Udayavni Special

ಗ್ರಾಮಸ್ಥರಿಗೆ ತಪ್ಪಲಿದೆ ಕಚೇರಿ ಅಲೆದಾಟ!


Team Udayavani, Feb 21, 2021, 5:51 PM IST

ಗ್ರಾಮಸ್ಥರಿಗೆ ತಪ್ಪಲಿದೆ ಕಚೇರಿ ಅಲೆದಾಟ!

ಭಟ್ಕಳ: ತಾಲೂಕಿನ ಹಿಂದುಳಿದ ಪ್ರದೇಶ ಹಾಡವಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಪ್ರಥಮ ಕಾರ್ಯಕ್ರಮಕ್ಕೆ ವೃದ್ಧೆಯೊಬ್ಬರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಹಲಿನ್‌, ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಎಂಬ ಗ್ರಾಮ ವಾಸ್ತವ್ಯಕಾರ್ಯಕ್ರಮ ಉತ್ತಮವಾದುದಾಗಿದೆ. ಜನತೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾಡಳಿತ, ಕಂದಾಯ ಇಲಾಖೆ, ಅಧಿಕಾರಿ ವರ್ಗ ಸಾರ್ವಜನಿಕರಿಂದತುಂಬಾ ದೂರದಲ್ಲಿದೆ ಎಂಬ ಮನೋಭಾವಜನಸಾಮಾನ್ಯರಲ್ಲಿದೆ. ಅದೂ ವಿಶೇಷವಾಗಿಈ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕಾರದಯಾವುದಾದರೂ ಯೋಜನೆಯ ಸೌಲಭ್ಯಸಿಗಬೇಕಾದರೆ ಜಿಲ್ಲಾ, ತಾಲೂಕು ಕೇಂದ್ರಕ್ಕೆಹೋಗಬೇಕಾದ ಪರಿಸ್ಥಿತಿಯಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಹಾಡವಳ್ಳಿಯಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರಲು ನೂರಾರುರೂ. ಖರ್ಚು ಮಾಡಿಕೊಂಡು ಸುಮಾರುನಾಲ್ಕು ಗಂಟೆ ಪ್ರಯಾಣ ಬೆಳೆಸಬೇಕಿದೆ. ಅದು ಸರಿಯಾಗಿ ಬಸ್ಸಿನ ವ್ಯವಸ್ಥೆ ಇರುವುದಿಲ್ಲ.ಇದೆಲ್ಲದರ ಮಧ್ಯೆ ಅವತ್ತಿನ ಖರ್ಚಿನ ಜೊತೆಗೆದುಡಿಮೆಯೂ ಹಾಳಾಗುತ್ತದೆ ಎಂದ ಅವರು,ಸರಕಾರಿ ಕಚೇರಿಗೆ ಜನರ ಅಲೆದಾಟ ತಪ್ಪಿಸಲು ಸರಕಾರ ಇಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ತಿಂಗಳ ಮೂರನೇ ಶನಿವಾರ ಪೂರ್ಣದಿನ ಗ್ರಾಮದಲ್ಲಿದ್ದು, ಅಹವಾಲು ಕೇಳಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿಪ್ರಯತ್ನಿಸಲು ಇದೊಂದು ಅವಕಾಶವಾಗಿದೆ ಎಂದರು.

ಜನನ, ಮರಣ, ಜಾತಿ, ಆದಾಯ ಪ್ರಮಾಣ ಪತ್ರಗಳು ಸಿಗಬೇಕಾದರೆ ಜನಸಾಮಾನ್ಯರು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆದ್ದರಿಂದ ಈ ವ್ಯವಸ್ಥೆಯನ್ನು ಇನ್ನಷ್ಟು ಸರಳಿಕರಣಗೊಳಿಸಲು ಕಂದಾಯ ಇಲಾಖೆ ಮುಂದಾಗಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಯಾವುದೇಅರ್ಜಿ ಹಾಕದೇ ತಂತ್ರಜ್ಞಾನದ ಮೂಲಕವೇಜನರಿಗೆ ಸರಕಾರಿ ಸೌಲಭ್ಯಗಳು ನೇರವಾಗಿದೊರೆಯುವಂತಹ ಕಾರ್ಯಕ್ರಮಗಳನ್ನ ಕಂದಾಯ ಇಲಾಖೆ ರೂಪಿಸುತ್ತಿದೆ. ಇದರಿಂದ ಸಾರ್ವಜನಿಕರ ಸರಕಾರಿ ಕಚೇರಿಗಳ ಅಲೆದಾಟ ತಪ್ಪಲಿದೆ ಎಂದು ತಿಳಿಸಿದರು.

ಈ ಜಿಲ್ಲೆಗೆ ಆಗಮಿಸಿದ ಬಳಿಕಪ್ರಥಮ ಕಾರ್ಯಕ್ರಮ ಇದಾಗಿದ್ದು, ಹಾಡವಳ್ಳಿಯಂತಹ ಹಳ್ಳಿಗೆ ಬಂದಿರುವದುಖುಷಿ ತಂದಿದೆ. ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳು ಪ್ರಾಮಾಣಿಕಪ್ರಯತ್ನ ಮಾಡಬೇಕು ಎಂದರು.ತಹಶೀಲ್ದಾರ ರವಿಚಂದ್ರ ಎಸ್‌. ಮಾತನಾಡಿ, ವಿನೂತನ ಕಾರ್ಯಕ್ರಮ ಇದಾಗಿದ್ದು,ಸರಕಾರ ಕಂದಾಯ ಇಲಾಖೆಯಡಿರೂಪಿಸಿರುವ ವಿವಿಧ ಸಾಮಾಜಿಕ ಭದ್ರತಾಯೋಜನೆಗಳನ್ನ ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೆತಲುಪಿಸುವುದು ಇದರ ಉದ್ದೇಶವಾಗಿದೆ. ಈಉದ್ದೇಶದ ಈಡೇರಿಕೆಗೆ ಹಾಗೂ ವ್ಯಕ್ತಿಯ ಮನೆಬಾಗಿಲಿಗೆ ಸರಕಾರ ರೂಪಿಸಿದ ಯೋಜನೆಗಳನ್ನ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿ ಗ್ರಾಮದ ಜನರು ಗ್ರಾಮ ವಾಸ್ತವ್ಯದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಗ್ರಾಮಸ್ಥರು ವಿವಿಧ ಸಮಸ್ಯೆಗಳನ್ನು ಒಳಗೊಂಡ ಅಹವಾಲುಗಳನ್ನುಜಿಲ್ಲಾಧಿಕಾರಿಗಳಿಗೆ ನೀಡಿದರು. ಭಟ್ಕಳತಾಲೂಕಿನ ಸಹಾಯಕ ಆಯುಕ್ತ ಸಾಜಿದ್‌ ಅಹಮದ್‌ ಮುಲ್ಲಾ ಎಸಿಎಫ್‌ ಸುದರ್ಶನ,ತಾಪಂ ಇಒ ಪ್ರಭಾಕರ ಚಿಕ್ಕನಮನೆ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿಜನರು ಕಿಕ್ಕಿರಿದು ಸೇರಿದ್ದರು.

ಸಂಧ್ಯಾ ಸುರಕ್ಷಾ, ಅಂಗವಿಕಲ ವೇತನ, ವಿಧವಾ ವೇತನ, ಪಹಣಿ ಪತ್ರಿಕೆಯಲ್ಲಿನದೋಷಗಳು, ರಸ್ತೆ, ಮನೆ, ಸೇತುವೆ, ಅತಿಕ್ರಮಣ ಸಕ್ರಮ ಸೇರಿದಂತೆ ಹಲವು

ಸಮಸ್ಯೆಗಳ ಕುರಿತು ಜನರು ಜಿಲ್ಲಾಧಿಕಾರಿಗಳಿಗೆಅರ್ಜಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳು ಅರ್ಜಿಸ್ವೀಕರಿಸಿ ದಾಖಲೆ ಪರಿಶೀಲಿಸಿ ಕೆಲವೊಂದಕ್ಕೆ ಸ್ಥಳದಲ್ಲೇ ಮಂಜೂರಾತಿ ನೀಡಿದರು. ಗ್ರಾಮವಾಸ್ತವ್ಯದ ವೇಳೆ ಅಂಗನವಾಡಿಯಲ್ಲೇಊಟ ಮಾಡಿದ ಜಿಲ್ಲಾಧಿಕಾರಿ ಮತ್ತುಅಧಿಕಾರಿಗಳ ತಂಡ ನಂತರ ಅಂಗನವಾಡಿ,ಶಾಲೆ ವೀಕ್ಷಿಸಿದ್ದಲ್ಲದೇ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿನೀಡಿದರು. ಸಾರ್ವಜನಿಕರಿಗಾಗಿ ಆರೋಗ್ಯಶಿಬಿರವನ್ನೂ ಏರ್ಪಡಿಸಲಾಗಿತ್ತು. ಗ್ರಾಮದಲ್ಲಿತ್ಯಾಜ್ಯ ವಿಲೇವಾರಿ ಘಟಕ, ಸ್ಮಶಾನ ಸ್ಥಾಪನೆಯ ಬಗ್ಗೆ ಚರ್ಚಿಸಲಾಯಿತು.

ಟಾಪ್ ನ್ಯೂಸ್

Mandya Temple

ಕಾಲಯಮನ ಗರ್ಭಕ್ಕೆ ಸೇರುತ್ತಿರುವ ಜನಾರ್ದನ ದೇಗುಲ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

Untitled-2

ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳ

devegowda talk about party member

ಅಸ್ನೋಟಿಕರ್‌, ಜಿ.ಟಿ. ಜೆಡಿಎಸ್‌ ಬಿಡುವುದಿಲ್ಲ: ದೇವೇಗೌಡ

jio

ಕಡಿಮೆ ದರದಲ್ಲಿ 4G ಮೊಬೈಲ್,ಎರಡು ವರ್ಷ ಉಚಿತ ಕರೆ … ‘ಜಿಯೋ’ ಹೊಸ ಆಫರ್ ಘೋಷಣೆ

nalin kumar katil talk about HK patil

ಎಚ್.ಕೆ.ಪಾಟೀಲರಿಂದ ಹತಾಶೆಯ ಅಪ್ರಬುದ್ಧ ಹೇಳಿಕೆ:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್

programme held at bangalore

ಮಾರ್ಚ್‌ 2ರಂದು ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಲೋಕಾರ್ಪಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ulavi Basavanna Jatres

ಉಳವಿ ಚೆನ್ನಬಸವೇಶ್ವರ ಮಹಾರಥೋತ್ಸವ ನಾಳೆ

Karwar APMC

ಸಂಕಷ್ಟದಲ್ಲಿವೆ ಎಪಿಎಂಸಿಗಳು

protest for Sirasi district

ಶಿರಸಿ ಜಿಲ್ಲೆಗೆ ಆಗ್ರಹಿಸಿ ಸ್ವಯಂ ಪ್ರೇರಿತ ಬಂದ್‌

Verli art

ವರ್ಲಿ ಕಲೆಯ ಮೋಡಿಗಾರ ರಾಮಚಂದ್ರ ಕಲಾಲ

ಆ್ಯಪ್‌ನಲ್ಲಿ ಅಡಕೆ ಬದಲು ಬಾಳೆ!1

ಆ್ಯಪ್‌ನಲ್ಲಿ ಅಡಕೆ ಬದಲು ಬಾಳೆ!

MUST WATCH

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

udayavani youtube

ಪದೇ ಪದೇ Tea – Coffee ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು?

udayavani youtube

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

ಹೊಸ ಸೇರ್ಪಡೆ

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ

Mandya Temple

ಕಾಲಯಮನ ಗರ್ಭಕ್ಕೆ ಸೇರುತ್ತಿರುವ ಜನಾರ್ದನ ದೇಗುಲ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

HD Revanna

ಮಾ.1ರಿಂದ ಹಾಲು ಖರೀದಿ ದರ 3 ರೂ. ಹೆಚ್ಚಳ

passion

ಫ್ಯಾಷನ್‌ ಡಿಸೈನ್‌ ಸ್ಪರ್ಧೆಗೆ ಆಡಿಷನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.