ಉದ್ಯೋಗ ಖಾತ್ರಿಯಡಿ ಶಾಲಾ ಸಮಗ್ರ ಅಭಿವೃದ್ಧಿ

ಜಿಲ್ಲೆಯ ಗ್ರಾಮೀಣ ಭಾಗದ ವಿವಿಧ ಸರಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯ ಆರಂಭ: ದೇವರಾಜ ಹಿತ್ತಲಕೊಪ್ಪ

Team Udayavani, May 10, 2022, 5:00 PM IST

21

ಕಾರವಾರ/ಶಿರಸಿ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಶಿರಸಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ ಹಿತ್ತಲಕೊಪ್ಪ ಹೇಳಿದರು.

ಶಿರಸಿ ತಾಲೂಕಿನಲ್ಲಿ ಉದ್ಯೋಗ ಖಾತ್ರಿಯಡಿ ಕೈಗೊಂಡ ಶಾಲಾ ಅಭಿವೃದ್ಧಿ ಕಾರ್ಯ ವೀಕ್ಷಿಸಿ ಅವರು ಮಾಹಿತಿ ನೀಡಿದರು. ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ ಶಾಲಾ ಶೌಚಾಲಯ, ಕಾಂಪೌಂಡ್‌, ಭೋಜನಾಲಯ, ಅಡುಗೆ ಕೋಣೆ, ಆಟದ ಮೈದಾನ ಇತ್ಯಾದಿ ಕಾಮಗಾರಿ ಕೈಗೊಳ್ಳಲು ಅವಕಾಶ ಇದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶದ ಜೊತೆಗೆ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಕೈಗೊಂಡು ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಮಾರ್ಪಡಿಸುವ ಗುರಿ ಇದೆ. ಶಾಲಾ ಸಮಗ್ರ ಅಭಿವೃದ್ಧಿಯಡಿ ಶಾಲಾ ಕಾಂಪೌಂಡ್‌ ನಿರ್ಮಾಣಕ್ಕೆ 3,20,000 ರೂ. ಅಂದಾಜು ವೆಚ್ಚ, ಶಾಲಾ ಪಿಂಕ್‌ ಶೌಚಾಲಯಕ್ಕೆ 6,00,000 ರೂ, ಶಾಲಾ ಶೌಚಾಲಯಕ್ಕೆ 5,00,000 ರೂ, ಭೋಜನಾಲಯಕ್ಕೆ 13,00,000 ರೂ, ಅಡುಗೆ ಕೋಣೆಗೆ 6,20,000 ರೂ, ಬಾಸ್ಕೆಟ್‌ ಬಾಲ್‌ ಮೈದಾನಕ್ಕೆ 9,50,000 ರೂ, ಸಮಗ್ರ ಅಭಿವೃದ್ಧಿಯ ಒಟ್ಟು ಮೊತ್ತ 42,90,000 ರೂ. ವ್ಯಯಿಸಲು ಅವಕಾಶವಿದೆ ಎಂದರು.

ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಶಾಲಾ ಸಮಗ್ರ ಅಭಿವೃದ್ಧಿಯ ಆಶಯದಡಿ ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಶಿರಸಿ ತಾಲೂಕಿನಲ್ಲಿ ಶಾಲೆಗೆ ಸಂಬಂಧಿಸಿದಂತೆ 25 ಕಾಮಗಾರಿಗಳು ಕ್ರಿಯಾಯೋಜನೆಯಲ್ಲಿ ಮಂಜೂರಾಗಿದೆ. 2021-22 ರಲ್ಲಿ ಕೆಲವು ಶಾಲೆಗಳಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿಯೂ ಕಾಮಗಾರಿ ಕೈಗೊಳ್ಳುವ ಗುರಿಯಿದೆ ಎಂದು ತಿಳಿಸಿದರು.

ನಮ್ಮ ಶಾಲೆಯಲ್ಲಿ ಬಿಸಿಯೂಟಕ್ಕಾಗಿ ಕೈತೋಟ ಮಾಡಿ ಸುತ್ತಲೂ ಮುಳ್ಳಿನ ಬೇಲಿ ಹಾಕಿದ್ದರೂ ಪ್ರಯೋಜನವಾಗಿರಲಿಲ್ಲ. ಜೊತೆಗೆ ಒಂದೇ ಶೌಚಾಲಯವಿದ್ದ ಕಾರಣ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಇನ್ನು ಮಳೆಗಾಲದಲ್ಲಿ ಶಾಲಾ ಆಟದ ಮೈದಾನದ ಪಾಡು ಹೇಳತೀರದು. ಹೀಗಾಗಿ ಉದ್ಯೋಗ ಖಾತ್ರಿಯಲ್ಲಿ ಸುಸಜ್ಜಿತ ಕಾಂಪೌಂಡ್‌, ಶೌಚಾಲಯ ಜೊತೆಗೆ ಬಾಸ್ಕೆಟ್‌ ಬಾಲ್‌ ಮೈದಾನ ಕೂಡಾ ನಿರ್ಮಿಸುತ್ತಿರುವುದು ತುಂಬಾ ಖುಷಿ ಸಂಗತಿಯಾಗಿದೆ ಎಂದು ಜಡ್ಡಿಗದ್ದೆ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಆರ್‌. ಹೆಗಡೆ ಹೇಳಿದರು.

ಶಾಲಾ ಸಮಗ್ರ ಅಭಿವೃದ್ಧಿ ಯೋಜನೆಯಡಿ ಶಿರಸಿ ತಾಲೂಕಿನಲ್ಲಿ 4 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು ಕೊಡ್ನಗದ್ದೆ, ಇಸಳೂರು, ಬಂಡಲ, ಹುತ್ತಗಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಗಳ ಅಭಿವೃದ್ಧàಗಾಗಿ ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ತಾ.ಪಂ. ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಇದ್ದರು.

ಟಾಪ್ ನ್ಯೂಸ್

1-wd

ಲಂಡನ್: ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ ಸಚಿವ ಡಾ.ಅಶ್ವತ್ಥನಾರಾಯಣ್

ಪರಿಷತ್‌ ಚುನಾವಣೆ: ಜೆಡಿಎಸ್‌ ಅಭ್ಯರ್ಥಿ ನಾಳೆ ಅಂತಿಮ

ಪರಿಷತ್‌ ಚುನಾವಣೆ: ಜೆಡಿಎಸ್‌ ಅಭ್ಯರ್ಥಿ ನಾಳೆ ಅಂತಿಮ

1-adasdsa

ವಿಜಯಪುರ : ಬಿಗಿ ಭದ್ರತೆಯಲ್ಲಿ ಶಿಕ್ಷಕರ ಜಿಪಿಎಸ್‌ಟಿ ಪರೀಕ್ಷೆ

1–f-fsfsdf

ಅಸ್ಪೃಶ್ಯತೆ ಬೇಡ ಎಂದು ದಲಿತ ಸ್ವಾಮೀಜಿ ಎಂಜಲು ತಿಂದ ಜಮೀರ್ ಅಹಮದ್ ಖಾನ್

23marrige

ಮದುವೆಗೆ ಬಂದು ಅಕ್ಷತೆ ಹಾಕಿದವರಿಗೆ ಪುಸ್ತಕ-ಸಸಿ ಕೊಟ್ಟ ಮದುಮಗ

ಅಸ್ಸಾಂನಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ರಕ್ಷಣಾ ತಂಡ; ಪ್ರವಾಹಕ್ಕೆ ಮತ್ತೆ 4 ಬಲಿ

ಅಸ್ಸಾಂನಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ರಕ್ಷಣಾ ತಂಡ; ಪ್ರವಾಹಕ್ಕೆ ಮತ್ತೆ 4 ಬಲಿ

PM Modi

ಕ್ವಾಡ್ ಶೃಂಗಸಭೆ ಅಭಿಪ್ರಾಯಗಳ ವಿನಿಮಯಕ್ಕೆ ಉತ್ತಮ ಅವಕಾಶ: ಪ್ರಧಾನಿ ಮೋದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

ನಿಯಮ ಬಾಹಿರ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರ ವಿರೋಧ

6

ದಲ್ಲಾಳಿ ಮುಕ್ತ ಮಾರುಕಟ್ಟೆ ಒದಗಿಸಲು ಯತ್ನ

5

ಕಷ್ಟದಲ್ಲಿದ್ದವರಿಗೆ ನೆರವಾಗುವ ಕೆಲಸವಾಗಲಿ

4

ಮಾಜಾಳಿಯಲ್ಲಿ ಅಪರೂಪದ ಏಡಿ ಪತ್ತೆ

ಫ್ರಾನ್ಸ್ ನಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಶಿರಸಿಯ ಪ್ರೇರಣಾ

ಫ್ರಾನ್ಸ್ ನಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಶಿರಸಿಯ ಪ್ರೇರಣಾ

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

1-wd

ಲಂಡನ್: ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ ಸಚಿವ ಡಾ.ಅಶ್ವತ್ಥನಾರಾಯಣ್

1-as-dsad

ನಂಜನಗೂಡು: ಪೌಲ್ಟ್ರಿ ಫಾರಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆ

ಪರಿಷತ್‌ ಚುನಾವಣೆ: ಜೆಡಿಎಸ್‌ ಅಭ್ಯರ್ಥಿ ನಾಳೆ ಅಂತಿಮ

ಪರಿಷತ್‌ ಚುನಾವಣೆ: ಜೆಡಿಎಸ್‌ ಅಭ್ಯರ್ಥಿ ನಾಳೆ ಅಂತಿಮ

1-adasdsa

ವಿಜಯಪುರ : ಬಿಗಿ ಭದ್ರತೆಯಲ್ಲಿ ಶಿಕ್ಷಕರ ಜಿಪಿಎಸ್‌ಟಿ ಪರೀಕ್ಷೆ

1–f-fsfsdf

ಅಸ್ಪೃಶ್ಯತೆ ಬೇಡ ಎಂದು ದಲಿತ ಸ್ವಾಮೀಜಿ ಎಂಜಲು ತಿಂದ ಜಮೀರ್ ಅಹಮದ್ ಖಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.