ನಾಪತ್ತೆಯಾಗಿದ್ದ ಡಿವೈಎಸ್ಪಿ ಹಾಗೂ ತಂಡ ಸುರಕ್ಷಿತವಾಗಿ ಪತ್ತೆ

Team Udayavani, Sep 2, 2019, 11:07 AM IST

ಕಾರವಾರ: ಕೈಗಾ ಅಣುಸ್ಥಾವರ ಸಮೀಪದ ಬಾರೆ ಗ್ರಾಮದ ಹತ್ತಿರ ಅರಣ್ಯದಿಂದ ಸೆಟಲೈಟ್ ಕಾಲ್ ಮಾಡಿದವರನ್ನು ಪತ್ತೆ ಹಚ್ಚಲು ಹೋಗಿ ಅರಣ್ಯದಲ್ಲಿ ಭಾನುವಾರ ರಾತ್ರಿ ನಾಪತ್ತೆಯಾಗಿದ್ದ  ಡಿವೈಎಸ್ಪಿ ಶಂಕರ ಮಾರಿಹಾಳ ಘಟನೆಗೆ ಸಂಬಂಧಿಸಿದಂತೆ ಇದೀಗ  ಡಿವೈಎಸ್ಪಿ ಶಂಕರ ಮಾರಿಹಾಳ  ಹಾಗೂ ಐಬಿ ಅಧಿಕಾರಿ ನಿಶ್ಛಲ ಕುಮಾರ್ ತಂಡದ ಸದಸ್ಯರು ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ವರದಿಯಾಗಿದೆ.

ರವಿವಾರ ಬೆಳಿಗ್ಗೆ ಡಿವೈಎಸ್ಪಿ ನೇತೃತ್ವದ ತಂಡ ಬಾರೇ ಹೆರೂರು ಗ್ರಾಮ ಸಮೀಪದ ಅರಣ್ಯದಲ್ಲಿ ತನಿಖೆ ಸಂಬಂಧ ಹುಡುಕಾಟ ‌ನಡೆಸಿತ್ತು. ಆದರೆ ಅರಣ್ಯದಲ್ಲಿ ದಾರಿ ತಪ್ಪಿದ ಕಾರಣ ಅವರು ರಾತ್ರಿಯಾದರೂ ಮರಳಿರಲಿಲ್ಲ. ಆಗ ಅಡಿಶನಲ್ ಎಸ್ಪಿ ಗೋಪಾಲ ಬ್ಯಾಕೋಡ ನೇತೃತ್ವದ ತಂಡ ಡಿವೈಎಸ್ಪಿ ಗಾಗಿ‌ ಹುಡುಕಾಟ ಪ್ರಾರಂಭಿಸಿತ್ತು. ಸೋಮವಾರ ಬೆಳಗಿನ ಜಾವ ಡಿವೈಎಸ್ಪಿ ಹಾಗೂ ತಂಡ ಕಾಡಿನಲ್ಲಿ ಭೇಟಿಯಾಯಿತು. ಆಗ ಸಮಾಧಾನದ ನಿಟ್ಟುಸಿರು ಪೋಲೀಸ್ ಇಲಾಖೆಯಿಂದ ಬಂತು. ಈ ಬಗ್ಗೆ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಎಲ್ಲಾ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆಂದು ಹೇಳಿದ್ದಾರೆ.

ಸೆಟಲೈಟ್ ಕಾಲ್ ಆದ ಸ್ಥಳ ಕೈಗಾ ಅಣುಸ್ಥಾವರ ಹಾಗೂ ನೌಕಾನೆಲೆ ಐಎನ್ ಎಸ್ ಕದಂಬದ ಶಸ್ತ್ರಾಗಾರ ಸಂಗ್ರಹ ವಜ್ರಕೋಶ ಕ್ಕೆ  ಸಮಾನ ಅಂತರದಲ್ಲಿದೆ. ಹಾಗಾಗಿ ಪೊಲೀಸರು ಸೆಟಲೈಟ್ ಕಾಲ್ ಮಾಡಿದ ತಾಣ ಹುಡುಕಲು‌ ಎರಡು ತಂಡವಾಗಿ ಕಾರ್ಯಾಚರಣೆಗೆ ಇಳಿದರು.

ಒಂದು ತಂಡ ಬಾರೆ ಗ್ರಾಮದ ಅರಣ್ಯದಲ್ಲಿ ಮತ್ತೊಂದು ಅಗಸೂರು ಕಡೆ ಭಾಗದಿಂದ ಅರಣ್ಯ ಪ್ರವೇಶಿಸಿತ್ತು. ಇದರಲ್ಲಿ ಡಿವೈಎಸ್ಪಿ ಶಂಕರ್ ಮಾರಿಹಾಳ್ ತಂಡ ಅರಣ್ಯದಲ್ಲಿ ದಾರಿ ತಪ್ಪಿತ್ತು. ರಾತ್ರಿ ಇಡೀ ಅರಣ್ಯದಲ್ಲಿ ಕಳೆಯಿತು. ಪಶ್ಚಿಮ ಘಟ್ಟದ ದಟ್ಟ ಅರಣ್ಯ ಕೈಗಾ ಯಲ್ಲಾಪುರ ಮಧ್ಯ ಇದೆ. ಬಾರೆ, ಹೆರೂರು ,ವಜ್ರಳ್ಳಿ ಏಕ ಮುಖ ವಾಹನ ಸಂಚಾರದ ಇಕ್ಕಟ್ಟಾದ , ಕಡಿದಾದ ಕಣಿವೆಯ ದಾರಿ. ಇಲ್ಲಿ ಪೊಲೀಸ್ರು ಸೆಟಲೈಟ್ ಕಾಲ್ ಮಾಡಿದವರಿಗಾಗಿ ಹುಡುಕಾಟ ನಡೆಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕುಮಟಾ: ತಾಲೂಕಿನ ದಿವಗಿ ಗ್ರಾಮದಿಂದ ಕುಮಟಾ ಪಟ್ಟಣದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕೈದು ಕಡೆಗಳಲ್ಲಿ ಬಸ್‌ ನಿಲುಗಡೆಯ ಸ್ಥಳಗಳಿದ್ದು, ಎಲ್ಲಿಯೂ ಪ್ರಯಾಣಿಕರ...

  • ಯಲ್ಲಾಪುರ: ಗ್ರಾಮ ಮಟ್ಟದಲ್ಲಿ ಮಹಿಳೆಯರ ಸ್ವಾವಲಂಬನೆಗೆ ಅನೇಕ ಯೊಜನೆಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಬೇಕು...

  • ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಮಾ.3 ರಿಂದ ನಡೆಯಲಿದ್ದು, ರಥಕ್ಕೆ ಬಳಸಲಾಗುವ ಮರವನ್ನು ಪೂಜಿಸಿ ಕಚ್ಚು ಹಾಕುವ ಸಂಪ್ರದಾಯವನ್ನು...

  • ಕಾರವಾರ: ರಾಜ್ಯದ ಏಕೈಕ ಕಪ್ಪು ಮರಳಿನ ಕಡಲತೀರ ಎನ್ನುವ ಖ್ಯಾತಿ ಪಡೆದಿರುವ ಕಾರವಾರ ತಾಲೂಕಿನ ಮಾಜಾಳಿಯ ತೀಳ್‌ ಮಾತಿ ಬೀಚ್‌ ಪ್ರವಾಸೋದ್ಯಮ ಪಟ್ಟಿಗೆ ಸೇರುವ ಭಾಗ್ಯದಿಂದ...

  • ಕಾರವಾರ: ಬೇಸಿಗೆ ಆರಂಭಕ್ಕೆ ಇನ್ನೇನು 75 ದಿನ ಬಾಕಿಯಿದೆ. ಆದರೆ, ಕಾರವಾರ ನಗರದ ನಿವಾಸಿಗಳಿಗೆ ಈಗಲೇ ಕುಡಿಯುವ ನೀರಿನ ಬರ ಎದುರಾಗುವ ಆತಂಕ ಕಾಡುತ್ತಿದೆ. ಜೊತೆಗೆ...

ಹೊಸ ಸೇರ್ಪಡೆ