ಹಳ್ಳಿಗಳಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
Team Udayavani, Dec 3, 2020, 3:35 PM IST
ಮುಂಡಗೋಡ: ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಳ್ಳಿಗಳಲ್ಲಿ ರಾಜಕೀಯ ಚುಟುವಟಿಕೆಗಳು ಗರಿಗೆದರಿದ್ದು ಎಲ್ಲಿ ನೋಡಿದರಲ್ಲಿ ಚುನಾವಣೆಯದ್ದೇ ಚರ್ಚೆ ಕಂಡು ಬರುತ್ತಿದೆ.
ಎಲ್ಲ ಚುನಾವಣೆಗಳಿಗಿಂತಲು ಗ್ರಾಮ ಪಂಚಾಯತ ಚುನಾವಣೆಗೆ ತೀವ್ರ ಪೈಪೋಟಿ ನಡೆಯುತ್ತದೆ. ಪ್ರತಿಯೊಂದು ವಾರ್ಡ್‌ನಲ್ಲಿ ಅಭ್ಯರ್ಥಿಗಳು ಮತಗಳನ್ನು ಪಡೆಯಲು ನಾನಾರೀತಿಯ ಕಸರತ್ತುಗಳನ್ನು ನಡೆಸುವುದು ಕಂಡುಬರುತ್ತದೆ. ಇದೀಗ ಡಿ.22 ರಂದು ಗ್ರಾಪಂ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಗ್ರಾಪಂ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿನ್ಹೆಗಳು ಇರುವುದಿಲ್ಲ. ಆದರೆ ರಾಜಕೀಯ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಅಭ್ಯರ್ಥಿಗಳು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಅದಕ್ಕಾಗಿ ರಾಜಕೀಯ ಪಕ್ಷದ ಮುಖಂಡರು ದುಂಬಾಲು ಬಿದ್ದಿದ್ದು ಪಕ್ಷದ ಬೆಂಬಲಿತವಾಗಿ ಕಣಕ್ಕಿಳಿಯಲು ಅವಕಾಶ ಕೇಳುತ್ತಿರುವುದು ಇದೀಗ ಜೋರಾಗಿ ಆರಂಭಗೊಂಡಿದೆ.
ಹದಿನಾರು ಪಂಚಾಯತಗಳು: ತಾಲೂಕಿನಲ್ಲಿ ಹುನಗುಂದ, ಇಂದೂರ, ನಂದಿಕಟ್ಟಿ, ಬಾಚಣಕಿ, ಗುಂಜಾವತಿ, ಮೈನಳ್ಳಿ, ನಾಗನೂರ, ಚವಡಳ್ಳಿ, ಸಾಲಗಾಂವ, ಚಿಗಳ್ಳಿ, ಕಾತೂರ, ಓಣಿಕೇರಿ, ಪಾಳಾ, ಕೋಡಂಬಿ, ಮಳಗಿ, ಬೇಡಸಗಾಂವ ಹೀಗೆ ಹದಿನಾರು ಗ್ರಾಪಂಗಳಲ್ಲಿ 29888 ಪುರುಷರು. 27913 ಮಹಿಳೆಯರು ಸೇರಿದಂತೆ ಒಟ್ಟು 57801 ಮತ ದಾರರಿದ್ದಾರೆ ಇನ್ನೂ 91 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮನೆಮನೆ ಪ್ರಚಾರ ಶುರು: ತಾಲೂಕಿನ ಕೆಲವು ಗ್ರಾಮಗಳಲ್ಲಿ ಚುನಾವಣೆಗೆ ಸ್ಪರ್ಧಿಸುವವರು ಕಳೆದ ಎರಡು ದಿನಗಳಿಂದ ಮನೆಮನೆ ಪ್ರಚಾರ ಶುರು ಮಾಡಿದ್ದಾರೆ.
ನಾನು ಪಂಚಾಯತ ಚುನಾವಣೆಗೆ ಸ್ಪರ್ಧಿಸುತ್ತೇನೆ. ನನಗೆ ಮತ ನೀಡುವಂತೆ ವಿನಂತಿಸುತ್ತಿರುವುದು ಕೆಲ ಗ್ರಾಮಗಳಲ್ಲಿ ಕಂಡು ಬಂದಿದೆ. ಅಲ್ಲದೆ ಕೆಲವು ಗ್ರಾಮಗಳಲ್ಲಿ ಯಾರನ್ನು ಕಣಕ್ಕಿಳಿಸೋಣ ಎಂಬುದರ ಕುರಿತು ಸಹ ಮುಖಂಡರು ಚರ್ಚೆ ನಡೆಸುತ್ತಿದ್ದಾರೆ. ದಿನಗಳು ಕಳೆದಂತೆ ಗ್ರಾಪಂ ಚುನಾವಣೆ ಕಾವು ಹೆಚ್ಚಾಗಲಿದ್ದು, ಈ ಬಾರಿ ಗ್ರಾಪಂ ಚುನಾವಣೆಯೂ ವಿಧಾನ ಸಭಾ ಚುನಾವಣೆ ಗಳಿಗಿಂತಲು ಹೆಚ್ಚು ಕುತೂಹಲ ಮೂಡಿಸುತ್ತವೆ ಎಂಬ ಮಾತು ಗ್ರಾಮೀಣ ಭಾಗದ ಜನರಿಂದ ಕೇಳಿ ಬರುತ್ತಿವೆ. ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳುಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದರು. ಈ ಬಾರಿ ಯಾವ ಪಕ್ಷದ ಬೆಂಬಲಿತರು ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸುತ್ತಾರೆ ಎಂಬುದನ್ನು ಕಾದೂ ನೋಡಬೇಕಿದೆ.
ಗ್ರಾಮ ಪಂಚಾಯತ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣೆ ನಡೆಸುವ ಬಗ್ಗೆ ತರಬೇತಿಯನ್ನು ಸಹ ಸಿಬ್ಬಂದಿಗೆ ನೀಡಲಾಗುತ್ತಿದೆ. ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಚುನಾವಣೆ ನಡೆಸಲು ಸಿದ್ಧರಾಗಿದ್ದೇವೆ. -ಶ್ರೀಧರ ಮುಂದಲಮನೆ, ತಹಶೀಲ್ದಾರ್.
-ಚಂದ್ರಶೇಖರಯ್ಯ ಹಿರೇಮಠ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444