Udayavni Special

ಪ್ರವಾಹದಲ್ಲೂ ಉಳಿದುಕೊಂಡ ಡೋಣಿ ಕರೆವ್ವ ದೇಗುಲ


Team Udayavani, Aug 23, 2019, 1:05 PM IST

uk-tdy-1

ಹಳಿಯಾಳ: ಭಾರೀ ಪ್ರವಾಹದ ನಡುವೆಯೂ ಇಲ್ಲಿನ ದೇವಿಯ ಸಣ್ಣ ಗುಡಿಯೊಂದು ಪವಾಡ ಸದೃಶವಾಗಿ ಯಾವುದೇ ಹಾನಿಯಾಗದೆ ಸ‌ುರಕ್ಷಿತವಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದು ತಾಲೂಕಿನ ಕೆಸರೊಳ್ಳಿ ಗ್ರಾಮದ ನಾಕಾ ಪ್ರದೇಶದ ಸೇತುವೆಯಿಂದ 100 ಅಡಿ ದೂರದ ನದಿ ದಂಡೆ ಮೇಲಿನ ಬೃಹತ್‌ ಅರಳಿ ಮರದ ಬುಡದಲ್ಲಿ ಶತಮಾನಗಳಿಂದ ಡೋಣಿ ಕರೆವ್ವ ದೇವಾಲಯವಿದೆ ಎನ್ನುತ್ತಾರೆ ಗ್ರಾಮಸ್ಥರು.

ಹಳಿಯಾಳದ ಇತಿಹಾಸದಲ್ಲೇ ಭೀಕರ ಪ್ರವಾಹಕ್ಕೆ ಕೆಸರೊಳ್ಳಿ ನದಿಯಲ್ಲಿ ಉಂಟಾದ ಭಾರೀ ಜಲಪ್ರವಾಹದಿಂದ ನೂರಾರು ಜನರ ಬದುಕೇ ಕೊಚ್ಚಿಕೊಂಡು ಹೋಗಿದೆ. ಅಲ್ಲದೇ ಹತ್ತಾರು ಕುಟುಂಬಗಳು ಸರ್ವಸ್ವವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಕೆಸರೊಳ್ಳಿ ನಾಕಾ ಪ್ರದೇಶದಲ್ಲಿರುವ ಸೇತುವೆ ಬಳಿಯಿಂದ 100 ಅಡಿ ದೂರದ ನದಿಯ ದಡದಲ್ಲೇ ಇರುವ ಅರಳಿ ಗಿಡದ ಬುಡದಲ್ಲಿ ಶತಮಾನಗಳ ಹಿಂದಿನಿಂದ ಇರುವ ಡೋಣಿ ಕರೆವ್ವಾ ದೇವಿ ಗುಡಿ ಪ್ರವಾಹದಲ್ಲಿ 22 ಅಡಿಗೂ ಅಧಿಕ ಆಳದಲ್ಲಿ ಮುಳುಗಿದ್ದರೂ ಕುದಲೆಳೆಯಷ್ಟು ಧಕ್ಕೆಯಾಗದೆ, ಗುಡಿಯ ಮುಂದೆ ಸಣ್ಣ ಕಟ್ಟಿಗೆಗೆ ಕಟ್ಟಲಾಗಿರುವ ಹತ್ತಾರು ಗಂಟೆಗಳು, ನೂರಾರು ಬಳೆಗಳು, ಗಿಡದ ಸಣ್ಣ ಕೊಂಬೆಗೆ ತೂಗು ಹಾಕಿರುವ ದೇವಿಯ ಮಾಂಗಲ್ಯ ಸರ, ದೇವಿಯ ತಲೆಯ ಮೇಲಿನ ಕೀರಿಟ, ಗುಡಿಯ ಒಳಗಿನ ಹಣತೆ, ಗಂಟೆ ಇನ್ನಿತರ ವಸ್ತುಗಳು ನೀರಿನ ರಭಸಕ್ಕೆ ಕೊಚ್ಚಿ ಹೊಗದೆ ಇದ್ದಲ್ಲೇ ಇರುವುದು ಅಚ್ಚರಿ ಮೂಡಿಸಿದೆ.

ಜಲಪ್ರವಾಹವನ್ನೇ ಮೆಟ್ಟಿ ನಿಂತ ಈ ಗುಡಿಯಲ್ಲಿ ದೇವಿಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಪೂಜೆ ಸಲ್ಲಿಸಲಾಗುತ್ತದೆ. ಹಳಿಯಾಳ ಮಾತ್ರವಲ್ಲದೇ ಧಾರವಾಡ ಭಾಗದಿಂದಲೂ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆಂದು ಗ್ರಾಮಸ್ಥ ಸುರೇಶ ಮಳಿಕ ಹೇಳುತ್ತಾರೆ.

ಉದಯವಾಣಿಯೊಂದಿಗೆ ಮಾತನಾಡಿದ ಕೆಸರೊಳ್ಳಿ ಗ್ರಾಪಂ ಸದಸ್ಯ ಡೊಂಗ್ರು ಕೆಸರೇಕರ, 1961-62ರಲ್ಲಿ ಈ ರೀತಿ ಪ್ರವಾಹ ಬಂದಿದ್ದ ಸಮಯದಲ್ಲೂ ಈ ದೇವಿ ಗುಡಿಗೆ ಹಾನಿಯಾಗಿದ್ದಿಲ್ಲ ಎಂದು ತಮ್ಮ ಹಿರಿಯರು ಹೇಳಿದ್ದು ನೆನಪಿದೆ. ಈಗ ತಾವೇ ಕಣ್ಣಾರೆ ಪ್ರವಾಹ ಕಂಡಿರುವುದು ದೇವಿಯ ಗುಡಿಗೆ ಸಣ್ಣ ಹಾನಿಯಾಗದೆ ಇರುವುದು ದೇವಿಯ ಪವಾಡವೇ ಆಗಿದೆ ಎನ್ನುತ್ತಾರೆ.

ದೇವಿ ಭಕ್ತರಾದ ಹಳಿಯಾಳ ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ ಹಾಗೂ ಸಮಾಜ ಸೇವಕ ಮಂಜುನಾಥ ಪಂಡಿತ ಮಾತನಾಡಿ ಜಲಪ್ರವಾಹಕ್ಕೆ ದೇವಿ ಗುಡಿಯ ಸುತ್ತಮುತ್ತಲ ಪ್ರದೇಶದಲ್ಲಿ ಅಸಂಖ್ಯಾತ ಹಾನಿ ಆಗಿದೆ. ಆದರೆ ದೇವಿಗುಡಿ ಬಳಿ ಏನೂ ಆಗದೆ ಇರುವುದು ದೈವ ಭಕ್ತರಲ್ಲಿ ದೇವರಲ್ಲಿ ನಂಬಿಕೆ ಇನ್ನೂ ಇಮ್ಮಡಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

 

ಯೋಗರಾಜ ಎಸ್‌.ಕೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹುಣಸೋಡಿ ಸ್ಫೋಟ ಪ್ರಕರಣ: ಮೃತಪಟ್ಟ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಹುಣಸೋಡಿ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್‌ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು

ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್‌ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು

Time management, Stress

ಸಮಯ ಮತ್ತೆ ಮರಳಿ ಸಿಗಲ್ಲ….ಸಮಯ ಪಾಲನೆಯಿಂದ ನಮಗೇನು ಲಾಭ?

cabinet

ಸಚಿವರ ಅಸಮಾಧಾನಕ್ಕೆ ಮಣಿದ ಸಿಎಂ ಬಿಎಸ್ ವೈ: ಮತ್ತೆ ಖಾತೆ ಬದಲಾವಣೆ, ಎಂಟಿಬಿಗೆ ಸಕ್ಕರೆ ಸಿಹಿ

ಅತೃಪ್ತಿ ಮುಂದುವರಿಸಿದರೆ ಸಚಿವರ ಮನೆಮುಂದೆ ಧರಣಿ ಮಾಡುತ್ತೇವೆ: ಬಿಜೆಪಿ ಶಾಸಕರ ವಾರ್ನಿಂಗ್

ಅತೃಪ್ತಿ ಮುಂದುವರಿಸಿದರೆ ಸಚಿವರ ಮನೆಮುಂದೆ ಧರಣಿ ಮಾಡುತ್ತೇವೆ: ಬಿಜೆಪಿ ಶಾಸಕರ ವಾರ್ನಿಂಗ್

ಗ್ರಾಹಕರ ಗಮನಕ್ಕೆ: ರಾತ್ರಿ 1ರಿಂದ 3ರವರೆಗೆ ಹಣ ವರ್ಗಾವಣೆಗೆ ಯುಪಿಐ ಬಳಸಬೇಡಿ: NPCI

ಗ್ರಾಹಕರ ಗಮನಕ್ಕೆ: ರಾತ್ರಿ 1ರಿಂದ 3ರವರೆಗೆ ಹಣ ವರ್ಗಾವಣೆಗೆ ಯುಪಿಐ ಬಳಸಬೇಡಿ: NPCI

ಈಂದ್‌ ಹುಡಿ ಉದರ ಸಮಸ್ಯೆಗಳಿಗೆ ಪರಿಹಾರ

ಈಂದ್‌ ಹುಡಿ ಉದರ ಸಮಸ್ಯೆಗಳಿಗೆ ಪರಿಹಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇವರ ದರ್ಶನಕ್ಕೆ ಬಂದ ಮೂವರು ಸಮುದ್ರ ಪಾಲು : ಗೋಕರ್ಣ ಕಡಲಿನಲ್ಲಿ ನಡೆದ ದುರಂತ

ದೇವರ ದರ್ಶನಕ್ಕೆ ಬಂದ ಮೂವರು ಸಮುದ್ರ ಪಾಲು : ಗೋಕರ್ಣ ಕಡಲಿನಲ್ಲಿ ನಡೆದ ದುರಂತ

CD release of Mahaganapati devotional songs

ಮಹಾಗಣಪತಿ ಭಕ್ತಿಗೀತೆಗಳ ಸಿಡಿ ಬಿಡುಗಡೆ

disease control campaign

ಮಂಗನ ಕಾಯಿಲೆ ನಿಯಂತ್ರಣ ಅಭಿಯಾನ

ಮುರುಡೇಶ್ವರ ಮಹಾ ರಥೋತ್ಸವ

ಮುರುಡೇಶ್ವರ ಮಹಾ ರಥೋತ್ಸವ

tdy-1

ರಕ್ಷಣಾ ‌ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ

MUST WATCH

udayavani youtube

ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

udayavani youtube

PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು

udayavani youtube

Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

ಹೊಸ ಸೇರ್ಪಡೆ

N Mahesh meeting

ಪ್ರಮಾಣ ಪತ್ರ ವಿತರಿಸಲು ವಸೂಲಿ ಮಾಡಿದರೆ ಕ್ರಮ

ವಯಸ್ಸಿನ ಅವಾಂತರ ಸಂಚಾರಿ ಅವಸ್ಥಾಂತರ

ವಯಸ್ಸಿನ ಅವಾಂತರ ಸಂಚಾರಿ ಅವಸ್ಥಾಂತರ

ಹುಣಸೋಡಿ ಸ್ಫೋಟ ಪ್ರಕರಣ: ಮೃತಪಟ್ಟ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಹುಣಸೋಡಿ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

Fire to a solid waste disposal unit

ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ

NAGARAJ

ಅಬಕಾರಿ ಇಲಾಖೆಯಲ್ಲಿ ಮಾಡುವುದೇನಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.