ನೆರವಿಗೆ ಬಾರದ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌!

ಟವರ್‌ ಹೋದ್ರೂ, ಕರೆಂಟ್‌ ಹೋದ್ರೂ ತುರ್ತು ಫೋನ್‌ ಮಾಡಲು ನೆಟ್‌ವರ್ಕ್‌ ಇರೋದಿಲ್ಲ

Team Udayavani, May 23, 2021, 7:34 PM IST

may22srs1

ಶಿರಸಿ: ದೇಶದ ಏಕಮೇವ ಮಠಗಳ ಗ್ರಾಮ ಎಂದೇ ಹೆಸರಾದ ತಾಲೂಕಿನ ಸೋಂದಾ ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಎಂದು ಫೋನ್‌ ಮಾಡಲು ಹೋದರೂ ನೆಟ್‌ವರ್ಕ್‌ ಇರೋದಿಲ್ಲ. ಹೀಗೆ ಬಂದ ಭಾರತ್‌ ಸಂಚಾರ ನಿಗಮದ ನೆಟ್‌ವರ್ಕ್‌ ಮಾತನಾಡುತ್ತಿದ್ದಾಗಲೇ ಮಂಗಮಾಯವಾಗುತ್ತದೆ. ಆಂಬ್ಯುಲೆನ್ಸ್‌ಗೆ ಫೋನ್‌ ಮಾಡಲೂ ಹೆಣಗಾಟ ಮಾಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ.

ಕಳೆದ ಆರೇಳು ತಿಂಗಳುಗಳಿಂದ ಸೋಂದಾ ಭಾಗದ ಸುಮಾರು 450ಕ್ಕೂ ಅಧಿ ಕ ಕುಟುಂಬಗಳಿಗೆ ಎರಡು ಸಾವಿರಕ್ಕೂ ಅ ಧಿಕ ಜನರಿಗೆ ಫೋನ್‌ ಗಗನ ಕುಸುಮ ಎಂಬಂತಾಗಿದೆ. ಎಲ್ಲ ಇದ್ದೂ ಇಲ್ಲದಂತಾದ ಸಂಪರ್ಕ ವ್ಯವಸ್ಥೆ ಕೊರೊನಾದಂತಹ ತುರ್ತು ಸಂದರ್ಭದಲ್ಲೂ ನೆರವಿಗೆ ಬಾರದೇ ಇದ್ದರೆ ಹೇಗೆ ಎಂಬುದು ಗ್ರಾಹಕರ ಪ್ರಶ್ನೆಯಾಗಿದೆ. ಸೋಂದಾ, ಮಠದೇವಳ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಸೇತುವಾಗಿದ್ದ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ ದಿನದಲ್ಲಿ ಎರಡು ತಾಸು ನೆಟ್ಟಗೆ ಇದ್ದರೂ ದಾಖಲೆಯೇ ಎಂಬಂತಾಗಿದೆ.

ಮನೆಯಿಂದಲೇ ಕೆಲಸ ಮಾಡುವವರು, ಅನಿವಾರ್ಯವಾಗಿ ಸಂಪರ್ಕ ಮಾಡಬೇಕು ಎನ್ನುವರು, ಸೊಸೈಟಿ, ಪಂಚಾಯತ ವ್ಯವಸ್ಥೆಗೆ, ರೇಶನ್‌ಗೆ ಎಲ್ಲವಕ್ಕೂ ಟವರ್‌ ಪ್ರಾಬ್ಲಿಂ ಇದೆ. ಕೊರೋನಾ ಲಾಕ್‌ಡೌನ್‌ ಕಾಲದಲ್ಲಿ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎನ್ನುವ ಘೋಷಣೆ ಇಲ್ಲಿ ಅನಾರೋಗ್ಯದಲ್ಲಿ ಆಂಬ್ಯುಲೆನ್ಸ್‌ ತರಿಸಲೂ ಗುಡ್ಡ ಏರುವಂತಾಗಿದೆ. ಇದ್ದ ಖಾಸಗಿ ಟವರ್‌ ಒಂದರ ಮೊಬೈಲ್‌ ಸಂಪರ್ಕ ಬಂದರೆ ಪುಣ್ಯ ಎಂಬಂತಾಗಿದೆ.

ಔಡಾಳ, ಮೊಗದ್ದೆ, ಸೋಂದಾ, ಮಠದೇವಳ, ವಾಜಗದ್ದೆ, ಸೋಂದಾ ಪೇಟೆ ಎಲ್ಲಡೆ ಇದೇ ಸಮಸ್ಯೆ. ಔಡಾಳ, ಮೋಗದ್ದೆ, ಸೋಂದಾ, ಮಠದೇವಳದ ಬಿಎಸ್‌ಎನ್‌ಎಲ್‌ ಟವರ್‌ಗಳಿಗೆ ಭೆ„ರುಂಬೆ ಟವರ್‌ನ ಮೈಕ್ರೋವೇವ್‌ ಸಂಪರ್ಕ ಇದೆ. ಭೈರುಂಬೆ ಟವರ್‌ ಹಾಳಾದರೆ ಇಲ್ಲಿ ನೆಟ್‌ವರ್ಕ್‌ ಇಲ್ಲ. ಹೆಸ್ಕಾಂನಿಂದ ಭೈರುಂಬೆ ಟವರ್‌ಗೆ ಕರೆಂಟ್‌ ಕೊಡಲಾಗಿದೆ. ಅಲ್ಲಿ ಪವರ್‌ ಕಟ್‌ ಆದರೂ ಈ ಟವರ್‌ ನಾಲ್ಕೂ ನೆಟ್‌ವರ್ಕ ಹೊಗುತ್ತದೆ. ಹುಲೇಕಲ್‌ ಭಾಗದಿಂದ ಈ ನಾಲ್ಕೂ ಟವರ್‌ ಗೆ ಕರೆಂಟ್‌ ಕೊಡಲಾಗಿದೆ. ಇಲ್ಲಿ ಕರೆಂಟ್‌ ತೆಗೆದರೆ ಮತ್ತೆ ನೆಟ್‌ವರ್ಕ ಇಲ್ಲ! ಟವರ್‌ಗಳಿಗೆ ಬ್ಯಾಟರಿ, ಜನರೇಟರ್‌ ಯಾವುದೂ ಇಲ್ಲ!. ಇರೋದಕ್ಕೆ ದರಸ್ತಿಯೂ ಆಗಿಲ್ಲ. ಅನಿವಾರ್ಯವಾಗಿ ಕಾಲ್‌ ಮಾಡಬೇಕು ಎಂದರೂ ಐದು ಕಿಮೀ ಆಚೆ ಹೋದರೆ ಬಕ್ಕಳ, ಶಿರಸಿ ನೆಟ್‌ವರ್ಕ್‌ ಸಿಗಬಹುದು. ಕಳೆದ ಆರು ತಿಂಗಳುಗಳಿಂದ ಸೋಂದಾ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ ಕತೆ ಇದೇ ಆಗಿದೆ. ಇಂಟರ್‌ ನೆಟ್‌ ಬಿಡಿ, ಮಾತನಾಡಲೂ ಆಗದಂತೆ ಆಗುತ್ತಿದೆ ಎನ್ನುತ್ತಾರೆ ಸೋಂದಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ ಭಂಡಾರಿ.

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.