10 ಸಾವಿರ ಮೀನುಗಾರರಿಗೆ ಗುರುತಿನ ಚೀಟಿ ವಿತರಣೆ

Team Udayavani, Oct 6, 2019, 2:25 PM IST

ಕಾರವಾರ: ಸ್ಥಳೀಯ ಮೀನುಗಾರಿಕೆ ಬೋಟುಗಳಲ್ಲಿ ಕೆಲಸ ಮಾಡುವ ಸುಮಾರು 10 ಸಾವಿರ ಹೊರ ರಾಜ್ಯದ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್‌ ಕೆ. ತಿಳಿಸಿದ್ದಾರೆ.

ಮೀನುಗಾರಿಕೆ ಕಾಲದಲ್ಲಿ ಜಿಲ್ಲೆಯ ಕಾರವಾರ, ಅಮದಳ್ಳಿ ಮುದಗಾ,ಬೇಲೇಕೇರಿ, ಕುಮಟಾ, ಹೊನ್ನಾವರ, ಭಟ್ಕಳ ಬಂದರುಗಳಲ್ಲಿ ಮೀನುಗಾರಿಕೆ ನಡೆಸುವ ಸ್ಥಳೀಯ ಬೋಟುಗಳಲ್ಲಿ ಕೆಲಸ ಮಾಡಲು ಒರಿಸ್ಸಾ, ಜಾರ್ಖಂಡ, ಬಿಹಾರ ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಾರೆ. ಅವರ ಸುರಕ್ಷತೆ ಹಾಗೂ ಯಾವುದೇ ಉಲ್ಲಂಘನಾತ್ಮಕ ಚಟುವಟಿಕೆಯಲ್ಲಿ ತೊಡಗಬಾರದೆಂಬ ಉದ್ದೇಶದಿಂದ ಮೀನುಗಾರಿಕೆ ಇಲಾಖೆಯ ಮೂಲಕ ಗುರುತಿನ ಚೀಟಿ ವಿತರಿಸುವ ಯೋಜನೆ ರೂಪಿಸಿದ್ದು ಸದ್ಯ 10 ಸಾವಿರ ಜನರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜ್‌ ನೇತೃತ್ವದಲ್ಲಿ ಈಗಾಗಲೇ ಮೀನುಗಾರಿಕೆ ಬೋಟ್‌ಗಳಿಗೆ ಪರವಾನಗಿ ನೀಡುವ ಹಾಗೂ ಪರವಾನಿಗೆ ಇಲ್ಲದ ಬೋಟುಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ ಎಂದರು. ಮೀನುಗಾರಿಕೆ ಉಪ ನಿರ್ದೇಶಕ ಪಿ.ನಾಗರಾಜ್‌, ಮೀನುಗಾರಿಕೆಗೆ ತೆರಳುವ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಆದರೆ ಈವರೆಗೆ ಬೋಟ್‌ ಮಾಲಿಕರು ನೀಡುವ ಗುರುತಿನ ಚೀಟಿ ಅಥವಾ ಅವರ ಆಧಾರ ಕಾರ್ಡ್‌, ಇನ್ನಿತರೆ ಗುರುತಿನ ದಾಖಲೆಯ ಜೆರಾಕ್ಸ್‌ ಪ್ರತಿಯನ್ನು ಹೊಂದಿರುತ್ತಿದ್ದರು. ಇದರಿಂದ ನೀರಿಗೆ ಬಿದ್ದು ಒದ್ದೆಯಾಗಬಹುದು ಅಥವಾ ಹಾಳಾಗುವ ಸಾಧ್ಯತೆ ಇತ್ತು. ಇದೀಗ ಕಾರ್ಮಿಕರ ಆಧಾರ ಸಂಖ್ಯೆ ಸಹಿತ ಕ್ಯೂಆರ್‌ ಕೋಡ್‌ನೊಂದಿಗೆ ಗುರುತಿನ ಚೀಟಿ ವಿತರಿಸುವುದರಿಂದ ಕಾರ್ಮಿಕರ ಸಂಪೂರ್ಣ ವಿವರ ಲಭ್ಯವಾಗಲಿದೆ. ಅಲ್ಲದೆ ಇದು ಒದ್ದೆಯಾದರೂ ಹಾಳಾಗದ ಗುರುತಿನ ಚೀಟಿಯಾಗಿದೆ ಎಂದು ತಿಳಿಸಿದರು.

ಸ್ಥಳೀಯ ಮೀನುಗಾರರಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಇದ್ದು ಕರಾವಳಿ ಕಾವಲು ಪೊಲೀಸರು ಅಥವಾ ಕರಾವಳಿ ಭದ್ರತಾ ಪಡೆ ಇಲಾಖೆಯಲ್ಲಿ ಸ್ಥಳೀಯ ಮೀನುಗಾರರ ಮಾಹಿತಿ ದಾಖಲಾಗಿರುತ್ತದೆ. ಆದರೆ ಹೊರ ರಾಜ್ಯದ ಮೀನುಗಾರ ಕಾರ್ಮಿಕರಿಂದ ಆಗುತ್ತಿದ್ದ ಗೊಂದಲ ಗುರುತಿನ ಚೀಟಿ ವಿತರಣೆಯಿಂದ ನಿವಾರಣೆಯಾದಂತಾಗಿದೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ