ಸಚಿವರು ಜನಕ್ಕೆ-ಜನ ಆಸ್ಪತ್ರೆಗೆ ಮುಗಿದರು ಕೈ!


Team Udayavani, May 13, 2021, 2:58 PM IST

covid effect

ಹೊನ್ನಾವರ: ಸರ್ಕಾರದ ಸಕಲ ಪ್ರಯತ್ನಗಳನಡುವೆಯೂ ಕೋವಿಡ್‌ ಮೊದಲ ಅಲೆಗಿಂತದ್ವಿತೀಯ ಅಲೆ ಜಿಲ್ಲೆಯ ಜನರನ್ನು ಹೆಚ್ಚಾಗಿಕಾಡತೊಡಗಿದೆ. ಈ ಬಾರಿ ಆರೋಗ್ಯ ಇಲಾಖೆಹೆಚ್ಚು ಸುಸಜ್ಜಿತವಾಗಿದ್ದರೂ ಜನ ಮೊದಲಿಗಿಂತಹೆಚ್ಚು ಮೈಮರೆಯುತ್ತಿರುವುದು ಹಳ್ಳಿಹಳ್ಳಿಗಳಲ್ಲಿಕೋವಿಡ್‌ ಹರಡಲು ಕಾರಣವಾಗಿದೆ.

ಮೊದಲ ಅಲೆ ಮುಗಿದೊಡನೆ ಮಾಸ್ಕ್ ಮೂಲೆಸೇರಿತು. ಇನ್ನೇನು ಲಸಿಕೆ ಬಂದೋಯ್ತು ಎಂದುಜನ ಅವರವರದೇ ತೀರ್ಮಾನ ತೆಗೆದುಕೊಂಡರು.ದ್ವಿತೀಯ ಅಲೆ ಕಾಡತೊಡಗಿದರೂ ಎಚ್ಚರಾಗಲಿಲ್ಲ.ಹೊರಗಿನಿಂದ ಬಂದವರು ತಂದರು ಎಂದರು.ಅವರು ತಂದರು, ಇವರು ಲಕ್ಷé ವಹಿಸಲಿಲ್ಲ. ಅವರುಹಂಚಿ ಕೂತರು, ಇವರು ಮದುವೆ-ಮುಂಜಿಎಂದು ಓಡಾಡಿ ಊರಿಗೆಲ್ಲಾ ಹಂಚಿದರು. ಇದರಪರಿಣಾಮವೇ ಆಸ್ಪತ್ರೆ ಹಾಸಿಗೆಗಳೆಲ್ಲಾ ಭರ್ತಿ.ಸಚಿವ ಹೆಬ್ಟಾರ್‌ ಹೇಳುವಂತೆ ಇತರೆಡೆ ಪರಿಸ್ಥಿತಿಭೀಕರವಾದರೂ ಜಿಲ್ಲೆಯಲ್ಲಿ ಅಂತಹ ಪರಿಸ್ಥಿತಿಬಂದಿಲ್ಲ.

ಅಂದಮಾತ್ರಕ್ಕೆ ನಿರ್ಲಕ್ಷಿಸುವಂತೆಯೂ ಇಲ್ಲ.ಸಕಲ ಸಿದ್ಧತೆ ಮಾಡಿಕೊಂಡು ಕೂತ ತಾಲೂಕಾಡಳಿತಕ್ಕೆಈಗಿನ ಸಿದ್ಧತೆ ಸಾಲದೇನೋ ಅನ್ನುವ ಪರಿಸ್ಥಿತಿಬಂದಿದೆ. ತಾಲೂಕಿಗೆ ಎರಡುಮೂರ ಆಂಬ್ಯುಲೆನ್ಸ್‌,ಧರ್ಮಸ್ಥಳದ ವಾಹನ, ಯಲ್ಲಾಪುರದಲ್ಲಂತೂಪ್ರತಿ ಜಿಪಂ ಕ್ಷೇತ್ರಕ್ಕೆ ತಲಾ ಒಂದು ವಾಹನ.ಶಾಸಕ ಸುನೀಲ್‌ ನಾಯ್ಕರಿಂದ ಭಟ್ಕಳ ಹಾಗೂಹೊನ್ನಾವರಕ್ಕೆ ತಲಾ ಒಂದು ವಾಹನ. ಭಟ್ಕಳದಲ್ಲಿಇಡೀ ಆಸ್ಪತ್ರೆ ಕೋವಿಡ್‌ಗೆ ಮೀಸಲಿಟ್ಟು ಸಾಮಾನ್ಯರೋಗಿಗಳಿಗೆ ಬೇರೆಡೆ ಸ್ಥಳಾಂತರ. ಹೊನ್ನಾವರದಲ್ಲಿನಿರಂತರ ಕೋವಿಡ್‌ ತಪಾಸಣೆ.

ಸೋಂಕಿತರಿಗೆಕೂರಲು ಶೆಡ್‌, ಬೇಕಾದಷ್ಟು ಆಕ್ಸಿಜನ್‌, ಔಷಧಗಳು,ಹೋಂ ಕ್ವಾರಂಟೈನ್‌ ಆಗುವವರಿಗೆ ಔಷಧ ಮತ್ತುಮಾರ್ಗದರ್ಶನ, ಇಷ್ಟೆಲ್ಲಾ ಇದ್ದರೂ ಎಲ್ಲವೂಹೊಳೆಯಲ್ಲಿ ತೊಳೆದ ಹುಣಸೆಹಣ್ಣಿನಂತೆ ಆಗುತ್ತಿದೆ.ಸೋಂಕು ಮಾತ್ರ ಹೆಚ್ಚುತ್ತಲೇ ಇದೆ.ಜನರಿಗೆ ಕೋವಿಡ್‌ ಕುರಿತು ತಪ್ಪು ಕಲ್ಪನೆಯೇಹೆಚ್ಚಾಗಿದೆ.

ನೆಗಡಿ, ಜ್ವರ, ಶೀತ ಏನೇ ಇರಲಿ ಅಥವಾಕೋವಿಡ್‌ನ‌ ಸಾಮಾನ್ಯ ಒಂದೇ ಲಕ್ಷಣವಿದ್ದರೂಸರಿ ತಾಲೂಕಾಸ್ಪತ್ರೆಗೆ ಬನ್ನಿ, ಎಲ್ಲ ಉಚಿತ ಎಂದರೂಕೇಳುವುದಿಲ್ಲ. ನಿಮ್ಮೂರ ಪ್ರಾಥಮಿಕ ಆರೋಗ್ಯಕೆಂದ್ರಕ್ಕಾದರೂ ಹೋಗಿ ಎಂದರೂ ಕೇಳುವುದಿಲ್ಲ.ಮದುವೆ ಮನೆಯಲ್ಲಿ ಉಂಡು ಬಂದವರುನಾಲ್ಕಾರು ದಿನ ಯಾರೋ ಕೊಟ್ಟ ಗುಳಿಗೆ ನುಂಗಿಉಸಿರು ಬಿಡಲು ಕಷ್ಟವಾದ ಮೇಲೆ ನಿನ್ನೆ ಮಾತ್ರಶುರುವಾಗಿದೆ ಎನ್ನುತ್ತ ತಾಲೂಕಾಸ್ಪತ್ರೆಗೆ ಬರುತ್ತಾರೆ.ನಿಮ್ಮಲ್ಲಿ ಆಕ್ಸಿಜನ್‌ ಇದೆಯೇ, ವೆಂಟಿಲೇಟರ್‌ಇದೆಯೇ, ಸ್ಕಾÂನಿಂಗ್‌ ಇದೆಯೇ, ರೆಮ್‌ಡೆಸಿವಿಯರ್‌ ಇದೆಯೇ ಎಂದು ಕೇಳುತ್ತಾರೆ.ಅಥವಾ ಅವರ ಪರವಾಗಿ ಊರಿನ ಯಾವುದಾರೂಬುದ್ಧಿವಂತರು ಆರೋಗ್ಯಾಧಿಕಾರಿಗಳ ಅಥವಾವೈದ್ಯರ ತಲೆ ತಿನ್ನುತ್ತಲೇ ಇರುತ್ತಾರೆ.

ಯಾರಿಗೆಯಾವ ಚಿಕಿತ್ಸೆ ಕೊಡಬೇಕು, ಅವರಿಗೆ ಹೋಂಕ್ವಾರಂಟೈನ್‌ ಮಾಡುವುದೋ ಆಸ್ಪತ್ರೆಯಲ್ಲಿಉಳಿಸುವುದೋ ಆಕ್ಸಿಜನ್‌ ಕೊಡುವುದೋ, ರೆಮ್‌ಡೆಸಿವಿಯರ್‌ ಕೊಡುವುದೇ, ಎಕ್ಸರೇ ಅಥವಾಅಪಾಯಕಾರಿಯಾದ ಸಿಟಿಸ್ಕಾÂನ್‌ ಅಗತ್ಯವಿದೆಯೇ,ಮೂಗು ಗಂಟಲಲ್ಲಿ ಕೊಳವೆ ತೂರಿಸುವವೆಂಟಿಲೇಟರ್‌ ಅವಶ್ಯಕತೆ ಇದೆಯೇ ಎಂಬುದನ್ನುವೈದ್ಯರು ನಿರ್ಧರಿಸಬೇಕು.ಏನೂ ಜ್ಞಾನವಿಲ್ಲದವನಿಗೆ ತಿಳಿಸಬಹುದು,ತಿಳಿದವರಿಗೆ ಹೇಳುವ ಅವಶ್ಯಕತೆ ಬರುವುದಿಲ್ಲ.ಅರೆಜ್ಞಾನಿಗಳು ಎಲ್ಲ ಕ್ಷೇತ್ರದಲ್ಲೂ ಅಪಾಯಕಾರಿ,ಇವರದ್ದೇ ಹುಯ್ಲು ಜೋರಾಗಿದೆ. ಇನ್ನೊಂದಿಷ್ಟುಜನ ಕೋವಿಡ್‌ ಎಂದರೆ ಏನೂ ಅಲ್ಲ ಅದು, ನೆಗಡಿ,ಶೀತದಂತೆ ವೈರಸ್‌ನಿಂದ ಬರುವುದು ಎಂದುಸಮಾಧಾನ ಹೇಳಲು ಹೋಗಿ ಅದರ ಗಂಭೀರತೆಕಳೆಯುತ್ತಾರೆ. ಅರೆಬರೆ ತಿಳಿವಳಿಕೆಯಿಂದಮತಹಾಕಿದರೆ 5 ವರ್ಷ ಅನುಭವಿಸಿದರೆ ಸಾಲುತ್ತದೆ.ಮತ್ತೆ ಬದಲಾಯಿಸಬಹುದು.

ಆರೋಗ್ಯಕ್ಕೆಸಂಬಂಧಿಸಿದ ವಿಷಯದಲ್ಲಿ ಅರೆಬರೆ ಜ್ಞಾನಬಳಸುವುದು ಇನ್ನೊಬ್ಬರ ಜೀವಕ್ಕೆ ಅಪಾಯಕಾರಿಎಂಬುದನ್ನು ಅರಿಯಬೇಕಾಗಿದೆ.ಒಬ್ಬ ಸೋಂಕಿತ ಮದುವೆಗೆ ಹೋದರೆ20-25 ಜನರನ್ನು ಮಾತನಾಡಿಸುತ್ತಾನೆ. ಆ 25 ಜನತಲಾ 25ರಂತೆ 625ಜನರನ್ನು ಮಾತನಾಡಿಸುತ್ತಾರೆ,ಕೋವಿಡ್‌ ಹಂಚುತ್ತಾರೆ. ಸರ್ಕಾರ ಕಲ್ಯಾಣಮಂಟಪದ ಮದುವೆ ರದ್ದುಪಡಿಸಿತು. 50ಜನರನ್ನುಸೇರಿಸಿ ಮನೆಯಲ್ಲೇ ಮಾಡಿ ಎಂದು ಪರವಾನಿಗೆಕೊಟ್ಟಿತು.

ಚಿಕ್ಕಚಿಕ್ಕ ಮನೆಗಳಲ್ಲಿ 400-500 ಜನರನ್ನುತುಂಬಿಸಿ ಮದುವೆಯ ಊಟದ ಜೊತೆ ಕೊರೊನಾಸೋಂಕಿನ ಉಡುಗೊರೆ ಕೊಟ್ಟು ಕಳಿಸಿದ ಕಾರಣ ಈಪರಿಸ್ಥಿತಿ ಬಂದಿದೆ.ಸರ್ಕಾರ, ತಾಲೂಕಾಸ್ಪತ್ರೆಗಳು, ಜಿಲ್ಲಾಡಳಿತಮತ್ತು ತಾಲೂಕಾಡಳಿತ ತನ್ನ ಕರ್ತವ್ಯ ಮಾಡುತ್ತಿದೆ.ನಿತ್ಯ ಸಾವು ನೋವು ನೋಡುವ ವೈದ್ಯರ ಪಾಲಿಗೆಇದೆಲ್ಲಾ ಅಂಕೆಸಂಖ್ಯೆ ಮಾತ್ರ. ನಮ್ಮ ನಿರ್ಲಕ್ಷéದಿಂದನಾವು ಕಳೆದುಕೊಳ್ಳುವುದು ಅಮೂಲ್ಯ ಜೀವ,ಕುಟುಂಬದ ಆಸ್ತಿ ಎಂಬುದನ್ನು ಮರೆಯಬಾರದು.

ಜೀಯು, ಹೊನ್ನಾವರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.