ಗಾಯತ್ರಿ ಗೆಳೆಯರ ಬಳಗ; “ಬಣ್ಣದ ಚಿತ್ರಗಳೇ ಮಕ್ಕಳ ಚಿತ್ತ ಬದಲಿಸುತ್ತವೆ’

ಬಣ್ಣ, ಬಣ್ಣದ ಪುಸ್ತಕಗಳು ಮಕ್ಕಳ ಮನಸ್ಸಿಗೆ ಮುದನೀಡುತ್ತದೆ

Team Udayavani, Feb 25, 2023, 6:24 PM IST

ಗಾಯತ್ರಿ ಗೆಳೆಯರ ಬಳಗ; “ಬಣ್ಣದ ಚಿತ್ರಗಳೇ ಮಕ್ಕಳ ಚಿತ್ತ ಬದಲಿಸುತ್ತವೆ’

ಶಿರಸಿ: ಬಣ್ಣದ ಚಿತ್ರಗಳೇ ಮಕ್ಕಳ ಚಿತ್ತ ಬದಲಿಸುತ್ತವೆ ಎಂದು ಪ್ರಸಿದ್ಧ ಸಾಹಿತಿ ತಮ್ಮಣ್ಣ ಬೀಗಾರ ಹೇಳಿದರು. ಅವರು ನಗರದಲ್ಲಿ ಗಾಯತ್ರಿ ಗೆಳೆಯರ ಬಳಗ ಗುರುವಾರ ಸಂಜೆ ಆಯೋಜಿಸಿದ್ದ ಸನ್ಮಾನ, ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೇಡದ ಬೇಕಿರುವ ಚಿಂತೆ, ಚಿಂತನೆಯನ್ನು ನಾವು ಮಾಡುತ್ತೇವೆ. ಆದರೆ ಮಕ್ಕಳು ಹಾಗಲ್ಲ. ಅವರ ಮನಸ್ಸು ನಿಷ್ಕಲ್ಮಷವಾಗಿರುತ್ತದೆ.

ನಾವು ಏನನ್ನು ನೀಡುತ್ತೇವೆಯೋ ಅದನ್ನೇ ನೋಡಿ ಕಲಿಯುತ್ತಾರೆ. ನಮ್ಮ ಮಕ್ಕಳು ಉತ್ತಮ ಪ್ರಜೆ ಆಗಬೇಕೆಂದಿದ್ದರೆ ಮೊದಲು ನಾವು ಅವರ ಕೈಗೆ ಬಣ್ಣದ ಚಿತ್ತಾರಗಳ ಚಿತ್ರವನ್ನೇ ನೀಡಬೇಕು. ಅವು ಅವರ ಚಿತ್ತವನ್ನು ಉತ್ತಮವಾಗಿ ಬದಲಿಸುತ್ತವೆ ಎಂದು ವಿವರಿಸಿದರು. ಮಕ್ಕಳ ವ್ಯಕ್ತಿತ್ವ ರೂಪಗೊಳ್ಳುವಿಕೆ ನಿರಂತರ ಕ್ರಿಯೆ. ಪರಿಪೂರ್ಣರು ಯಾರೂ ಇರುವುದಿಲ್ಲ. ಆದರೆ ಬಾಲ್ಯದಲ್ಲಿ ಪರಿಸರದ ಪ್ರಭಾವಕ್ಕೆ ಒಳಗಾಗುತ್ತೇವೆ.

ಮಕ್ಕಳಿಗೆ ಯಾವ ರೀತಿಯ ಪರಿಸರ ಒದಗಿಸಬಹುದು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಮಕ್ಕಳಿಗ ಕೊಡುವ ಪ್ರೀತಿ ಕಟ್ಟಿಕೊಡುವ ಪ್ರೀತಿಯೇ ಉತ್ತಮ ಸಂಸ್ಕಾರವಾಗಲಿದೆ. ಮಕ್ಕಳ ಬಗ್ಗೆ ಹೇಳುವಾಗ ಮೊಬೈಲ್‌ಗೆ ಮಕ್ಕಳು ದಾಸರಾಗುತ್ತಾರೆ ಎನ್ನುತ್ತೇವೆ.

ಆದರೆ ನಾವು ಅದನ್ನು ಬಳಸಬೇಡಿ ಎನ್ನದೇ ಅದರ ಮೇಲಿನ ಪ್ರಭಾವದ ಬಗ್ಗೆ ಗಮನ ಹರಿಸಬೇಕು. ಉತ್ತಮವಾದುದೇ ಅವರು ತೆಗೆದುಕೊಳ್ಳಬೇಕೆಂದು ನಾನು ಅವರಿಗೆ ಮನವರಿಕೆ ಮಾಡಬೇಕು. ಬಣ್ಣ, ಬಣ್ಣದ ಪುಸ್ತಕಗಳು ಮಕ್ಕಳ ಮನಸ್ಸಿಗೆ ಮುದನೀಡುತ್ತದೆ. ಚಿತ್ರಗಳೇ ಮನಸ್ಸಿನಚಿತ್ತಾರ ಬಿಡಿಸಬಲ್ಲವು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತೆ ವಿನುತಾ ಹೆಗಡೆ ಕಾನಗೋಡ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವವರ ಗುರುತಿಸುವಿಕೆ ಕಾರ್ಯವಾಗಬೇಕಿದೆ. ಅಂಥ ಕಾರ್ಯವನ್ನು ಗಾಯತ್ರಿ ಗೆಳೆಯರ ಬಳಗ ನಿರಂತರವಾಗಿ ಮಾಡುತ್ತ ಬಂದಿದ್ದು ಆಸಕ್ತರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದರು.

ಸನ್ಮಾನ ಸ್ವೀಕರಿಸಿದ ಪಂಡಿತ್‌ ಆಸ್ಪತ್ರೆ ಸುಶ್ರೂಷಕಿ ರವಿನಾ ರೊಡ್ರಿಗ್ಸ್‌ ಮಾತನಾಡಿ, ನನ್ನ ಕಾರ್ಯ ಗುರುತಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಡಿಎಂ ಭಟ್‌ ಕುಳವೆ ಸ್ವಾಗತಿಸಿದರು. ಸಾಹಿತಿ ತ್ರಿವೇಣಿ ಹೆಗಡೆ ಪರಿಚಯಿಸಿದರು. ಬಳಗದ ವಿ.ಜಿ.ಗಾಯತ್ರಿ ಉಪಸ್ಥಿತರಿದ್ದರು. ಬಳಿಕ ಯುವ ಗಾಯಕ ಮನು ಹೆಗಡೆ ಬಳಗದಿಂದ ಗಾಯನ ನಡೆಯಿತು. ತಬಲಾದಲ್ಲಿ ರಾಮದಾಸ ಭಟ್ಟ, ಹಾರ್ಮೋನಿಯಂದಲ್ಲಿ ಭರತ್‌ ಹೆಗಡೆ ಹೆಬ್ಬಲಸು, ತಾನಪೂರಾದಲ್ಲಿ ಪ್ರಜ್ವಲ ಹೆಗಡೆ, ಮಂಜಿರಾದಲ್ಲಿ ಅನಂತಮೂರ್ತಿ ಮತ್ತೀಘಟ್ಟಾ ಸಹಕರಿಸಿದರು.

ಟಾಪ್ ನ್ಯೂಸ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

1-weqewqe

Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ

ನಾನು ಸಿಎಂ ಆದರೆ ರಾಜ್ಯದಲ್ಲಿ ಯುಪಿ ಮಾದರಿ ಆಡಳಿತ: ಯತ್ನಾಳ್

ನಾನು ಸಿಎಂ ಆದರೆ ರಾಜ್ಯದಲ್ಲಿ ಯುಪಿ ಮಾದರಿ ಆಡಳಿತ: ಯತ್ನಾಳ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.