ಬೆಳೆಸಾಲ ಮನ್ನಾ: ಇನ್ನೂ ಬರಬೇಕಿದೆ 50 ಕೋಟಿ ಹಣ

Team Udayavani, May 11, 2020, 6:11 PM IST

ಬೆಳೆಸಾಲ ಮನ್ನಾ: ಇನ್ನೂ  ಬರಬೇಕಿದೆ 50 ಕೋಟಿ ಹಣ

ಸಾಂದರ್ಭಿಕ ಚಿತ್ರ

ಶಿರಸಿ: ಹಿಂದಿನ ಸರಕಾರ ಘೋಷಣೆ ಮಾಡಿದ್ದ ರೈತರ ಒಂದು ಲಕ್ಷ ರೂ. ಬೆಳೆಸಾಲ ಮನ್ನಾಕ್ಕೆ ಹಲವು ನಿಯಮಗಳು ಸೇರ್ಪಡೆಗೊಂಡು ರೈತರ ಖಾತೆಗೆ ಒಂದಿಷ್ಟು ಹಣ ಬಿಡುಗಡೆಯಾಗಿದೆ. ಆದರೂ ಇನ್ನೂಳಿದ ರೈತರ ಸಾಲ ಮನ್ನಾಕ್ಕೆ ಇನ್ನೂ 50 ಕೋಟಿ ರೂ. ಬರಬೇಕಿದೆ.

ಹಿಂದಿನ ಸಮ್ಮಿಶ್ರ ಸರಕಾರ ಬಜೆಟ್‌ನಲ್ಲಿ 2018-19ರಲ್ಲಿ ಘೋಷಣೆ ಮಾಡಿದ್ದ ಸಾಲ ಮನ್ನಾ ಹಣ ಒಂದಷ್ಟು ರೈತರಿಗೆ ಕಳೆದ ಡಿಸೆಂಬರ್‌ ಒಳಗೇ ಬಂದಿದ್ದರೆ, ಇನ್ನು ಕೆಲವಷ್ಟು ರೈತರಿಗೆ ಅನೇಕ ತಗಾದೆಯ ಕಾರಣ ಮಂಜೂರಾತಿ ಆಗಿರಲಿಲ್ಲ. ಕುಟುಂಬದಲ್ಲಿ ಐಟಿ ಪಾವತಿದಾರರು ಇದ್ದರೆ, ರೇಶನ್‌ ಕಾರ್ಡ್‌ನಲ್ಲಿ ಹೆಸರು ಸರಿ ಇರದೇ ಇದ್ದರೆ, ಸಾಲ ಪಡೆದವರು ಬೇರೆ ಇದ್ದರೂ ರೇಶನ್‌ ಕಾರ್ಡ್‌ ಒಂದೇ ಆಗಿದ್ದರೆ ಬೆಳೆಸಾಲ ಮನ್ನಾ ಆಗಿರಲಿಲ್ಲ. ಇದರಿಂದ ಅನೇಕ ಅರ್ಹ ರೈತರಿಗೂ ಅನ್ಯಾಯ ಆಗಿತ್ತು.

2019ರ ಸಾಲಮನ್ನಾ ಯೋಜನೆಯಡಿಯಲ್ಲಿ ಇಂತಹ ಅನೇಕ ತಾಂತ್ರಿಕ ಕಾರಣಗಳಿಂದ ಬಹಳಷ್ಟು ಜನ ರೈತರ ಸಾಲ ಮನ್ನಾ ಆಗದೆ ತೊಂದರೆ ಅನುಭವಿಸಿದ್ದಾರೆ ಎಂದು ಅನೇಕ ರೈತರು ಸರಕಾರದ ಗಮನಕ್ಕೆ ತಂದಿದ್ದರು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌ ಕೂಡ ಸಿಎಂ ಗಮನಕ್ಕೆ ತಂದಿದ್ದರು. ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶ್ರೀಕಾಂತ ಘೋಕ್ಲೃಕರ್‌ ಹಣ ಬಿಡುಗಡೆಗೆ ಆಗ್ರಹಿಸಿದ್ದರು.

ಕೆಡಿಸಿಸಿ ಬ್ಯಾಂಕ್‌ ಮೂಲಕ 86 ಸಾವಿರದಷ್ಟು ರೈತರು ಬೆಳೆಸಾಲ ಪಡೆದಿದ್ದರು. ಈ ಪೈಕಿ 77 ಸಾವಿರದಷ್ಟು ರೈತರಿಗೆ ಸಾಲಮನ್ನಾ ಲಕ್ಷ ರೂ. ತನಕ ಆಗಿತ್ತು. ಆದರೆ, ಐಟಿ ಪಾವತಿದಾರರು ರೈತನ ಕುಟುಂಬದಲ್ಲಿ ಇದ್ದರೆ, ರೇಶನ್‌ ಕಾರ್ಡ್‌ ಒಂದೇ ಆಗಿದ್ದರೆ ಇಂತಹ ಕಾರಣ ಇಟ್ಟು ಮಂಜೂರಾತಿ ಆಗದೇ ಇದ್ದವರಲ್ಲಿ ಇದೀಗ ಸರಕಾರ ಜಿಲ್ಲೆಗೆ 7 ಕೋಟಿ ರೂ. ಬಿಡುಗಡೆಗೊಳಿಸಿದೆ. 1100 ರೈತರಿಗೆ ಇದರಿಂದ ಅಂತೂ ಬಂತು ಎಂಬಂತಾದರೂ ಉಳಿದ ಎಂಟೊಂಬತ್ತು ಸಾವಿರ ರೈತರ ಖಾತೆಗೆ 50 ಕೋಟಿ ರೂ. ಹಣ ಬರಬೇಕಿದೆ.

ಈ ಮಧ್ಯೆ ಕೆಡಿಸಿಸಿ ಬ್ಯಾಂಕ್‌ಗೂ ಸಾಲ ಮನ್ನಾ ಹಣ ವಿಳಂಬವಾಗಿ ಬರುವುದರಿಂದ 11 ಕೋಟಿ ರೂ.ಗಳಷ್ಟು ಬಡ್ಡಿ ಹಾನಿಯೂ ಆಗಿದೆ. ರೈತರು ಕೋವಿಡ್‌ ಕಷ್ಟದಲ್ಲಿ ಇರುವ ಕಾರಣ ತಕ್ಷಣ ಇಂಥ ವಿಷಯದಲ್ಲಿ ಸ್ಪಂದಿಸಬೇಕು ಎಂಬ ಆಗ್ರಹ ಕೂಡ ವ್ಯಕ್ತವಾಗಿದೆ.

ಬಿಟ್ಟು ಹೋಗಿರುವ ರೈತರ ಸಾಲಮನ್ನಾ ಹಣವನ್ನೂ ಬಿಡುಗಡೆಗೊಳಿಸಬೇಕು. ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕೊಡಬೇಕು.  –ಜಿ.ಆರ್‌. ಹೆಗಡೆ ಬೆಳ್ಳೇಕೇರಿ, ಅಧ್ಯಕ್ಷರು, ಕಾನಗೋಡ ಗ್ರೂಪ್‌ ವಿವಿಧೋದ್ದೇಶಗಳ ಸಹಕಾರಿ ಸಂಘ ಯಡಳ್ಳಿ

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.