ಹೊನ್ನಾವರದಲ್ಲಿ ಬಂದರು ಕಾಮಗಾರಿಗೆ ವಿರೋಧ : ಮೀನುಗಾರರ ಪ್ರತಿಭಟನೆ
ಮೀನುಗಾರಿಕೆ ಸಂಪೂರ್ಣ ನಶಿಸುವ ಭಯ
Team Udayavani, Feb 2, 2021, 9:33 PM IST
ಹೊನ್ನಾವರ: ಕಾಸರಕೋಡ ಟೊಂಕಾ ಭಾಗದ ಸ್ಥಳೀಯರು ಮತ್ತು ಹೊನ್ನಾವರ ಪೋರ್ಟ್ ಪ್ರೈ.ಲಿ.ನ ನಡುವಿನ ಸಮರ ಮತ್ತೆ ಆರಂಭವಾಗಿದೆ. ತಮ್ಮನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸುತ್ತಾರೆನ್ನುವ ಅಭದ್ರತೆಯ ಜೊತೆಗೆ ಕುಲಕಸುಬಾದ ಮೀನುಗಾರಿಕೆ ಸಂಪೂರ್ಣ ನಶಿಸುವ ಭಯದಲ್ಲಿ ಕಾಮಗಾರಿಯೇ ಬೇಡ ಎನ್ನುತ್ತಿದ್ದು, ಪೊಲೀಸರ ರಕ್ಷಣೆಯಲ್ಲಿ ರಸ್ತೆ ನಿರ್ಮಾಣಕ್ಕೆ ಖಾಸಗಿ ಕಂಪನಿ ಮುಂದಾಗಿದೆ.
ಹಿಂದಿನ ವರ್ಷ ಟೊಂಕಾ ಮೀನುಗಾರಿಕಾ ಬಂದರಿಗೆ ತೆರಳುವ ರಸ್ತೆಯನ್ನೇ ಬಳಸಿಕೊಂಡಿದ್ದ ಖಾಸಗಿ ಕಂಪನಿಯವರ ಭಾರೀ ವಾಹನಗಳ ಓಡಾಟದಿಂದ ರಸ್ತೆ ಹಾಳಾಗಿದೆ. ಅಳಿವೆಯ ಹೂಳೆತ್ತದ ಕಾರಣ ಹಲವು ಬೋಟ್‌ಗಳು ದುರಂತಕ್ಕೀಡಾಗಿವೆ. ಈ ನಡುವೆ ಸಮುದ್ರದ ಬದಿಯಿಂದ ಬಂದರು ನಿರ್ಮಾಣದ ಸ್ಥಳದವರೆಗೆ ರಸ್ತೆ ನಿರ್ಮಾಣಕ್ಕೆ ಖಾಸಗಿ ಕಂಪನಿಯವರು ಮುಂದಾಗಿದ್ದರು. ಸಮುದ್ರದಂಚಿನಲ್ಲಿ ಕಲ್ಲುಬಂಡೆಗಳನ್ನು ಹಾಕುವುದರಿಂದ ಜೀವ ವೈವಿದ್ಯತೆಗೆ ಹಾನಿಯಾಗುತ್ತದೆ ಮತ್ತು ನಾಡದೋಣಿ ಮೀನುಗಾರಿಕೆಗೂ ತೊಂದರೆಯಾಗಲಿದೆ. ಕೂಡಲೇ ಇದನ್ನು ತಡೆಯಬೇಕೆಂದು ಜೈನ ಜಟಗೇಶ್ವರ ಯುವಕ ಸಂಘದ ಅಧ್ಯಕ್ಷ ಭಾಸ್ಕರ ತಾಂಡೇಲ್ ಮತ್ತು ಮೀನುಗಾರರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ :83 ತೇಜಸ್ ಯುದ್ಧ ವಿಮಾನ ಖರೀದಿ: HAL ಜತೆ 48 ಸಾವಿರ ಕೋಟಿ ರೂ. ಒಪ್ಪಂದ: ಕೇಂದ್ರ
ಕಾನೂನು ಪ್ರಕಾರವೇ ನಿಯಮಾವಳಿಯಂತೆ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ ಎಂದು ತಹಶೀಲ್ದಾರ್ ವಿವೇಕ ಶೇಣಿÌ ಹೇಳಿದ್ದು, ಪೊಲೀಸ್ ಬಂದೋಬಸ್ತ್ನಲ್ಲಿ ರಸ್ತೆ ಕಾಮಗಾರಿ ಆರಂಭವಾಗಿದೆ.