54 ಫಲಾನುಭವಿಗಳಿಗೆ 12 ಲಕ್ಷ ಸಿಎಂ ಪರಿಹಾರ ನಿಧಿ ವಿತರಣೆ

Team Udayavani, Dec 15, 2019, 5:13 PM IST

ಕುಮಟಾ: ಅರ್ಹ 38 ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ 12 ಲಕ್ಷ ರೂ.ಗಳ ಚೆಕ್‌ ಗಳನ್ನು ಶಾಸಕ ದಿನಕರ ಶೆಟ್ಟಿ ತಹಶೀಲ್ದಾರ್‌ ಕಚೇರಿ ಆವಾರದಲ್ಲಿ ವಿತರಿಸಿದರು. ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿ ಯ ಚೆಕ್‌ಗಳನ್ನು ವಿತರಿಸಲಾಗಿದೆ. ಒಟ್ಟೂ 54 ಫಲಾನುಭವಿಗಳನ್ನು ಈಗ ಆಯ್ಕೆ ಮಾಡಲಾಗಿದ್ದು, ಇನ್ನೂ 30 ರಿಂದ40 ಫಲಾನುಭವಿಗಳಿಗೆ ಚೆಕ್‌ಗಳನ್ನು ವಿತರಿಸಬೇಕಾಗಿದ್ದು, 1 ವಾರದೊಳಗಡೆ ಹಸ್ತಾಂತರಿಸಲಾಗುವುದು ಎಂದರು.

ಪ್ರಸಕ್ತ ಸಾಲಿನಲ್ಲಿ ಭೀಕರವಾಗಿ ಸುರಿದ ಮಳೆಯಿಂದ ಮೀನುಗಾರರ ಬಲೆ, ದೋಣಿಗಳು ಸೇರಿದಂತೆ ಇನ್ನಿತರ ಪರಿಕರಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಅವುಗಳಿಗೂ ಯೋಗ್ಯ ಪರಿಹಾರ ಧನವನ್ನು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಂಜೂರಿ ಮಾಡಿದೆ. ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಮೀನುಗಾರರ ಯಾದಿ ಸಿದ್ಧಪಡಿಸಲು ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದ್ದು, ಈ ಪರಿಹಾರ ಮೊತ್ತವನ್ನೂ ಸಹ ಒಂದು ವಾರದೊಳಗೆ ವಿತರಿಸಲು ಪ್ರಯತ್ನಿಸುತ್ತೇನೆ ಎಂದರು.

ಕ್ಷೇತ್ರಾದ್ಯಂತ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಹದಗೆಟ್ಟ ರಸ್ತೆಯ ಮರು ದುರಸ್ತಿ ಕಾರ್ಯ ಪ್ರಾರಂಭವಾಗಿದ್ದು, ಆದಷ್ಟು ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು. ಉಪ ವಿಭಾಗಾಧಿಕಾರಿ ಎಂ.ಅಜಿತ್‌, ತಹಶೀಲ್ದಾರ್‌ ಮೇಘರಾಜ ನಾಯ್ಕ, ತಾ.ಪಂ ಇಒ ಸಿ.ಟಿ. ನಾಯ್ಕ, ಜಿ.ಪಂ ಸದಸ್ಯ ಗಜಾನನ ಪೈ, ತಾ.ಪಂ ಸದಸ್ಯ ಮಹೇಶ ಶೆಟ್ಟಿ, ಜಗನ್ನಾಥ ನಾಯ್ಕ, ಪುರಸಭಾ ಸದಸ್ಯರಾದ ಸಂತೋಷ ನಾಯ್ಕ, ಮೋಹಿನಿ ಗೌಡ, ಶೈಲಾ ಗೌಡ, ಸೂರ್ಯಕಾಂತ ಗೌಡ, ಮಹೇಶ ನಾಯ್ಕ, ಪಲ್ಲವಿ ಮಡಿವಾಳ, ಸಂತೇಗುಳಿ ಗ್ರಾ.ಪಂ ಸದಸ್ಯ ವಿನಾಯಕ ಭಟ್ಟ, ಬಾಡ ಗ್ರಾ.ಪಂ ಸದಸ್ಯ ಹರೀಶ ನಾಯ್ಕ, ಬಿಜೆಪಿ ಮಂಡಳಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪಕ್ಷದ ಪ್ರಮುಖರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕುಮಟಾ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆಗೊಳಿಸಿರುವ ತಾಲೂಕಿನ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವ ಕುರಿತು ಮತ್ತು ಅರಣ್ಯ ಹಕ್ಕು ಕಾಯಿದೆ...

  • ಶಿರಸಿ: ಐನೂರು ವರ್ಷಗಳ ಇತಿಹಾಸವುಳ್ಳ, ಕರೂರು ಅರಸ ಶಿವಪ್ಪ ನಾಯಕನಿಂದ ಪ್ರತಿಷ್ಠಾಪಿತವಾಗಿದೆ ಎಂಬ ಐತಿಹ್ಯವುಳ್ಳ ತಾಲೂಕಿನ ತುಡಗುಣಿ ಸಿದ್ಧಿವಿನಾಯಕ ದೇವಸ್ಥಾನದ...

  • ಸಿದ್ದಾಪುರ: ರಾಜ್ಯದಲ್ಲಿ ಸಂಭವಿಸಿದ ಜಲಪ್ರಳಯ ಶತಮಾನದಲ್ಲೊಮ್ಮೆ ಸಂಭವಿಸುವಂಥದ್ದು. ಅದರಿಂದ ಆದ ಅನಾಹುತಗಳನ್ನು ಎದುರಿಸಲು ರಾಜ್ಯ ಸರಕಾರ ಸವಾಲನ್ನೇ ಎದುರಿಸಬೇಕಾಗಿ...

  • ಹೊನ್ನಾವರ: ಮಂಗನ ಕಾಯಿಲೆ ಮತ್ತೆ ಆರಂಭವಾಗುವ ಲಕ್ಷಣ ಕಾಣಿಸಿಕೊಂಡಿದ್ದು 2020ರ ಜನೆವರಿಯಲ್ಲಿ ಸಿದ್ಧಾಪುರ ಹೊನ್ನೇಪಟಕಿ ಬಳಿ 6 ಮಂಗಗಳು ಮೃತಪಟ್ಟಿದ್ದು ಒಂದಕ್ಕೆ...

  • ಶಿರಸಿ: ತಾಲೂಕಿನ ಕೋಳಿಗಾರನಲ್ಲಿ ಭಾನುವಾರ ನಡೆದ ರಾಸು ಪ್ರದರ್ಶನ ಹಾಗೂ ಬರಡು ದನ ಚಿಕಿತ್ಸಾ ಶಿಬಿರ ಜನ ಮೆಚ್ಚುಗೆಗೆ ಪಾತ್ರವಾಯಿತು. ಕೆ.ಎಂ.ಎಫ್‌ ನಿರ್ದೇಶಕ...

ಹೊಸ ಸೇರ್ಪಡೆ