ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಕಲ ಸೌಲಭ್ಯ
ಕೊರೊನಾ ಸೋಂಕು ನಿಯಂತ್ರಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ: ಎಸಿ ಆಕೃತಿ ಬನ್ಸಾಲ್
Team Udayavani, May 27, 2021, 9:21 PM IST
ಮುಂಡಗೋಡ: ಕುಟುಂಬದಲ್ಲಿರುವ ಒಬ್ಬ ವ್ಯಕ್ತಿಗೆ ಸೋಂಕು ದೃಢವಾದರೆ ಅವರನ್ನು ಕಡ್ಡಾಯವಾಗಿ ಇಲ್ಲಿನ ಕೋವಿಡ್ ಕೇರ್ ಸೆಂಟರ್‌ಗೆ ಕರೆತರಲಾಗುವುದು ಎಂದು ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಹೇಳಿದರು.
ಅವರು ತಾಲೂಕು ಆಸ್ಪತ್ರೆಗೆ ಮತ್ತು ಇಲ್ಲಿನ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಾಡಳಿತವು ಸುಸುಜ್ಜಿತ 90 ಬೆಡ್‌ನ ಕೋವಿಡ್ ಕೇರ ಸೆಂಟರ್ ತೆರೆದಿದ್ದಾರೆ. ಈ ಕೇರ್ ಸೆಂಟರ್‌ನಲ್ಲಿ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದೆ. ರುಚಿಕರ ಊಟವನ್ನು ಹೋಟೆಲ್‌ಗಳಿಂದ ತಂದು ಕೊಡಲಾಗುತ್ತಿದೆ. ಕುಡಿಯವ ನೀರು, ವಾಷಿಂಗ್ ಮಷಿನ್, ಬಿಸಿ ನೀರು ಮತ್ತು ಗೀಸರ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ರೂಂನಲ್ಲಿ ಪ್ರತ್ಯೇಕ ಶೌಚಾಲಯವಿದೆ. ತಾಲೂಕಿನಲ್ಲಿ ಕೋವಿಡ್ ನಿಯಂತ್ರಿಸಲು ಈಗಾಗಲೇ ಎಲ್ಲಾ ತರಹದ ಪ್ರಯತ್ನವನ್ನು ತಹಶೀಲ್ದಾರ್ ನೇತೃತ್ವದ ತಂಡ ಮಾಡುತ್ತಿದೆ. ವಿಭಾಗಕ್ಕೆ ಹೋಲಿಸಿದರೆ ಯಲ್ಲಾಪುರದಲ್ಲಿ ಕೇವಲ 27 ಪ್ರಕರಣ ಪತ್ತೆಯಾಗಿದೆ. ಶಿರಸಿ ಮತ್ತು ಮುಂಡಗೋಡ ತಾಲೂಕುಗಳಲ್ಲಿ ಪ್ರಕರಣದ ಪ್ರಮಾಣ ಸ್ವಲ್ಪ ಹೆಚ್ಚಾಗಿದ್ದರು ನಿಯಂತ್ರಣದಲ್ಲಿದೆ. ನಮಗೆ ಆಕ್ಸಿಜನ್ ಆಗಲಿ, ವೈದ್ಯಕೀಯ ಸೌಕರ್ಯಗಳಾಗಲಿ ಯಾವುದೇ ರೀತಿಯಲ್ಲಿ ಕೊರತೆ ಇಲ್ಲ ಎಂದರು.
ಸೋಂಕಿತರ ಆರೋಗ್ಯ ವಿಚಾರಿಸಿ ಕೇಂದ್ರದ ಪ್ರತಿ ವಾರ್ಡಿಗೂ ಭೇಟಿ ನೀಡಿ ಸಿದ್ಧತೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ತಾಲೂಕು ಆಸ್ಪತೆ ಮತ್ತು ವ್ಯಾಕ್ಸಿನ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಹಶೀಲ್ದಾರ್ ಶ್ರೀಧರ ಮುಂದಲಮನಿ, ಆಡಳಿತ ವೈದ್ಯಾಧಿ ಕಾರಿ ಎಚ್. ಎಫ್. ಇಂಗಳೆ, ಪಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಉಪತಹಶೀಲ್ದಾರ್ ಜೆ.ಬಿ. ಭಟ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿದ್ವಾಂಸ ಉಮಾಕಾಂತ ಭಟ್ ಕೆರೇಕೈ ರಿಗೆ ವಿದ್ಯಾವಾಚಸ್ಪತಿ ಪದವಿ
ಭಟ್ಕಳ: ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ: ಜನಜೀವನ ಅಸ್ತವ್ಯಸ್ಥ
ತಾಕತ್ತಿದ್ದರೆ ಜನಪ್ರತಿನಿಧಿಗಳ ಅತಿಕ್ರಮಣ ಖುಲ್ಲಾ ಮಾಡಿಸಿ: ಎ. ರವೀಂದ್ರ ನಾಯ್ಕ
ಕೋಡಶಿಂಗೆಯಲ್ಲಿ ಸೋಲಾರ್ ಗಾಣ, ಗಿರಣಿ; ಎರಡು ತಿಂಗಳಿಂದ ಪ್ರಾಯೋಗಿಕ ಆರಂಭ
ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ
MUST WATCH
ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು
ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್
ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ
ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ
ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಹೊಸ ಸೇರ್ಪಡೆ
ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಇಂದು ಇಡಿ ವಿಚಾರಣೆ
ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ ಲಕ್ಷ್ಮಿ ನಾರಾಯಣ್ಗೆ ಶೋಕಾಸ್ ನೋಟಿಸ್
ಇಂಗ್ಲೆಂಡ್ ವಿರುದ್ಧ ಟಿ20 ಏಕದಿನ ಸರಣಿಗೆ ತಂಡ ಪ್ರಕಟ; ಮರಳಿದ ಶಿಖರ್ ಧವನ್