ರೋಟರಿ ಕ್ಲಬ್‌ನಿಂದ ಸದಾಶಿವಗಡದಲ್ಲಿ ಸ್ವಚ್ಛತೆ
Team Udayavani, Jan 24, 2021, 4:24 PM IST
ಕಾರವಾರ: ರೋಟರಿ ಕ್ಲಬ್ ಸದಸ್ಯರು ಸದಾಶಿವಗಡದಲ್ಲಿ ಸಂಘಟಿತವಾದ ಸುಂದರ ಸದಾಶಿವಗಡ ಎಂಬ ಸ್ವಯಂ ಸೇವಾ ಸಂಸ್ಥೆ ಸಹಯೋಗದೊಂದಿಗೆ ಸದಾಶಿವಗಡದ ದಸರಾಶಿಟ್ಟಾ ಎದುರುಗಡೆ ರಸ್ತೆ ಪಕ್ಕದಲ್ಲಿ ಎಸೆಯಲ್ಪಟ್ಟ ಕಸವನ್ನು ತೆಗೆದು ಅಲ್ಲಿನ ಪರಿಸರವನ್ನು ಸ್ವತ್ಛಗೊಳಿಸಿದರು.
ಊರಿನ ಯುವ ಪೀಳಿಗೆಗೆ ಸ್ವತ್ಛತೆಯ ಹಾಗೂ ಸ್ವಾಸ್ಥ್ಯದ ಅರಿವು ಮೂಡಿಸುವ ಉದ್ದೇಶದಿಂದ ಯುವಕರ ಜೊತೆಯಲ್ಲಿ ವಾಲಿಬಾಲ್ ಆಡಿದರು. ಸದಾಶಿವಗಡ ಒಂದು ಐತಿಹಾಸಿಕ ಸ್ಥಳ. ಆದರೆ, ಇಲ್ಲಿನ ಇತಿಹಾಸ ಬಹಳ ಜನರಿಗೆ ಗೊತ್ತಿಲ್ಲ. ನಮ್ಮ ಶಾಲೆಗಳಲ್ಲಿ ಸ್ಥಳೀಯ ಇತಿಹಾಸ ಕಲಿಸುವ ಪ್ರಬಂಧವಿಲ್ಲ. ವಿದ್ಯಾರ್ಥಿಗಳಲ್ಲಿ ಸದಾಶಿವಗಡದ ಇತಿಹಾಸದ ಅರಿವುಮೂಡಿಸುವ ಉದ್ದೇಶದಿಂದ ರೋಟರ ಕ್ಲಬ್ ಸದಸ್ಯರು ಚಿತ್ತಾಕುಲಾ-ಕಾರವಾರ ಎಂಬ ಪುಸ್ತಕವನ್ನು ಅಲ್ಲಿಯ ಶಿವಾಜಿ ಪ್ರಿಯುನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲ ಉದಯ ಪವಾರರಿಗೆ ಉಡುಗೊರೆಯಾಗಿ ನೀಡಿದರು. ಮಾಧವ ಅನಂತ ದೇಸಾಯಿ 1969ರಲ್ಲಿ ಬರೆದು ಪ್ರಕಾಶಿಸಿದ ಈ ಪುಸ್ತಕವನ್ನು ಹಿರಿಯ ರೋಟರಿ ಸದಸ್ಯ ಕೃಷ್ಣಾನಂದ ಬಾಂದೇಕರ 2018ನಲ್ಲಿ ಮರು ಮುದ್ರಿಸಿದ್ದಾರೆ.
ಇದನ್ನೂ ಓದಿ:ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ಮಾದಮ್ಮ ರಾಜ್ಯದ ಪ್ರತಿನಿಧಿ
ರೋಟರಿ ಅಧ್ಯಕ್ಷ ಸುನಿಲ ಸೋನಿ, ಕಾರ್ಯದರ್ಶಿ ಗಣಪತಿ ಬಾಡಕರ, ಊರಿನ ಗಣ್ಯರೂ ಹಾಗೂ ಪ್ರಸಿದ್ಧ ನ್ಯಾಯವಾದಿ ರಾಜಾ ನಾಯ್ಕ, ಪ್ರಕಾಶ ಸಾಮಂತ, ಅಶೋಕ ರಾಣೆ, ವಿ.ಜಿ.ನಾಯ್ಕ ಮುಂತಾದವರು ಮಾತನಾಡಿದರು. ರೋಟರಿ ಸದಸ್ಯರಾದ ನಾಗರಾಜ ಜೋಶಿ, ಎಂ.ಎ. ಕಿತ್ತೂರ, ಶೈಲೇಶ ಹಳದಿಪುರ, ಅಮರನಾಥ ಶೆಟ್ಟಿ, ನರೇಂದ್ರ ದೇಸಾಯಿ, ಡಾ| ಸಮೀರಕುಮಾರ ನಾಯಕ, ರಾಮಚಂದ್ರ ಪಡವಳಕರ, ಗುರು ಹೆಗಡೆ, ಗುರುದತ್ತ ಬಂಟ ಮುಂತಾದವರು ಉಪಸ್ಥಿತರಿದ್ದರು. ಶಾಮ ರಾಣೆ, ಗಣಪತಿ ನಾಯ್ಕ, ರಾಯ್ಕರ, ಸುಶ್ಮಾ ಬಾಡಕರರ ಪಾಲ್ಗೊಂಡಿದ್ದರು.