳು ನೆರವಾದರು.

ಕಹಿಯಾದ ಸೌತೆ: ಕಳೆದ ಫೆಬ್ರವರಿ ನಂತರ ಪ್ರಥಮ ಬಾರಿಗೆ ಸೌತೆ ಬೇಸಾಯ ಮಾಡಿದರು. ಅದ್ಭುತ ಬೆಳೆಬಂತು. ಆದರೆ, ಆ ವೇಳೆಗೆ ಕೋವಿಡ್‌ ಲಾಕ್‌ಡೌನ್‌ಶುರುವಾಯಿತು. ಭರಪೂರ ಬೆಳೆ ಬಂತು. ಆದರ,ಮಾರುಕಟ್ಟೆಯೇ ಇಲ್ಲವಾಯಿತು. ಟನ್‌ಗಳಷ್ಟುಇದ್ದಾಗಲೇ ನಿರ್ವಹಣೆ ಮಾಡಲಾಗದೆ ಬೇಸಾಯಕ್ಕೆ ವಿದಾಯ ಹೇಳಿದರು. ಸವಿಯಾಗಬೇಕಿದ್ದ ಸೌತೆಕಹಿಯಾಯಿತು. ಇನ್ನೂ ಸೌತೆ ಖರೀದಿಸಿದವರಲ್ಲಿ  ಕೆಲವರು ಹಣ ಪಾವತಿಸಬೇಕಾಗಿದ್ದೂ ಸುಳ್ಳಲ್ಲ!

ಹೊರಳಿದ ಕೃಷಿ: ಸೌತೆ ತೆಗೆದ ಬೆಳೆಗಾರ ಜಯಂತ, ಅಧಿಕಾರಿಗಳ, ವಿಜ್ಞಾನಿಗಳ ಹಾಗೂ ನಾಗರಾಜಹೆಗಡೆ ಅವರ ಸಲಹೆ ಸಹಕಾರ ಪಡೆದು ಕಳೆದಜೂನ್‌ದಲ್ಲಿ ಮಡಿಯಲ್ಲಿ ಸಸಿ ತಯಾರಿಸಿ 20ಗುಂಟೆಯಲ್ಲೂ ಮೆಣಸು ಕೃಷಿ ಆರಂಭಿಸಿದರು. ಒಂದು ಅಡಿಗೆ ಒಂದರಂತೆ, ಮೂರು ಅಡಿಅಗಲ ಇಟ್ಟು 4 ಸಾವಿರಕ್ಕೂ ಅಧಿಕ ಸಸಿ ನೆಟ್ಟರು. ಸಾವಯವ ಗೊಬ್ಬರ, ಟ್ರೈಕೋಡರ್ಮಾ ಕೊಟ್ಟರು.

ನಂತರ ರಸಾವರಿ ಕೊಟ್ಟರು. ಪ್ಲಾಸ್ಟಿಕ್‌ ಹೊದಿಕೆ ಕೂಡ ಮಾಡಿದರು. ನೆಟ್ಟ ಒಂದುವರೆ ತಿಂಗಳಿಗೆ ಹೂವೂಬಂತು. ಕೆಲವು ಉದುರಿದ್ದು ಈಗ ಮತ್ತೆ ಹೂವುಕಚ್ಚುತ್ತಿದೆ. ಕೆಲವು ಒಳ್ಳೆ ಫಲ ಕೊಡುತ್ತಿದೆ ಎನ್ನುತ್ತಾರೆ.

ಇಡೀ ಕುಟುಂಬ ಭಾಗಿ: ತೋಟಗಾರಿಕಾ ಪದವಿ ಪಡೆಯುತ್ತಿದ್ದು, ತಾಯಿ, ಹೆಂಡತಿ, ಇನ್ನೊಬ್ಬ ಮಗನಿಗೂ ಕೃಷಿಯಲ್ಲಿ ಆಸಕ್ತಿ. ಎಲ್ಲರೂ ಜೊತೆಯಾಗಿ ಅಡಕೆ ಬೇಸಾಯದ ಜೊತೆ ಹೊಸತನದ ಕೃಷಿ ಮಾಡುತ್ತಿರುವುದಾಗಿ ಹೇಳುತ್ತಾರೆ. ಆಸಕ್ತ ರೈತರು ಮಾಹಿತಿಗಾಗಿ ಮೊ.ಸಂ: 9449480772ಗೆ ಸಂಪರ್ಕಿಸಬಹುದು.

ಈಗಾಗಲೇ ಸುಮಾರು 60 ಸಾವಿರ ರೂ. ಖರ್ಚಾಗಿದೆ. ಸುಮಾರು 25 ಕ್ವಿಂಟಾಲ್‌ ಒಣ ಮೆಣಸಿನ ನಿರೀಕ್ಷೆ ಇದೆ.– ಜಯಂತ ಹೆಗಡೆ, ರೈತ

ಜಯಂತರಿಗೆ ಸೌತೆಕಾಯಿ ಲಾಭ ತರಲಿಲ್ಲ.ಈಗ ಮೆಣಸಿನ ಬೆಳೆ ಚೆನ್ನಾಗಿ ಬರುತ್ತಿದೆ. ಖಾಲಿ ಭೂಮಿ ಸದ್ಬಳಕೆಯ ಅವರ ಆಶಯ ಈಡೇರಲಿ. -ದಿನೇಶ ಹೆಗಡೆ ಕರ್ಕಿಸವಲ್‌, ರೈತ

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.