Udayavni Special

ಬ್ರಿಟಿಷ್‌ ಏರ್‌ವೇಸ್‌ನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ


Team Udayavani, Sep 15, 2019, 12:53 PM IST

uk-tdy-3

ಕಾರವಾರ: ಗ್ರಾಮೀಣ ಠಾಣೆಗೆ ದೂರು ನೀಡಲು ಬಂದ ಯುವ ಸಮೂಹ.

ಕಾರವಾರ: ಬ್ರಿಟಿಷ್‌ ಏರ್‌ವೇಸ್‌ನಲ್ಲಿ ಗ್ರೌಂಡ್‌ ಸ್ಟಾಫ್‌ ಕೆಲಸ ಕೊಡಿಸುವುದಾಗಿ ಹೇಳಿ ವಿವಿಧ ಜಿಲ್ಲೆಗಳ ಯುವಕರಿಗೆ ವಂಚಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದ್ದು, ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರವಾರ ಶಿರವಾಡ ನಿವಾಸಿ ಮಾರ್ವಿನ್‌ ಡಿಸೋಜಾ ಎಂಬಾತ ತಲಾ 1-1.50 ಲಕ್ಷ ರೂ.ಗಳನ್ನು ಪಡೆದು ಹಾಸನ, ಹೊನ್ನಾವರ, ಸಿದ್ಧಾಪುರ, ಶಿರಸಿ ಸೇರಿದಂತೆ ವಿವಿಧ ಜಿಲ್ಲೆಗಳ 40 ಯುವಕರಿಗೆ ಮೋಸ ಮಾಡಿದ್ದು, ಸದ್ಯ ಪರಾರಿಯಾಗಿದ್ದಾನೆ. ಮಾರ್ವಿನ್‌ ಜತೆ ಅಂಕಿತಾ ಹಾಗೂ ದಿಶಾ ಎಂಬುವವರು ಸಹ ಸೇರಿ ವಂಚಿಸಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ಒಂದು ತಿಂಗಳು ತರಬೇತಿ ನೀಡಿದಂತೆ ಮಾಡಿ ಯುವಕರನ್ನು ನಂಬಿಸಿ ಹಣ ಕೀಳಲಾಗಿತ್ತು. ಬ್ರಿಟಿಷ್‌ ಏರ್‌ವೇಸ್‌ ಗ್ರೌಂಡ್‌ ವರ್ಕರ್ ಎಂದು ಟೀಶರ್ಟ್‌ ಸಹ ಮಾಡಿಸಿ ಯುವಕರಿಗೆ ನೀಡಲಾಗಿತ್ತು. ಇದನ್ನು ಕಂಡ ಯುವಕರು ನೌಕರಿ ಸಿಕ್ಕಷ್ಟೇ ಖುಷಿಯಲ್ಲಿದ್ದರು. ಬೆಂಗಳೂರಿನ ಬ್ರಿಟಿಷ್‌ ಏರ್‌ವೇಸ್‌ ಕಚೇರಿಗೆ ಟೀ ಶರ್ಟ್‌ ಹಾಕಿಕೊಂಡು ಹೋದಾಗಲೇ ಇದು ನಕಲಿ ಎಂದು ಗೊತ್ತಾಗಿದೆ.

ವಿದೇಶಿ ಕಂಪನಿಯಾದ ಕಾರಣ ಹಣ ಠೇವಣಿ ಮಾಡಬೇಕಾಗುತ್ತದೆ. ಅಲ್ಲದೇ ಅಧಿಕಾರಿಗಳಿಗೆ ಸ್ವಲ್ಪ ಹಣ ನೀಡಬೇಕಾಗುತ್ತದೆ ಎಂದು ಹೇಳಿ ಯುವಕರನ್ನು ಮಾರ್ವಿನ್‌ ವಂಚಿಸಿದ್ದು, ಎಲ್ಲಾ ವಿವರಗಳನ್ನು ಬರೆದು ಪೊಲೀಸರಿಗೆ ನೀಡಿದ್ದಾರೆ.

ದಿಶಾ ರಾಯ್ಕರ್‌ ಎಲ್ಲಿಯ ನಿವಾಸಿ ಎಂಬುದು ತಿಳಿದಿಲ್ಲ. ಕೆಂಪೇಗೌಡ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ ಆಡ್ಮಿನಿಸ್ಟ್ರೇಟಿವ್‌ ಆಫೀಸ್‌ ಅಸಿಸ್ಟೆಂಟ್ ಎಂದು ಎಫ್‌ಬಿ ಖಾತೆಯಲ್ಲಿ ಆಕೆ ಬರೆದುಕೊಂಡಿದ್ದಾಳೆ. ಈಕೆಯದ್ದು ಕಾರವಾರ ಮೂಲದ ವಿಳಾಸವಿದ್ದು, ನಗರದ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಓದಿರುವುದಾಗಿ ವಿವರಗಳಲ್ಲಿದೆ. ಯುವಕರು ನೀಡಿದ ಮಾಹಿತಿ ಪ್ರಕಾರ ಅಂಕಿತಾ ರಾಯ್ಕರ್‌ ಯಲ್ಲಾಪುರದ ಮಂಚಿಕೇರಿ ನಿವಾಸಿ. ಈಕೆಯ ಜತೆ ಸೇರಿ ಮಾರ್ವಿನ್‌ ಡಿಸೋಜಾ ಕನಿಷ್ಠ 100 ಯುವಕರಿಂದ 1ರಿಂದ 1.50 ಲಕ್ಷ ರೂ. ಸಂಗ್ರಹಿಸಿದ್ದಾರೆ ಎಂದು ಠಾಣೆಗೆ ಬಂದ ಯುವಕರು ಆರೋಪಿಸಿದ್ದಾರೆ.

ಹಾಸನದ ಕೆಲ ಯುವಕರೂ ಮೋಸ ಹೋಗಿದ್ದಾರೆ. ಬ್ರಿಟಿಷ್‌ ಏರ್‌ವೇಸ್‌ನಲ್ಲಿ ಕೆಲಸ ಸಿಗುತ್ತದೆ ಎಂದು ದುಬೈನಲ್ಲಿದ್ದ ಕೆಲಸ ಬಿಟ್ಟು ಬಂದ ಯುವಕರು ಇದ್ದಾರೆ. ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ನೊಂದ ವಂಚಿತ ಯುವಕರ ಬೆಂಬಲಕ್ಕೆ ನಿಂತಿದ್ದಾರೆ.

ಯುವಕ ಶಿರವಾಡ ನಿವಾಸಿಯಾದ ಕಾರಣ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಮಡಿವಾಳ ಸ್ಟೇಶನ್‌ನಲ್ಲಿ ಯುವಕರು ದೂರು ನೀಡಲು ಹೋದರೆ, ವಂಚನೆ ಮಾಡಿದ ಯುವಕ-ಯುವತಿ ಕಾರವಾರದವರು. ಕಾರಣ ಸಂಬಂಧಪಟ್ಟ ಠಾಣೆಯಲ್ಲೇ ದೂರು ದಾಖಲಿಸಿ ಎಂದು ಅಲ್ಲಿನ ಪೊಲೀಸರು ಕಳುಹಿಸಿದ್ದಾಗಿ ನೊಂದ ಯುವಕರು ಹೇಳುತ್ತಿದ್ದಾರೆ.

ಟಾಪ್ ನ್ಯೂಸ್

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

1-bc

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ

1-bb

ಬಜರಂಗದಳದಿಂದ ಐವನ್ ಡಿಸೋಜ ಮನೆಗೆ ಮುತ್ತಿಗೆ ಯತ್ನ

Untitled-1

ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಒಬ್ಬ ಬುದ್ಧಿಮಾಂದ್ಯ: ಸೋಮಶೇಖರ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bhatkala news

ಕಾಲ್ನಡಿಗೆಯಲ್ಲಿ ಪ್ರಪಂಚ ಸುತ್ತಲು ಹೊರಟ ರೋಹನ್ ಅಗರ್‍ವಾಲ್

ghghtyut

ರೈತರಿಗೆ ಗೌರವ ಕೊಡುವ ಕಾರ್ಯವಾಗಲಿ  : ಸಚಿವ ಶಿವರಾಮ ಹೆಬ್ಬಾರ

ದಾಂಡೇಲಿ: ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅತಿಕ್ರಮಣ-ತೆರವುಗೊಳಿಸದ ನಗರ ಸಭೆ

ದಾಂಡೇಲಿ: ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅತಿಕ್ರಮಣ-ತೆರವುಗೊಳಿಸದ ನಗರ ಸಭೆ

Untitled-2

ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ಗೆ ಕವಿ ರಾಜೀವ ಅಜ್ಜೀಬಳ ಆಯ್ಕೆ

ದಾಂಡೇಲಿ ನಗರ ಸಭೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ ಉಲ್ಲಂಘನೆ ಅಕ್ರಂ ಖಾನ್ ಆರೋಪ

ದಾಂಡೇಲಿ ನಗರ ಸಭೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ ಉಲ್ಲಂಘನೆ ಅಕ್ರಂ ಖಾನ್ ಆರೋಪ

MUST WATCH

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

ಹೊಸ ಸೇರ್ಪಡೆ

chitradurga news

ಭೋವಿ ಸಮುದಾಯದ ಅಭಿವೃದಿಗೆ ಬದ್ಧ

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

davanagere news

ಕೆಳಸೇತುವೆ ನಿರ್ಮಿಸಲು ಆಗ್ರಹಿಸಿ 22ರಂದು ಹೆದ್ದಾರಿ ತಡೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.