ಕೋವಿಡ್ ಆಘಾತಕ್ಕೆ ಮುದುಡಿದ ಪುಷ್ಪೋದ್ಯಮ


Team Udayavani, Apr 25, 2021, 2:21 PM IST

Covid shock

ರಾಘವೇಂದ್ರ ಬೆಟ್ಟಕೊಪ್ಪ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆಮೂಲಕವೇ ಉತ್ತೇಜನಗೊಂಡಿದ್ದ ಪುಷೊ³àದ್ಯಮಕ್ಕೆಈ ಬಾರಿ ಕೂಡ ಕೊರೊನಾಘಾತವಾಗಿದೆ. ಪುಷ್ಪಬೆಳೆ ನಂಬಿ ಕೃಷಿ ಮಾಡಿದ್ದ ರೈತರು ಈಗ ಸ್ವತಃಮುದುಡುವಂತಾಗಿದೆ.ಮಲ್ಲಿಗೆ, ಗುಲಾಬಿ, ಕಾಕಡ, ಅದರಲ್ಲೂಗ್ಲಾಡಿಯೋಲಸ್‌ ಹೂವುಗಳು ಒಂದಕ್ಕಿಂತ ಒಂದುಚೆಂದ. ಅದನ್ನು ದೂರದ ಬೆಂಗಳೂರು, ಮಂಗಳೂರು,ದೆಹಲಿ, ಹೈದರಾಬಾದ್‌ಗಳಿಗೆ ಕಳಿಸಿ ವಹಿವಾಟುನಡೆಸುತ್ತಿದ್ದರು.

ರಾತ್ರಿ ಪ್ಯಾಕ್‌ ಮಾಡಿ ಕಳುಹಿಸಿದರೆಮರುದಿನವೇ ಅವರಿಗೆ ಸಿಗುತ್ತಿದ್ದವು.ರೈತರು ತಮ್ಮ ಹೊಲಗಳಲ್ಲಿ ಕೃಷಿ ಮಾಡಿ, ಅರಳಿದಪುಷ್ಪವನ್ನು ಬಸ್ಸಿನ ಮೂಲಕ ದೂರದ ಊರಿನವರ್ತಕರಿಗೆ, ಕೆಲವೊಮ್ಮೆ ನೇರ ಗ್ರಾಹಕರಿಕೆ ಕಳಿಸುತ್ತಿದ್ದರು.ಈ ಬಾರಿ ಈ ನಂಟಿಗೆ ಕೊರೊನಾ ಏಟಾಗಿದೆ.ಜಿಲ್ಲೆಯಲ್ಲಿ ಗ್ಲಾಡಿಯೋಲಸ್‌ ಬೇಸಾಯ ಕೂಡಮಾಡಲಾಗುತ್ತಿದೆ.

ಇದು ಹಿಂಗಾರಿ ಆಗಿದ್ದು,ಮೂರು ತಿಂಗಳ ಬಳಿಕ ಅರಳಿದ ಪುಷ್ಪಗಳನ್ನುಅಲಂಕಾರಿಕ ಹೂವಾಗಿ ಮದುವೆ, ಮುಂಜಿ ಮತ್ತಿತರಕಾರ್ಯಕ್ರಮಗಳಿಗೆ ಸಿಂಗರಿಸಲು ಕಳುಹಿಸುತ್ತಿದ್ದರು.ಪ್ರತಿ ಕಡ್ಡಿಗೆ 4 ರೂ.ನಂತೆ ಈ ವರ್ಷ ಕೊರೊನಾಎರಡನೆ ಅಲೆ ಆರಂಭಕ್ಕೂ ಮೊದಲು ಮಮಾರಾಟಮಾಡಿದ್ದರು.

ಆದರೆ, ಈಗ ಕೇಳ್ಳೋರಿಲ್ಲವಾಗಿದೆ. ಇದೇಸಂಕಷ್ಟ ಉಳಿದ ಪುಷ್ಪಗಳಿಗೂ ಇವೆ ಎನ್ನುತ್ತಾರೆ ರೈತರು.ಒಂದು ಎಕರೆ ಗ್ಲಾಡಿಯೋಲಸ್‌ ಬೇಸಾಯಕ್ಕೆಮೂರು ಲಕ್ಷ ರೂ. ಖರ್ಚು ಬರುತ್ತದೆ. ಕಳೆದ ವರ್ಷಕೊರೊನಾ ಕಾರಣದಿಂದ ಬೆಳೆ ಮಾರಾಟ ಆಗದೇಸಂಪೂರ್ಣ ನಷ್ಟವಾಗಿತ್ತು. ಈ ವರ್ಷ ಅರ್ಧಕ್ಕಿಂತಕಡಿಮೆ ಬೆಳೆ ಮಾರಾಟ ಆಗಿದೆ.

ಕೃಷಿ ಕ್ಷೇತ್ರದಲ್ಲೇ ಅವುಉಳಿದಿದೆ. ಈ ವರ್ಷ ಅರ್ಧದಷ್ಟು ಅರ್ಧ ದರಕ್ಕೆಮಾರಿದ್ದೂ ಸಾಹಸವೇ ಎನ್ನುತ್ತಾರೆ. ಪ್ರಗತಿಪರ ರೈತಮಹಾಬಲೇಶ್ವರ ಹೆಗಡೆ ಸುರಗಿಕೊಪ್ಪ.ಭಟ್ಕಳ ಮಲ್ಲಿಗೆ, ಕಾಕಡ, ಜಿಲ್ಲೆಯ ವಿವಿಧೆಡೆಬೆಳೆಯುವ ಗುಲಾಬಿ ಇತರ ಪುಷೊ³àದ್ಯಮಕ್ಕೂ ಇದೇಏಟಾಗಿದೆ. ದೇವಸ್ಥಾನಗಳಿಗೂ ಭಕ್ತರ ಕೊರತೆ ಈಗಅವುಗಳ ಪ್ರವೇಶ ಕೂಡ ಇಲ್ಲದ ಕಾರಣದ ಹೂವುಗಳುಮಾರಾಟ ಕೂಡ ಆಗದೇ ಬಾಡುತ್ತಿವೆ.

ಮದುವೆಮುಂಜಿಗಳೂ ಇಲ್ಲ, ಅಲ್ಲಿ ಇಲ್ಲಿ ಆಗೋ ಮದುವೆಗೆಜನರ ನಿರ್ಬಂಧ ಕೂಡ ಇರುವದರಿಂದ ಪುಷ್ಪಕೇಳ್ಳೋರಿಲ್ಲ ಎನ್ನುತ್ತಾರೆ ವರ್ತಕರು.ಕಳೆದ ವರ್ಷ ಲಾಕ್‌ಡೌನ್‌ ಆದಾಗ ರಾಜ್ಯ ಸರಕಾರಪುಷ್ಪ ಬೆಳೆಗಾರರಿಗೆ ಆದ ನಷ್ಟಕ್ಕೆ ಪರಿಹಾರ ಘೋಷಣೆಮಾಡಿತ್ತು. ಆದರೆ, ಈ ಪರಿಹಾರ ಕೊಡಲು ಪಹಣಿಯಲ್ಲಿಪುಷ್ಪ ಬೇಸಾಯ ಎಂದು ದಾಖಲೆ ಇಲ್ಲ ಎಂದು ಕೊಟ್ಟೇಇಲ್ಲ. ಇದು ಹಿಂಗಾರಿ ಬೇಸಾಯ ಆಗಿರುವುದರಿಂದಇದನ್ನು ಪಹಣಿಯಲ್ಲಿ ಉಲ್ಲೇಖವಿರಲಿಲ್ಲ.

ಪರಿಹಾರಮಾತ್ರ ಗಗನ ಕುಸುಮವೇ ಆಗಿತ್ತು!ಈ ಮಧ್ಯೆ ಜಿಲ್ಲೆಯ ಪುಷ್ಪ ಸಮಸ್ಯೆ ಕುರಿತು ರಾಜ್ಯಮಟ್ಟದ ಅತ್ಯುತ್ತಮ ಪುಷ್ಪ ಕೃಷಿಕ ಪ್ರಶಸ್ತಿ ಪಡೆದಮಹಾಬಲೇಶ್ವರ ಹೆಗಡೆ ಅವರು ಸ್ಪೀಕರ್‌ ವಿಶ್ವೇಶ್ವರಹೆಗಡೆ ಕಾಗೇರಿ ಅವರಲ್ಲಿ ಹೂವಿನ ಬೆಳೆಗಾರರಸಮಸ್ಯೆ ಗಮನಕ್ಕೆ ತಂದಿದ್ದಾರೆ. ಈ ಬೆಳೆಯ ದಾಖಲೆಪಹಣಿಯಲ್ಲಿ ಸೇರದೇ ಇರುವುದು ಸರಕಾರದಿಂದನೆರವು ಪಡೆಯಲೂ ಸಾಧ್ಯವಾಗುತ್ತಿಲ್ಲ ಎಂದೂತಿಳಿಸಿದ್ದಾರೆ.

ಈ ಬಗ್ಗೆ ಏನು ಮಾಡಬಹುದು ಎಂದುಯೋಚಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಕಾಗೇರಿನೀಡಿದ್ದಾರೆ.ನೋಡಲು ಚೆಂದದ ಪುಷ್ಪಗಳಿಗೆ ಈಗ ಬೇಡಿಕೆ ಇಲ್ಲದೇಬಾಡುತ್ತಿರುವ ಕೃಷಿಕರಿಗೆ ಏಟಾಗಿದೆ. ಲಕ್ಷಾಂತರ ರೂ.ವ್ಯಯಿಸಿ ಹಾಕಿದ ಬಂಡವಾಳವೂ ವಾಪಸ್‌ ಬಾರದೇಇದ್ದಾಗ ಮಮ್ಮಲ ಮರಗುವುದೊಂದೇ ದಾರಿಯಾಗಿದೆ.ಮುಂದಿನ ವರ್ಷ ಈ ಕೃಷಿ ಮಾಡಬೇಕಾ ಬೇಡವಾಎಂಬ ಆಲೋಚನೆ ಮಾಡುವಷ್ಟು ಈ ಅತಂತ್ರತೆತಲೆಬಿಸಿ ಮಾಡಿಸಿದ್ದಂತೂ ಸುಳ್ಳಲ್ಲ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.