ಸತತ ಶ್ರಮ; ವಿದ್ಯುತ್ ಸಂಪರ್ಕ
Team Udayavani, May 20, 2021, 9:46 PM IST
ಕುಮಟಾ: ತಾಲೂಕಿನ ದೇವಗಿರಿ ಗ್ರಾಪಂ ವ್ಯಾಪ್ತಿಯ ಉಮಾಮಹೇಶ್ವರದ ಬಳಿ ಹಾನಿಗೊಂಡಿದ್ದ ವಿದ್ಯುತ್ ತಂತಿ ಹಾಗೂ ಟಾನ್ಸ್‌ಫಾರ್ಮರ್ ಅನ್ನು ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಹೆಸ್ಕಾಂ ಇಲಾಖೆಯ ಸಿಬ್ಬಂದಿ ರಾತ್ರಿ 11:30 ರವರೆಗೂ ದುರಸ್ತಿ ಕಾರ್ಯನಡೆಸಿ ಗ್ರಾಮಸ್ಥರಿಗೆ ವಿದ್ಯುತ್ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೌಕ್ತೇ ಚಂಡಮಾರುತ ಪರಿಣಾಮ ದೇವಗಿರಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದು, ಹೊಲಭಾಗ, ಸುವರ್ಣಗದ್ದೆ, ಎಸ್ಸಿಕೇರಿ ಸೇರಿದಂತೆ ಸುತ್ತಮುತ್ತಲಿನ ಇನ್ನಿತರ ಪ್ರದೇಶಗಳ ಜನತೆ ವಿದ್ಯುತ್ ಇಲ್ಲದೇ ಪರದಾಡುವಂತಾಗಿತ್ತು. ಗಾಳಿ, ಮಳೆ, ಹೆಸ್ಕಾಂ ಸಿಬ್ಬಂದಿ ಕೊರತೆಯಿದ್ದರೂ ಗ್ರಾಪಂ ಉಪಾಧ್ಯಕ್ಷ ಎಸ್.ಟಿ. ನಾಯ್ಕ ಅವರು ಹೆಚ್ಚಿನ ಮುತುವರ್ಜಿ ವಹಿಸಿ ವಿದ್ಯುತ್ ದುರಸ್ತಿಗೊಳಿಸುವವರೆಗೂ ಖುದ್ದಾಗಿ ನಿಂತು ಸಹಕರಿಸಿದರು.
ಈ ಕಾರ್ಯದಲ್ಲಿ ಗ್ರಾಪಂ ಸದಸ್ಯ ಪಾಂಡು ಪಟಗಾರ, ಮಾಜಿ ಸದಸ್ಯ ರಾಜು ನಾಯ್ಕ, ಲೈನ್ ಮೆನ್ ನರಸಿಂಹ, ಪ್ರಮುಖರಾದ ಮಹಾದೇವ ಪಟಗಾರ, ಗೋಪಾಲ ಮಡಿವಾಳ, ಸುದೀಶ ನಾಯ್ಕ, ಜಗದೀಶ ಭಂಡಾರಿ, ರಾಮ ಮುಕ್ರಿ ಇನ್ನಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿರಸಿ: ಭಾರಿ ಮಳೆಗೆ ಶಾಲಾ-ಕಾಲೇಜುಗಳಿಗೆ ರಜೆ; ಕೊನೇ ಕ್ಷಣದ ಆದೇಶಕ್ಕೆ ಆಕ್ರೋಶ
ಉತ್ತರ ಕನ್ನಡ ಭಾರೀ ಮಳೆ: ಶಾಲಾ ಕಾಲೇಜಿಗೆ ರಜೆ ಘೊಷಣೆ
ಅಂಕೋಲಾ: ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಗುದ್ದಿದ ಕಾರು; ಓರ್ವ ಸಾವು
ಭಟ್ಕಳ: ಉದಯಪುರ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಗೋಕರ್ಣದ ಕಡಲತೀರದಲ್ಲಿ ಪ್ರವಾಸಿಗರಿಗೆ ಸಿಕ್ಕ ದುರ್ಗಾದೇವಿ ಮೂರ್ತಿ