ವಿದೇಶಿ ನಾಣ್ಯ-ಅಂಚೆಚೀಟಿ ಸಂಗ್ರಾಹಕ ಚಿದಾನಂದ


Team Udayavani, Jan 23, 2019, 11:35 AM IST

23-january-22.jpg

ಕುಮಟಾ: ಮನುಷ್ಯನ ರೂಪದಲ್ಲಿ ವಿವಿಧತೆ ಇದ್ದಂತೆ ಹವ್ಯಾಸಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ತಾಲೂಕಿನ ಕಲ್ಲಬ್ಬೆ ಗ್ರಾಮದ ಸುಶಿಕ್ಷಿತ ಕೃಷಿಕ ಚಿದಾನಂದ ಗಣಪತಿ ಹೆಗಡೆ. ಇವರಲ್ಲಿ ಪುರಾತನ ಕಾಲದಿಂದ ಹಿಡಿದು ಈಗಿನವರೆಗಿನ ನಾಣ್ಯಗಳು, ಅಂಚೆ ಚೀಟಿಗಳ ಜೊತೆಗೆ ಅಪರೂಪದ ಹಲವು ವಸ್ತುಗಳ ದೊಡ್ಡ ಸಂಗ್ರಹಾಲಯವೇ ಇದೆ.

ಕಲ್ಲಬ್ಬೆಯ ಸಿ.ಜಿ. ಹೆಗಡೆ ಕಳೆದ 35 ವರ್ಷಗಳಿಂದ ಇಂತಹ ಸಂಗ್ರಹದಲ್ಲಿ ನಿರತರಾಗಿದ್ದು, ಎಲ್ಲಿಯೂ ಕಾಣಸಿಗದ ಅಪರೂಪದ ನಾಣ್ಯಗಳು ಹಾಗೂ ಅಂಚೆ ಚೀಟಿಗಳ ಜೊತೆಗೆ ಪುರಾತನ ಕಾಲದ ಗಾಂಧಿ ಕನ್ನಡಕ, ಹಿಟ್ಲರ್‌ ಕಾಲದ ಪೆನ್ನು, ಟಿಪ್ಪು ಸುಲ್ತಾನ ಕಾಲದ ಪೆಟ್ಟಿಗೆ, ಉಂಗುರ ಗಡಿಯಾರ, ಗಾಂಧಿ ಕಾಲದ ಗಡಿಯಾರ, ಹಾಂಕಾಂಗ್‌ ಬ್ಯಾಟರಿ, ಮೂರು ಅಡಕೆ, ಅತಿ ಚಿಕ್ಕ ತೆಂಗಿನ ಕಾಯಿ, ಜೋಡು ಗೇರು ಬೀಜ ಹೀಗೆ ಅಪರೂಪದ ವಸ್ತುಗಳ ಭಂಡಾರವೇ ಇದೆ.

ನಾಣ್ಯ ಹಾಗೂ ಅಂಚೆ ಚೀಟಿಗಳ ಸಂಗ್ರಹಕ್ಕಾಗಿ ಚಿದಾನಂದ ಹೆಗಡೆ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಅಲ್ಲದೆ ಅವುಗಳನ್ನು ಜೋಪಾನವಾಗಿ ರಕ್ಷಿಸಿದ್ದಾರೆ. ಮುಂಬೈನ ಭಾರತೀಯ ಠಂಕ ಶಾಲೆಯಲ್ಲಿ ಹೆಸರು ನೋಂದಾಯಿಸಿ, ಸರ್ಕಾರ ಗಣ್ಯ ವ್ಯಕ್ತಿಗಳ ಗೌರವಾರ್ಥವಾಗಿ ಬಿಡುಗಡೆ ಮಾಡುವ ಹೊಸ ನಾಣ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಆ ನಾಣ್ಯಗಳ ಮೌಲ್ಯವನ್ನು ಸರ್ಕಾರಕ್ಕೆ ಪಾವತಿಸಿ ತರಿಸಿಕೊಳ್ಳುತ್ತಾರೆ.

ಚಿದಾನಂದ ಅವರಲ್ಲಿ ಸುಮಾರು ಏಳು ನೂರಕ್ಕು ಅಧಿಕ ದೇಶಿ ಹಾಗೂ ಆರು ನೂರಕ್ಕು ಹೆಚ್ಚು ವಿದೇಶಿ ನಾಣ್ಯಗಳಿವೆ. ಆನೆಗುಂದಿ ಅರಸರು, ಚೋಳರ ಕಾಲದ ಬಂಗಾರದ ನಾಣ್ಯಗಳ ಜೊತೆ ವಿಜಯನಗರ ಸಾಮ್ರಾಜ್ಯ, ಚಿತ್ರಕೂಟ, ಉದಯಪುರ, ಗಂಗರ ಹಾಗೂ ಬ್ರಿಟಿಷರ ಕಾಲದ ಪುರಾತನ ನಾಣ್ಯಗಳಿವೆ. ಬೆಳ್ಳಿ, ತಾಮ್ರ, ಅಲ್ಯೂಮಿನಿಯಂ ಹಾಗೂ ಈಗಿನ ಸ್ಟೀಲ್‌ ನಾಣ್ಯಗಳಿವೆ. ಭಾರತದ ಸ್ವತಂತ್ರ್ಯದ ನೆನಪಿಗೆ ಬಿಡುಗಡೆಯಾದ ಎಲಿಜಬೆತ್‌ ರಾಣಿಯ ಮುಖವಿರುವ ನಾಣ್ಯ, ಅಮೆರಿಕಾದ ಹಳೆಯ ಡಾಲರ್‌ ನಾಣ್ಯ, ಪೂರ್ವ ಆಫ್ರಿಕಾದ ಹಿತ್ತಾಳೆ ನಾಣ್ಯ, ಪೋರ್ಚುಗೀಸ್‌ ಕಾಲದ ಕೋರಿಪಾಂಚ್ ನಾಣ್ಯ ಹೀಗೆ ವಿವಿಧ ರಾಷ್ಟ್ರಗಳ ನಾಣ್ಯಗಳಿವೆ. ಅಲ್ಲದೇ ನಾಣ್ಯದ ಜೊತೆಗೆ ನೋಟುಗಳು ಕೂಡ ಇವೆ. ದೇಶಿಯ ರೂಪಾಯಿ ನೋಟುಗಳ ಜೊತೆಗೆ ಸುಮಾರು 20 ದೇಶಗಳ ಕರೆನ್ಸಿಗಳಿವೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ನಾಣ್ಯ ಹಾಗೂ ಅಂಚೆ ಚೀಟಿಗಳನ್ನು ಪ್ರದರ್ಶಿಸಿ ಹಲವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಹಲವು ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಅವರ ಸಂಗ್ರಹದಲ್ಲಿರುವ ಕೆಲ ನಾಣ್ಯಗಳನ್ನು ತಮಗೆ ನೀಡುವಂತೆ ವೀಕ್ಷಕರು ಒತ್ತಾಯಿಸಿದ್ದುಂಟು. ನಿರಾಕರಿಸಿದ್ದಕ್ಕೆ ಚಿದಾನಂದ ಅವರನ್ನು ಬೆದರಿಸಿದ ಘಟನೆ ಕೂಡ ನಡೆದಿದೆ ಎಂದು ಅವರೇ ಹೇಳುತ್ತಾರೆ. ಹಾಗಾಗಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಸಂಗ್ರಹಕ್ಕೆ ಭದ್ರತೆ ಕಲ್ಪಿಸುವ ಭರವಸೆ ನೀಡಿದರೆ ಮಾತ್ರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾರೆ.

ಹಳೆಯ ನಾಣ್ಯ ಸೇರಿದಂತೆ ಹಲವು ವಸ್ತುಗಳನ್ನು ನಾನು ಹಲವು ವರ್ಷಗಳಿಂದ ಸಂಗ್ರಹಿಸುತ್ತಿದ್ದೇನೆ. ದೇಶದಲ್ಲಷ್ಟೇ ಅಲ್ಲದೆ ವಿದೇಶ‌ಗಳಿಂದಲೂ ಡಾಲರ್‌ ಮತ್ತು ನಾಣ್ಯಗಳನ್ನು ಆಮದು ಮಾಡಿಕೊಂಡಿದ್ದೇನೆ. ಈ ಬಗ್ಗೆ ನಾನು 60ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ನೀಡಿದ್ದೇನೆ. ರಾಜ್ಯ, ಹೊರ ರಾಜ್ಯಗಳಿಂದ ಬಹಳಷ್ಟು ಜನರು ನಮ್ಮಲ್ಲಿಗೆ ಬಂದು, ಈ ಬಗ್ಗೆ ವಿವರಣೆ ಪಡೆದು ಹೋಗುತ್ತಾರೆ. ಪುರಾತನ ವಸ್ತುಗಳನ್ನು ಸಂಗ್ರಹಿಸುವುದು ನನ್ನ ಹವ್ಯಾಸ.
•ಸಿ.ಜಿ.ಹೆಗಡೆ, ಕೃಷಿಕ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ವಾಪಸ್ಸಾಗುತ್ತಿರುವ ವಾಹನ ಸವಾರರು

Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.