ಶಿರಸಿಯಲ್ಲಿ ಯುವಕನ ಮೃತದೇಹ ಪತ್ತೆ : ಕೊಲೆ ಶಂಕೆ

Team Udayavani, Apr 24, 2019, 12:38 PM IST

ಶಿರಸಿ: ಇಲ್ಲಿನ ಕಸ್ತೂರ್ಬಾ ನಗರದಲ್ಲಿ ಯುವಕನ ಮೃತದೇಹವೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಅಸ್ಲಂ ಎಂದು ಗುರುತಿಸಲಾಗಿದೆ.

ನಗರಕ್ಕೆ ಸನಿಹವಿರುವ ಬಯಲುಪ್ರದೇಶದಲ್ಲಿ ಮೈಮೇಲೆ ಗಾಯದ ಗುರುತುಗಳಿರುವ ಸ್ಥಿತಿಯಲ್ಲಿ ಅಸ್ಲಂ ದೇಹ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುವಂತಿದೆ.

ಇದೊಂದು ಕೊಲೆಯಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದೀಗ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ