ಸರ್ವೀಸ್‌ ರಸ್ತೆ ನಿರ್ಮಿಸಲು ಆಗ್ರಹ

Team Udayavani, Nov 22, 2019, 1:20 PM IST

ಭಟ್ಕಳ: ತಾಲೂಕಿನ ಸರ್ಪನಕಟ್ಟೆಯಲ್ಲಿ ಸರಿಯಾದ ಸರ್ವಿಸ್‌ರೋಡ್‌ ಹಾಗೂ ಯೂ ಟರ್ನ್ ನಿರ್ಮಿಸದೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುತ್ತಿರುವ ಕಾರಣ ಸ್ಥಳೀಯ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಐಆರ್‌ಬಿ ಕಂಪನಿ ಹಾಗೂ ಹೆದ್ದಾರಿ ಪ್ರಾಧಿಕಾರ ನಡೆಸುತ್ತಿರುವ ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಸರ್ಪನಕಟ್ಟೆಯಲ್ಲಿ ಸರ್ವೀಸ್‌ ರೋಡ್‌ ಹಾಗೂ ಸೋಡಿಗದ್ದೆ ಕ್ರಾಸ್‌

ಹತ್ತಿರ ಮತ್ತು ಬೇಣಂದೂರು ರಸ್ತೆಗೆ ತಿರುಗುವಲ್ಲಿ ಯೂ ಟರ್ನ್ ನಿರ್ಮಾಣ ಮಾಡದೆ ರಸ್ತೆ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಐಆರ್‌ಬಿ ಮತ್ತು ಹೆದ್ದಾರಿ ಪ್ರಾಧಿಕಾರದ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದರು.

ಎಎಸ್‌ಪಿ ಹಾಗೂ ಸಿಪಿಐ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಶೀಘ್ರವೇ ಬಗೆ ಹರಿಸಲಾಗುವುದು. ಸಾರ್ವಜನಿಕರು ಶಾಂತ ರೀತಿಯಲ್ಲಿ ಇರುವಂತೆ ಕೋರಿದ್ದರಿಂದ ಪ್ರತಿಭನೆ ಕೈಬಿಡಲಾಯಿತು. ಸ್ಥಳೀಯ ತಾಪಂ ಸದಸ್ಯ ಹನುಮಂತ ನಾಯ್ಕ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಕಂಪನಿ ರಸ್ತೆ ಅಗಲಿಕರಣ ಸಂದರ್ಭದಲ್ಲಿ ಸರಿಯಾದ ಸರ್ವಿಸ್‌ ರಸ್ತೆ ಹಾಗೂ ಯೂ ಟರ್ನ್ ಸೌಲಭ್ಯ ಒದಗಿಸಿ ಕೊಟ್ಟಿರುವುದಿಲ್ಲ. ಇದರಿಂದ ನಾವು ಪ್ರತಿಭಟನೆಗೆ ಮುಂದಾಗಿದ್ದು ಕೈಬಿಡಲಾಗಿದೆ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ