ವದಂತಿಗಳಿಗೆ ಕಿವಿಗೊಡಬೇಡಿ,ಕೋವಿಡ್ ವ್ಯಾಕ್ಸಿನ್ ಅತ್ಯಂತ ಸುರಕ್ಷಿತ : ಜಿಲ್ಲಾಧಿಕಾರಿ
Team Udayavani, Feb 12, 2021, 7:24 PM IST
ಕಾರವಾರ : ಇಂದು ಕ್ರಿಮ್ಸ ಕಾರವಾರಕ್ಕೆ ಭೇಟಿ ನೀಡಿ ಕೋವಿಡ್ ವ್ಯಾಕ್ಸಿನ್ ನೀಡುವ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ ಹರೀಶ್ ಕುಮಾರ್, ತಾವು ಕೂಡಾ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವ ಮೂಲಕ ಯಾವುದೇ ವದಂತಿಗಳಿಗೆ ಕಿವಿಗೊಡದೆ ವ್ಯಾಕ್ಸಿನ್ ಪಡೆಯಿರಿ ಎಂದು ಕರೆ ನೀಡಿದರು.
ಎಲ್ಲಾ ಮೂಂಚೂಣಿಯ ಕೋವಿಡ್ ವಾರಿಯರ್ಸಗಳು ಕೋವಿಡ್ ಲಸಿಕೆಯನ್ನು ಸ್ವಯಂ ಪ್ರೇರೇಪಿತರಾಗಿ ಪಡೆದುಕೊಳ್ಳಬೇಕೆಂದು ವಿನಂತಿಸಿದರು. ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಕೆಲ ಸಣ್ಣ ಪುಟ್ಟ ಸಾಮಾನ್ಯ ಅಡ್ಡ ಪರಿಣಾಮಗಳು ಕೆಲವರಲ್ಲಿ ಕಂಡು ಬಂದರೂ ಸಹ ಇದರಲ್ಲಿ ಯಾವುದೇ ಅಪಾಯವಿಲ್ಲ ಎಂದರು. ಲಸಿಕೆ ಪಡೆದುಕೊಳ್ಳಲು ಬಂದಿದ್ದ ಸಿಬ್ಬಂದಿಗಳಿಗೆ ಅವರು ಧೈರ್ಯ ತುಂಬಿದರು.
ಜಿಲ್ಲಾಧಿಕಾರಿಗಳ ಜೊತೆಗೆ , ಜಿಲ್ಲಾಧಿಕಾರಿಗಳ ಕಛೇರಿಯ ಸಿಬ್ಬಂದಿಗಳು ಕೂಡಾ ಲಸಿಕೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಕ್ರಿಮ್ಸ ನಿರ್ದೇಶಕರು, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಕ್ರಿಮ್ಸನ ಬಹುತೇಕ ವೈದ್ಯರು ಹಾಜರಿದ್ದರು.
ಇದನ್ನು ಓದಿ :ಉಳಿದ ಶಾಲಾ ತರಗತಿ ಆರಂಭ ಕುರಿತು ಫೆ. 16ರಂದು ಸಭೆ : ಸಚಿವ ಸುರೇಶ್ ಕುಮಾರ್
ಜಿಲ್ಲಾಧಿಕಾರಿಗಳು ಲಸಿಕೆ ಪಡೆದುಕೊಳ್ಳವದನ್ನು ನೋಡಿ ಪ್ರೇರೇಪಿತರಾದ ಕ್ರಿಮ್ಸನ ನಿರ್ದೇಶಕರಾದ ಡಾ.ಗಜಾನನ ನಾಯಕ , ಈ ಹಿಂದೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಕೂಡಾ ಲಸಿಕೆಯನ್ನು ಸ್ಥಳದಲ್ಲಿ ಪಡೆದುಕೊಂಡಿರುವದು ವಿಶೇಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಜೂನಿಯರ್ ಮೇಲೆ ರ್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು
ಹೊಸ ಸೇರ್ಪಡೆ
ಕ್ರಿಪ್ಟೋಕರೆನ್ಸಿಗಳನ್ನು ಮೌಲ್ಯಮಾಪನ ಮಾಡಲು ಸರ್ಕಾರ ಮುಕ್ತವಾಗಿದೆ : ಅನುರಾಗ್ ಠಾಕೂರ್
ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ: ದಾಸಯ್ಯನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪೂಜಾರಿ!
ಶಾಹೀದ್ ಅಫ್ರಿದಿ ಮಗಳ ಜೊತೆ ಪಾಕ್ ಬೌಲರ್ ಶಹೀನ್ ಅಫ್ರಿದಿ ವಿವಾಹ ನಿಶ್ಚಿತಾರ್ಥ
ಮತ ನೀಡದಿದ್ದರೆ ನೀರು, ವಿದ್ಯುತ್ ಏನೂ ಕೊಡಲ್ಲ.. ಮತದಾರರಿಗೆ ಸಚಿವರ ಬೆದರಿಕೆ
ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದ ಒಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ!