ಕಾರವಾರ: ಬಂದರಿನಲ್ಲಿ ಇರಿಸಲಾಗಿದ್ದ ಮಲ್ಪೆಯ ಬೋಟ್ ಗೆ ಮತ್ತೆ ಹತ್ತಿಕೊಂಡ ಬೆಂಕಿ
Team Udayavani, Nov 6, 2021, 6:04 PM IST
ಕಾರವಾರ: ಮಲ್ಪೆ ಬೋಟ್ ಗೆ ಬಂದರಿನಲ್ಲಿ ಮತ್ತೆ ಬೆಂಕಿ ಹೊತ್ತಿದ ಘಟನೆ ಇಂದು ಸಂಜೆ ನಡೆದಿದೆ.
ಕಾರವಾರದ ಲೈಟ್ ಹೌಸ್ ಬಳಿ ಮೀನು ಹಿಡಿಯಲು ಹೋಗಿದ್ದ ವೇಳೆ ಬೋಟ್ ಗೆ ಬೆಂಕಿ ಹೊತ್ತಿಕೊಂಡು ಏಳು ಜನ ಮೀನುಗಾರರನ್ನ ರಕ್ಷಣೆ ಮಾಡಲಾಗಿತ್ತು. ಬೋಟ್ ಗೆ ಹೊತ್ತಿಕೊಂಡ ಬೆಂಕಿಯನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ನಂದಿಸಿ ಕಾರವಾರದ ಬೈತಖೋಲ್ ಸಮೀಪದ ವಾಣಿಜ್ಯ ಬಂದರಿಗೆ ತಂದು ಇಡಲಾಗಿತ್ತು.
ಆದರೆ ಇಂದು ಸಂಜೆ ಹೊತ್ತಿಗೆ ಅದೆ ಬೋಟ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬೋಟ್ ಸಂಪೂರ್ಣ ಕರಕಲಾಗಿದೆ. ನಿನ್ನೆ ರಾತ್ರಿ ಬೋಟ್ ಗೆ ಹೊತ್ತಿಕೊಂಡ ಬೆಂಕಿ ನಂದಿಸಲಾಗಿತ್ತಾದ್ದರೂ ಬೆಂಕಿ ನಂದಿಸಿದ ಬೋಟ್ ಒಳಭಾಗದಲ್ಲಿ ಸಣ್ಣದೊಂದು ಬೆಂಕಿ ಕಿಡಿ ಇದ್ದ ಕಾರಣ ಭಾರೀ ಗಾಳಿಯಿಂದಾಗಿ ವಾಪಸ್ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಕರಾವಳಿ ಭದ್ರತಾ ಪಡೆಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ